ಸ್ಯಾನ್ಫ್ರಾನ್ಸಿಸ್ಕೋ:ಟ್ವಿಟರ್ ಸಿಇಒ ಜಾಕ್ ಡಾರ್ಸೆ ಅವರು, ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆ ನಿಷೇಧದ ನಡೆಯನ್ನು ಸಮರ್ಥಿಸಿಕೊಂಡು, ಇದೇ ಮೊದಲ ಬಾರಿಗೆ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ.
ಕಳೆದ ವಾರ ಅಮೆರಿಕ ಕ್ಯಾಪಿಟಲ್ ಮೇಲಿನ ದಾಳಿಗೆ ಟ್ರಂಪ್ ಅವರು ತಮ್ಮ ಅನುಯಾಯಿಗಳನ್ನು ಪ್ರಚೋದಿಸಿ, ಕೆಟ್ಟ ಸಂದೇಶಗಳನ್ನು ಟ್ವೀಟ್ ಮಾಡುವುದನ್ನು ಮುಂದುವರಿಸಿದ್ದರು. ಸಾರ್ವಜನಿಕ ಸುರಕ್ಷತೆಗೆ ಉಂಟಾಗುವ ಅಪಾಯವನ್ನು ಮನಗಂಡು ಕಂಪನಿಯು ಅವರ ಅಕೌಂಟ್ ಸ್ಥಗಿತಗೊಳಿಸಿದೆ ಎಂದು ಹೇಳಿದರು.