ಕರ್ನಾಟಕ

karnataka

ETV Bharat / business

ಮೋದಿಯ ನೀತಿಗಳು ಭಾರತದ ಆರ್ಥಿಕ ಶಕ್ತಿಯನ್ನು ದೌರ್ಬಲ್ಯಕ್ಕೆ ತಳ್ಳಿದೆ: ರಾಹುಲ್ ಗಾಂಧಿ ಟೀಕೆ

ಭಾರತವು ಇತಿಹಾಸದಲ್ಲಿ ಮೊದಲ ಬಾರಿಗೆ ಆರ್ಥಿಕ ಹಿಂಜರಿತಕ್ಕೆ ಪ್ರವೇಶಿಸಿದೆ. ಮೋದಿಯವರ ಕ್ರಮಗಳು ಭಾರತದ ಬಲವನ್ನು ಅದರ ದೌರ್ಬಲ್ಯಕ್ಕೆ ತಳ್ಳಿದೆ ಎಂದು ರಾಹುಲ್​ ಗಾಂಧಿ ಟ್ವೀಟ್ ಮಾಡಿದ್ದಾರೆ.

Modi- Rahul
ಮೋದಿ- ರಾಹುಲ್​

By

Published : Nov 12, 2020, 5:52 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳಿಂದಾಗಿ ದೇಶವು ಇತಿಹಾಸದಲ್ಲಿ ಮೊದಲ ಬಾರಿಗೆ ಆರ್ಥಿಕ ಹಿಂಜರಿತಕ್ಕೆ ಇಳಿದಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದರು.

ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಭಾರತ ತನ್ನ ಜಿಡಿಪಿಯ ಸಂಕೋಚನದೊಂದಿಗೆ ತಾಂತ್ರಿಕ ಆರ್ಥಿಕ ಹಿಂಜರಿತಕ್ಕೆ ಪ್ರವೇಶಿಸಿದೆ.

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಋಣಾತ್ಮಕವಾಗಿದೆ. ತ್ರೈಮಾಸಿಕದಲ್ಲಿ ಜಿಡಿಪಿ ಶೇ 8.6ರಷ್ಟು ಕುಗ್ಗಿದೆ ಎಂದು ಆರ್‌ಬಿಐನ ಆರ್ಥಿಕ ಚಟುವಟಿಕೆ ಸೂಚ್ಯಂಕ ವರದಲ್ಲಿ ಹೇಳಿತು.

ಭಾರತವು ಇತಿಹಾಸದಲ್ಲಿ ಮೊದಲ ಬಾರಿಗೆ ಆರ್ಥಿಕ ಹಿಂಜರಿತಕ್ಕೆ ಪ್ರವೇಶಿಸಿದೆ. ಮೋದಿಯವರ ಕ್ರಮಗಳು ಭಾರತದ ಬಲವನ್ನು ಅದರ ದೌರ್ಬಲ್ಯಕ್ಕೆ ತಳ್ಳಿದೆ ಎಂದು ರಾಹುಲ್​ ಗಾಂಧಿ ಟ್ವೀಟ್ ಮಾಡಿದ್ದಾರೆ.

ರಾಹುಲ್​ ಗಾಂಧಿ ಟ್ವೀಟ್

ಭಾರತವು 2020-21ರ ಪ್ರಥಮಾರ್ಧದಲ್ಲಿ ತನ್ನ ಇತಿಹಾಸದಲ್ಲಿ ಪ್ರಥಮ ಬಾರಿಗೆ ತಾಂತ್ರಿಕ ಆರ್ಥಿಕ ಹಿಂಜರಿತ ಪ್ರವೇಶಿಸಿದೆ ಹಾಗೂ ಈ ಆರ್ಥಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಎರಡನೇ ಬಾರಿ ಸತತ ಜಿಡಿಪಿ ಕುಸಿತ ಕಾಣಲಿದೆ ಎಂದು ಅಂದಾಜಿಸಲಾಗಿದೆ.

ABOUT THE AUTHOR

...view details