ಮುಂಬೈ:ನಕಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ಹಗರಣಕ್ಕೆ ಸಂಬಂಧಿಸಿದಂತ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ದೇಶಾದ್ಯಂತ ಸುದ್ದಿ ಚಾನೆಲ್‌ಗಳ ಸಾಪ್ತಾಹಿಕ ರೇಟಿಂಗ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ.
ಟಿಆರ್‌ಪಿ ಹಗರಣ: 12 ವಾರಗಳ ರೇಟಿಂಗ್ಸ್ ನಿಲ್ಲಿಸಿದ ಬಾರ್ಕ್! - TRP scam worth
ಸಂಖ್ಯಾಶಾಸ್ತ್ರೀಯ ದೃಢತೆ ಸುಧಾರಿಸಲು ಪ್ರಸ್ತುತ ಅಳತೆಯ ಮಾನದಂಡಗಳನ್ನು ಪರಿಶೀಲಿಸಲು ಮತ್ತು ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ಕೌನ್ಸಿಲ್, 12 ವಾರಗಳವರೆಗೆ ಸಾಪ್ತಾಹಿಕ ರೇಟಿಂಗ್‌ನಲ್ಲಿ ವಿರಾಮ ನೀಡುವುದಾಗಿ ಬಾರ್ಕ್ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಖ್ಯಾಶಾಸ್ತ್ರೀಯ ದೃಢತೆ ಸುಧಾರಿಸಲು ಪ್ರಸ್ತುತ ಅಳತೆಯ ಮಾನದಂಡಗಳನ್ನು ಪರಿಶೀಲಿಸಲು ಮತ್ತು ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ಕೌನ್ಸಿಲ್, 12 ವಾರಗಳವರೆಗೆ ಸಾಪ್ತಾಹಿಕ ರೇಟಿಂಗ್‌ನಲ್ಲಿ ವಿರಾಮ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ತಿಂಗಳ ಆರಂಭದಲ್ಲಿ ಟಿಆರ್‌ಪಿ ಹಗರಣ ಪತ್ತೆ ಹಚ್ಚಿದ ನಗರ ಪೊಲೀಸರು ಕನಿಷ್ಠ ಐದು ಜನರನ್ನು ಬಂಧಿಸಿದ್ದಾರೆ. ಬಂಧನಕ್ಕೊಳಗಾದವರಲ್ಲಿ ನ್ಯೂಸ್ ಚಾನೆಲ್ ನೌಕರರು ಸೇರಿದ್ದಾರೆ. ಅರ್ನಾಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಮೀಡಿಯಾ ಗ್ರೂಪ್ನ ಅಧಿಕಾರಿಗಳನ್ನು ಪೊಲೀಸರು ಪ್ರಕರಣಕ್ಕೆ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ರಿಪಬ್ಲಿಕ್ ಮೀಡಿಯಾ ಗ್ರೂಪ್, ಯಾವುದೇ ತಪ್ಪು ಮಾಡಿಲ್ಲ ಎಂದು ಪೊಲೀಸರ ಆರೋಪವನ್ನು ನಿರಾಕರಿಸಿದೆ.