ಮಂಗಳೂರು: ಕೊಂಕಣ ರೈಲ್ವೆಯ ಮಹತ್ವಾಕಾಂಕ್ಷಿ ಯೋಜನೆ ಸರಕು ಲಾರಿಗಳನ್ನು ಸಾಗಿಸುವ ರೋರೊ ಸೇವೆ ರೈಲ್ವೆ ಇಲಾಖೆಯಲ್ಲೇ ಮೆಚ್ಚುಗೆ ಪಡೆದಿದ್ದು, ಇಂದು ಕರ್ನಾಟಕ ಮತ್ತು ಕೇರಳದ ನಡುವೆ ಪ್ರಾಯೋಗಿಕ ಸಂಚಾರ ನಡೆಯಿತು.
ದಕ್ಷಿಣ ರೈಲ್ವೆ (ಎಸ್‌ಆರ್) ಕೊಂಕಣ ರೈಲ್ವೆ ಕಾರ್ಪೊರೇಷನ್‌ನ ಸಹಯೋಗದೊಂದಿಗೆ ಬುಧವಾರ ಮಂಗಳೂರಿನ ಸುರತ್ಕಲ್ ಮತ್ತು ಕೇರಳದ ಕೋಯಿಕೋಡ್ ನಡುವಿನ ಟ್ರಕ್‌ಗಳನ್ನು ಹೊತ್ತ 'ರೋಲ್ ಆನ್ ರೋಲ್ ಆಫ್' (ರೋರೊ) ಸೇವೆಯ ಟ್ರಯಲ್ ರನ್ ನಡೆಯಿತು. ಕೇರಳ ಪಾಲಕ್ಕಾಡ್ ವಿಭಾಗ, ರೋರೊ ರೈಲು ಸಂಚಾರದ ವಿಡಿಯೋ ತುಣುಕೊಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಕೊಂಕಣ ರೈಲ್ವೆ 1999ರ ಜನವರಿ 26ರಂದು ಗೋವಾದ ಮಡ್ಗಾಂವ್‌ನಿಂದ ಕೋಲಾಡ್, ಮುಂಬೈ ಮತ್ತು ವೆರ್ನಾ ನಡುವೆ 417 ಕಿ.ಮೀ ದೂರದಲ್ಲಿ ರೋರೋ ಸೇವೆ ಪರಿಚಯಿಸಿತ್ತು. 2004ರ ಜೂನ್ 15 ರಿಂದ 721 ಕಿ.ಮೀ ದೂರದ ಮಂಗಳೂರಿನಿಂದ ಸುರತ್ಕಲ್ವರೆಗೆ ವಿಸ್ತರಿಸಿತು. ಒಂದು ರೇಕ್‌ನಿಂದ ಪ್ರಾರಂಭವಾದ ರೋರೊ ಸೇವೆ ಬಳಿಕ ಐದು ರೇಕ್‌ಗಳಿಗೆ ವಿಸ್ತರಣೆಯಾಯಿತು. ಪ್ರಸ್ತುತ ಈ ಸೇವೆಗಳನ್ನು ಬೇಡಿಕೆಯ ಆಧಾರದ ಮೇಲೆ ಒದಗಿಸಲಾಗುತ್ತಿದೆ.
ರೋರೊ ಸೇವೆಯನ್ನು ರೈಲ್ವೆ ಮತ್ತು ಟ್ರಕ್ ಆಪರೇಟರ್‌ಗಳಿಗೆ ಅನುಕೂಲಕರ ಸೇವೆಯಾಗಿದೆ. ಟ್ರಕ್‌ಗಳು ಬಳಸುವ ಗಣನೀಯ ಪ್ರಮಾಣದ ಇಂಧನ ಉಳಿಸುವುದರ ಜೊತೆಗೆ ರೈಲ್ವೆಗೆ ನಿಯಮಿತ ಆದಾಯ ತಂದುಕೊಡಲಿದೆ. ರಸ್ತೆ ಅಪಘಾತದ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಈ ಸೇವೆಯಲ್ಲಿ ಒಂದೇ ಸಮಯದಲ್ಲಿ 50 ಟ್ರಕ್‌ಗಳ ಲೋಡ್ ಸಾಗಿಸಬಹುದು.
ಬಿಆರ್‌ಎನ್ (ಬೋಗಿ ರೈಲ್ ಕ್ಯಾರಿಂಗ್) ವ್ಯಾಗನ್‌ಗಳನ್ನು ಟ್ರಕ್‌ಗಳು ಸಾಗಿಸುವಂತೆ ಮಾರ್ಪಾಡು ಮಾಡಲಾಗಿದೆ. ದಕ್ಷಿಣ ರೈಲ್ವೆಯ ಕೊಂಕಣ ರೈಲ್ವೆಯ ಪ್ರಸ್ತುತ ರೋರೊ ಸೇವೆಯನ್ನು ಕೋಲಾಡ್, ಮುಂಬೈ ಮತ್ತು ಮಂಗಳೂರು ಸಮೀಪದ ಸುರತ್ಕಲ್ ನಡುವೆ ಕೇರಳದ ಸ್ಥಳಗಳಿಗೂ ವಿಸ್ತರಿಸಲು ಕೋರಿದೆ. ಹೀಗಾಗಿ, ಬಿಆರ್‌ಎನ್ ವ್ಯಾಗನ್‌ಗಳಲ್ಲಿ ಟ್ರಕ್‌ಗಳು ಸೇವೆಯ ಕಾರ್ಯಸಾಧ್ಯತೆಯನ್ನು ಪರೀಕ್ಷಿಸಲು ಟ್ರಯಲ್ ರನ್ ನಡೆಸಲಾಯಿತು.
ದಕ್ಷಿಣ ರೈಲ್ವೆಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಈ ರೈಲು ಕುಲಶೇಖರ ಸುರಂಗದ ಮೂಲಕ ಮತ್ತು ವಿದ್ಯುದ್ದೀಕೃತ ಮಾರ್ಗಗಳ ಕೆಳಗೆ ಯಶಸ್ವಿಯಾಗಿ ಹಾದುಹೋಗಿ ಬೆಳಗ್ಗೆ 9.10ಕ್ಕೆ ಮಂಗಳೂರು ಜಂಕ್ಷನ್‌ಗೆ ತಲುಪಿತು. ಸಿಬ್ಬಂದಿ ಬದಲಾವಣೆಯ ನಂತರ ಅದು ಬೆಳಿಗ್ಗೆ 10.30 ಕ್ಕೆ ಜಂಕ್ಷನ್‌ನಿಂದ ಕೋಯಿಕೋಡ್ ಕಡೆಗೆ ಸಂಚರಿಸಿತು.