ಕರ್ನಾಟಕ

karnataka

ETV Bharat / business

ರೈತರ ಧರಣಿ ಮಧ್ಯೆ ಮೋದಿ ಸರ್ಕಾರಕ್ಕೆ ಮತ್ತೊಂದು ಶಾಕ್​: ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕಾರ್ಮಿಕರಿಂದ ಡೇಟ್​ ಫಿಕ್ಸ್​

ಸಂಘಟಿತ ವಲಯ ಅಥವಾ ಅಸಂಘಟಿತ ವಲಯ ಇರಲಿ, ಅವಲಂಬಿತ ಅಥವಾ ಸ್ವತಂತ್ರವಾಗಿರಲಿ ಕಾರ್ಮಿಕ ವಿರೋಧಿ, ದುಡಿಮೆ ವಿರೋಧಿ, ರೈತ ವಿರೋಧಿ ಮತ್ತು ರಾಷ್ಟ್ರ ವಿರೋಧಿ ನೀತಿಗಳ ವಿರುದ್ಧ ಒಗ್ಗಟ್ಟಿನ ಹೋರಾಟವನ್ನು ತೀವ್ರಗೊಳಿಸಲು ಎಲ್ಲ ದುಡಿಯುವ ಜನರು ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡುತ್ತಿದ್ದೇವೆ. 2020ರ ನವೆಂಬರ್ 26ರಂದು ದೇಶಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗುತ್ತಿದೆ ಎಂದು ಕಾರ್ಮಿಕರ ಒಕ್ಕೂಟ ಹೇಳಿದೆ.

Trade unions
ಕಾರ್ಮಿಕ ಒಕ್ಕೂಟ

By

Published : Oct 2, 2020, 8:48 PM IST

ನವದೆಹಲಿ:ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ಹಾಗೂ ರೈತಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಒಕ್ಕೂಟಗಳು ನವೆಂಬರ್ 26ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.

ಇಂದು ನಡೆದ ವರ್ಚ್ಯುವಲ್​​ ಸಮಾವೇಶದಲ್ಲಿ ರಾಷ್ಟ್ರೀಯ ಮಟ್ಟದ ಒತ್ತು ಕಾರ್ಮಿಕ ಒಕ್ಕೂಟಗಳು ದೇಶವ್ಯಾಪಿ ಮುಷ್ಕರ ನಡೆಸುವ ನಿರ್ಧಾರ ತೆಗೆದುಕೊಂಡಿವೆ. ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಸೆವಾ (ಎಸ್​ಇಡಬ್ಲ್ಯುಎ), ಎಐಸಿಸಿಟಿಯು, ಎಲ್‌ಪಿಎಫ್, ಯುಟಿಯುಸಿ ಮತ್ತು ಸ್ವತಂತ್ರ ಒಕ್ಕೂಟಗಳು ಹಾಗೂ ಇತರ ಸಂಘಟನೆಗಳು ಭಾಗಿಯಾಗಲಿವೆ.

ಸಂಘಟಿತ ವಲಯ ಅಥವಾ ಅಸಂಘಟಿತ ವಲಯ ಇರಲಿ, ಅವಲಂಬಿತ ಅಥವಾ ಸ್ವತಂತ್ರವಾಗಿರಲಿ ಕಾರ್ಮಿಕ ವಿರೋಧಿ, ದುಡಿಮೆ ವಿರೋಧಿ, ರೈತ ವಿರೋಧಿ ಮತ್ತು ರಾಷ್ಟ್ರ ವಿರೋಧಿ ನೀತಿಗಳ ವಿರುದ್ಧ ಒಗ್ಗಟ್ಟಿನ ಹೋರಾಟವನ್ನು ತೀವ್ರಗೊಳಿಸಲು ಎಲ್ಲ ದುಡಿಯುವ ಜನರು ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡುತ್ತಿದ್ದೇವೆ. 2020ರ ನವೆಂಬರ್ 26ರಂದು ದೇಶಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗುತ್ತಿದೆ ಎಂದು ಹೇಳಿದೆ.

ಸಾಂಕ್ರಾಮಿಕ ರೋಗದ ಮಧ್ಯೆ ಮೊದಲ ಬಾರಿಗೆ ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ಒಕ್ಕೂಟಗಳು/ ಸಂಘ- ಸಂಸ್ಥೆಗಳು ಜಂಟಿಯಾಗಿ ಆನ್‌ಲೈನ್‌ನಲ್ಲಿ ಕಾರ್ಮಿಕರ ರಾಷ್ಟ್ರೀಯ ಸಮಾವೇಶ ಆಯೋಜಿಸಿದ್ದವು.

ಬೇಡಿಕೆಯ ಕೊರತೆಯಿಂದ ಆರ್ಥಿಕತೆಯು ತೀವ್ರವಾಗಿ ನಿಧಾನ ಆಗುತ್ತವೆಯಾದರೂ, ಸರ್ಕಾರವು ವ್ಯವಹಾರವನ್ನು ಸುಲಭಗೊಳಿಸುವ ಹೆಸರಿನಲ್ಲಿ ತನ್ನ ನೀತಿಗಳನ್ನು ಮುಂದುವರೆಸುತ್ತಿದೆ. ಇದರಿಂದ ವ್ಯಾಪಕ ಬಡತನ ಉಲ್ಬಣಗೊಳ್ಳಲಿದೆ ಮತ್ತು ಬಿಕ್ಕಟ್ಟನ್ನು ಮತ್ತಷ್ಟು ಗಾಢವಾಗಿಸಲಿವೆ ಎಂದು ಒಕ್ಕೂಟಗಳು ಆರೋಪಿಸಿವೆ.

ABOUT THE AUTHOR

...view details