ಕರ್ನಾಟಕ

karnataka

ETV Bharat / business

ತೈಲ ಬೆಲೆ ಏರಿಕೆ, ಷೇರುಪೇಟೆಯಲ್ಲಿ ತಲ್ಲಣ... 400ಕ್ಕೂ ಹೆಚ್ಚು ಅಂಕ ಕುಸಿತ

ಸರ್ಕಾರ ಕೈಗೊಂಡ ಕ್ರಮಗಳ ಹೊರತಾಗಿಯೂ, ಜಾಗತಿಕ ತೈಲ ಬೆಲೆ ಏರಿಕೆ ಹಾಗೂ ಇನ್ನಿತರ ಕಾರಣಗಳಿಂದ ಷೇರುಪೇಟೆ ಕುಸಿತ ಕಾಣುತ್ತಿದೆ. ಹಲವು ಕಂಪನಿಗಳ ಷೇರುಗಳ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

share

By

Published : Sep 17, 2019, 2:21 PM IST

ಮುಂಬೈ: ಹಣಕಾಸು ಇಲಾಖೆ, ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಹೊರತಾಗಿ, ಜಾಗತಿಕ ತೈಲ ಬೆಲೆ ಏರಿಕೆ ಹಾಗೂ ಇನ್ನಿತರ ಕಾರಣಗಳಿಂದ ಷೇರುಪೇಟೆ ಕುಸಿತದ ಹಾದಿ ಹಿಡಿದಿದೆ.

ನಿನ್ನೆಯೂ ಇಳಿಮುಖದತ್ತ ಮುಖ ಮಾಡಿದ್ದ ಷೇರುಪೇಟೆ ಇಂದು ಮತ್ತೆ 400ಕ್ಕೂ ಹೆಚ್ಚು ಅಂಕ ಕುಸಿದು, 37 ಸಾವಿರ ಅಂಕಗಳಿಗಿಂತ ಕೆಳಗಿಳಿದಿದೆ. ಹೆಚ್​ಡಿಎಫ್​ಸಿ, ಐಸಿಐಸಿಐ ಬ್ಯಾಂಕ್​, ಆಕ್ಸಿಸ್​, ಟಾಟಾ ಕನ್ಸಲ್ಟೆನ್ಸಿ ಸರ್ವಿಸ್​, ಲಾರ್ಸನ್​ ಆ್ಯಂಡ್​ ಟರ್ಬೋ ಸೇರಿ ಹಲವು ಕಂಪನಿಗಳ ಷೇರುಗಳ ಬೆಲೆಯಲ್ಲಿ ಇಳಿಕೆ ಕಂಡು ಬಂತು.

ಇನ್ನಿ ನಿಫ್ಟಿ ಸಹ 10900 ಅಂಕಗಳ ಗಡಿಯಿಂದಲೂ ಕೆಳಗಿಳಿಯಿತು. ಆಟೋ ಷೇರುಗಳ ಬೆಲೆ ಶೇ 1.7 ರಷ್ಟು ಕುಸಿತ ಕಂಡಿದೆ. ಬ್ಯಾಂಕಿಂಗ್​, ಹಣಕಾಸು, ಐಟಿ, ಮೀಡಿಯಾ, ಫಾರ್ಮಾ ಷೇರುಗಳ ಬೆಲೆಯೂ ಶೇ 1 ರಷ್ಟು ಕುಸಿತ ಕಂಡವು.

ಟಾಪ್​ 50 ನಷ್ಟ ಅನುಭವಿಸಿದ ಷೇರುಗಳು:

ಟೆಕ್​ ಮಹಿಂದ್ರಾ; ಶೇ. 2.70

ಆಕ್ಸಿಸ್​​ ಬ್ಯಾಂಕ್​: ಶೇ 2.68

ಬಾರ್ತಿ ಏರ್​ಟೆಲ್​: ಶೇ 2.46

ಹೀರೋ ಮೋಟೋ ಕಾರ್ಪ್: ಶೇ 2.25

ಸಿಪ್ಲಾ: ಶೇ 2.02

ABOUT THE AUTHOR

...view details