ಕರ್ನಾಟಕ

karnataka

ETV Bharat / business

ಸಮಸ್ಯೆಗಳ ಇತ್ಯರ್ಥಕ್ಕೆ ಉಗ್ರ ನರಸಿಂಹನಂಥ ಪೀಳಿಗೆ ಸಜ್ಜುಗೊಳಿಸೋಣ: ಉದ್ಯಮಿಗಳಿಗೆ ಆನಂದ್ ಮಹೀಂದ್ರಾ ಕರೆ - ISRO

ನರಸಿಂಹನಂತಹ ಮುಂದಿನ ಪೀಳಿಗೆಯ ಸಮಸ್ಯೆ ಪರಿಹಾರಕಾರರನ್ನು ಹೇಗೆ ಸಜ್ಜುಗೊಳಿಸಬೇಕು ಎಂಬುದನ್ನು ನಮ್ಮ ಕೆಲಸದ ಭಾಗವಾಗಿಸೋಣ. ಈಗಾಗಲೇ ಅಸ್ತಿತ್ವದಲ್ಲಿರುವ ಮಾದರಿಗಳನ್ನು ಮೀರಿ ಯೋಚಿಸೋಣ. ಹೀಗೆ ಮಾಡಿದಾಗ ಮಾತ್ರವೇ ಉತ್ತರಗಳು ಹೊರಹೊಮ್ಮುತ್ತವೆ. ಬಾಹ್ಯಾಕಾಶ ಉದ್ಯಮಶೀಲತೆಗೆ ವೇಗವರ್ಧಕ ರಚಿಸುವುದು ನಮ್ಮ ಅಂತಿಮ ಗುರಿಯಾಗಿದೆ ಎಂದು ಉದ್ಯಮಿ ಆನಂದ್ ಮಹೀಂದ್ರಾ ಕರೆ ನೀಡಿದ್ದಾರೆ.

Anand Mahindra
ಆನಂದ್ ಮಹೀಂದ್ರಾ

By

Published : Aug 20, 2020, 8:51 PM IST

ಹೈದರಾಬಾದ್: ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡಿದ್ದರ ಬಗ್ಗೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಪುರಾಣದ ವಿಷ್ಣುವಿನ ನಾಲ್ಕನೇ ಅವತಾರವಾದ ಉಗ್ರ ನರಸಿಂಹನಂತೆ ವರ್ತಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಯೋಜಿಸಿದ ವೆಬ್‌ನಾರ್‌ನಲ್ಲಿ ‘ಅನ್ಲಾಕಿಂಗ್ ಇಂಡಿಯಾ ಪೊಟೆನ್ಷಿಯಲ್ ಇನ್ ಸ್ಪೇಸ್ ಸೆಕ್ಟರ್’ ಕುರಿತು ಮಾತನಾಡಿದ ಅವರು, ಎರಡು ವಿಭಿನ್ನ ಭಾಗಗಳು ಬಹಳ ಅನಿರೀಕ್ಷಿತವಾದವು. ನಾನು ಲಾರ್ಡ್​ ವಿಷ್ಣು ಅವತಾರದ ನರಸಿಂಹನಲ್ಲಿ ಅರ್ಧ ಮನುಷ್ಯ, ಅರ್ಧ ಸಿಂಹದ ಬಗ್ಗೆ ಯೋಚಿಸುತ್ತಿದ್ದೇನೆ. ಮಾನವನ ಜ್ಞಾನ ಮತ್ತು ಬುದ್ಧಿಶಕ್ತಿಯನ್ನು ನಿರ್ಭಯತೆ, ವೇಗ, ಶಕ್ತಿ ಮತ್ತು ಸಿಂಹದಲ್ಲಿನ ಹತ್ಯೆಯ ಪ್ರವೃತ್ತಿಯೊಂದಿಗೆ ಸಂಯೋಜಿಸುವ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಪರಿಸರ ವ್ಯವಸ್ಥೆಯನ್ನು ದೃಶ್ಯೀಕರಿಸುತ್ತೇನೆ ಎಂದರು.

ಶಸ್ತ್ರಾಸ್ತ್ರಗಳಿಗೆ ಅವೇಧನಾದ, ಯಾವುದೇ ಜೀವಿಗಳಿಂದ ಕೊಲ್ಲಲು ಸಾಧ್ಯವಾಗದ ಹಿರಣ್ಯಕಶ್ಯಪು​ ಎಂಬ ರಾಕ್ಷಸನನ್ನು ಸಂಹರಿಸಲು ನರಸಿಂಹನು ಹೇಗೆ ಭಿನ್ನವಾಗಿ ಯೋಚಿಸಿದ್ದ. ಅತ್ತ ಹಗಲೂ ಅಲ್ಲದ, ಇತ್ತ ಇರಳು ಇಲ್ಲದ, ಮನೆ ಒಳಗೂ ಹೊರಗೂ ಕೊಲ್ಲದೆ ಹೊಸ್ತಿಲ ಮೇಲೆ ಸಂಹಾರ ಮಾಡಿದಂತೆ ಬಾಹ್ಯಾಕಾಶ ಕ್ಷೇತ್ರದಲ್ಲೂ ಭಿನ್ನವಾಗಿ ಚಿಂತಿಸಬೇಕಿದೆ ಎಂದು ರೂಪಕವಾಗಿ ಹೇಳಿದರು.

ಬಾಹ್ಯಾಕಾಶ ವಲಯದ ಮಾರ್ಗಗಳ ಬಗ್ಗೆ ನಾವು ಉದ್ದೇಶಪೂರ್ವಕವಾಗಿ ಯೋಚಿಸುವಾಗ (ನರಸಿಂಹನು ಹಿರಣ್ಯಕಶ್ಯಪನನ್ನು ಎಲ್ಲಾ ವೈಚಿತ್ರ್ಯಗಳ ಹೊರತಾಗಿಯೂ ಹೇಗೆ ಕೊಂದನು) ಈ ಕಥೆಯನ್ನು ಮನಸ್ಸಿನಲ್ಲಿ ಟ್ಟುಕೊಳ್ಳಬೇಕೆಂದು ನಾನು ಎಲ್ಲರನ್ನೂ ಒತ್ತಾಯಿಸುತ್ತೇನೆ. ಹಿಂದೆಂದೂ ಅಸ್ತಿತ್ವದಲ್ಲಿರದ ರಚನೆ ಮತ್ತು ವ್ಯವಸ್ಥೆಗಳನ್ನು ಸ್ಥಾಪಿಸುವ ಬಗ್ಗೆ ಯೋಚಿಸಿ. ನೀವು ಸಾರ್ವಜನಿಕರಾಗಲಿ ಅಥವಾ ಖಾಸಗಿ ಉದ್ಯಮಿಗಾರರೇ ಆಗಿರಿ. ನಿಮ್ಮ ಗುರಿಯನ್ನು ಸಾಧಿಸುವ ಬಗ್ಗೆ ವಿಭಿನ್ನವಾಗಿ ಯೋಚಿಸಿ ಎಂದು ಮಹೀಂದ್ರಾ ಕರೆ ನೀಡಿದರು.

ನರಸಿಂಹನಂತಹ ಮುಂದಿನ ಪೀಳಿಗೆಯ ಸಮಸ್ಯೆ ಪರಿಹಾರಕಾರರನ್ನು ಹೇಗೆ ಸಜ್ಜುಗೊಳಿಸಬೇಕು ಎಂಬುದರ ಕುರಿತು ನಮ್ಮ ಕೆಲಸದ ಭಾಗವಾಗಿಸೋಣ. ಈಗಾಗಲೇ ಅಸ್ತಿತ್ವದಲ್ಲಿರುವ ಮಾದರಿಗಳನ್ನು ಮೀರಿ ಯೋಚಿಸೋಣ. ಹೀಗೆ ಮಾಡಿದಾಗ ಮಾತ್ರವೇ ಉತ್ತರಗಳು ಹೊರಹೊಮ್ಮುತ್ತವೆ. ಬಾಹ್ಯಾಕಾಶ ಉದ್ಯಮಶೀಲತೆಗೆ ವೇಗವರ್ಧಕ ರಚಿಸುವುದು ನಮ್ಮ ಅಂತಿಮ ಗುರಿಯಾಗಿದೆ ಎಂದು ಹೇಳಿದರು.

ABOUT THE AUTHOR

...view details