ನವದೆಹಲಿ:ಪ್ರಸಕ್ತ ಆರ್ಥಿಕ ವರ್ಷದ ಎರಡನೇ ಅವಧಿಯಲ್ಲಿ ಆರ್ಥಿಕತೆಯು ಚೇತರಿಸಿಕೊಳ್ಳಲಿದೆ. ಗ್ರಾಹಕ ಅನುತ್ಪಾದಕತೆ ಮತ್ತು ಬ್ಯಾಂಕ್ಗ ಸಾಲ ನೀಡಿಕೆಯು ಏರಿಕೆ ಆಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ದೆಹಲಿಯಲ್ಲಿ ಸಾರ್ವಜನಿಕ, ಖಾಸಗಿ ಬ್ಯಾಂಕ್ಗಳ ಹಾಗೂ ಹಣಕಾಸುಯೇತರ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಯಾವುದೇ ಹಣಕಾಸು ಸಂಸ್ಥೆಗಳು ನಗದು ದ್ರವ್ಯತೆಯ ಅಭಾವ ಎದುರಿಸುತ್ತಿಲ್ಲ. ಸಭೆಯಲ್ಲಿ ಒಳ್ಳೆಯ ಮತ್ತು ಸಕಾರಾತ್ಮಕ ವಿಷಯಗಳನ್ನು ಕೇಳಿದ್ದೇನೆ ಎಂದು ಹೇಳಿದರು.