ನವದೆಹಲಿ: ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್ಬಿಎಫ್ಸಿ) ಬಿಕ್ಕಟ್ಟಿನಿಂದಾಗಿ ಅನುಭೋಗದ ಕುಸಿತ ಕಂಡುಬಂದಿದೆ ಎಂದು ಹೇಳಲಾಗುವುದಿಲ್ಲ ಎಂದು ಜಾಗತಿಕ ದಲ್ಲಾಳಿ ಸಂಸ್ಥೆ ಗೋಲ್ಡ್ಮನ್ ಸ್ಯಾಚ್ಸ್ ಅಭಿಪ್ರಾಯಪಟ್ಟಿದೆ.
ಉಪಭೋಗದಲ್ಲಿನ ಇಳಿಕೆಯೇ ನಿಧಾನಗತಿಯ ಆರ್ಥಿಕತೆಗೆ ದೊಡ್ಡ ಸವಲಾಗಿ ಪರಿಣಮಿಸಿದೆ. ಇದು ಎನ್ಬಿಎಫ್ಸಿ ಬಿಕ್ಕಟ್ಟುಗಳಿಂದ ಉದ್ಭವಿಸಿದೆ ಎಂದು ಹೇಳಲು ಆಗುವುದಿಲ್ಲ. ಎನ್ಬಿಎಫ್ಸಿಯ ಸಮಸ್ಯೆಗಳು ತಲೆದೂರಿದ್ದು, 2018ರ ಸೆಪ್ಟಂಬರ್ ತಿಂಗಳಲ್ಲಿ. ಇದಾದ ಬಳಿಕವಷ್ಟೇ ಉಪಭೋಗದಲ್ಲಿ ಕುಸಿತ ಕಾಣಲು ಶುರುವಾಯಿತು ಎಂದು ಗೋಲ್ಡ್ಮನ್ ಸ್ಯಾಚ್ಸ್ ಸಂಸ್ಥೆಯ ಮುಖ್ಯ ಆರ್ಥಿಕ ತಜ್ಞೆ ಪ್ರಾಚಿ ಮಿಶ್ರಾ ಅವರು ವಿಶ್ಲೇಷಿಸಿದ್ದಾರೆ.