ಕರ್ನಾಟಕ

karnataka

By

Published : Feb 29, 2020, 5:03 PM IST

ETV Bharat / business

5 ಟ್ರಿಲಿಯನ್ ಡಾಲರ್ ಕನಸು ಈಡೇರುತ್ತೆ... ಮೋದಿ, ನಾವು ಈ ಒಂದು ಕೆಲಸ ಮಾಡ್ಬೇಕು: ರತನ್ ಟಾಟಾ

ಜನಸಂಖ್ಯೆಯ ಸ್ಥಿರೀಕರಣ ಸಾಧಿಸಲು ಮತ್ತು 2024ರ ವೇಳೆಗೆ 5 ಟ್ರಿಲಿಯನ್ ಡಾಲರ್​ ಆರ್ಥಿಕತೆ ಕನಸು ನನಸಾಗಿಸಲು ನಾವು ನಮ್ಮ ಬದ್ಧತೆಗಳನ್ನು ಪೂರೈಸಬೇಕಿದೆ. ನಾವು ಭವಿಷ್ಯದ ಯುವ ನಾಗರಿಕರನ್ನು ಕೇಂದ್ರೀಕರಿಸಿ ಹೂಡಿಕೆ ಮಾಡಬೇಕು ಎಂದು ರತನ್ ಟಾಟಾ ಅವರು ಪರೋಕ್ಷವಾಗಿ ಉದ್ಯಮಿಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಕಿವಿಮಾತು ಹೇಳಿದರು.

Ratan Tata
ರತನ್ ಟಾಟಾ

ನವದೆಹಲಿ: ಶಿಕ್ಷಣದತ್ತ ಗಮನ ಹರಿಸಿ ಲಕ್ಷಾಂತರ ಭಾರತೀಯ ಯುವಕರ ಯೋಗಕ್ಷೇಮವಾಗಿದ್ದರೆ ಅವರೇ 2024ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಸಾಕಾರಗೊಳಿಸಿ ದೇಶದ ಭವಿಷ್ಯಕ್ಕೆ ಚಾಲನಾ ಶಕ್ತಿಯಾಗುವರು ಎಂದು ಉದ್ಯಮಿ ದಿಗ್ಗಜ ರತನ್ ಟಾಟಾ ಹೇಳಿದರು.

ಪಾಪ್ಯುಲೇಷನ್ ಫೌಂಡೇಶನ್ ಆಫ್ ಇಂಡಿಯಾದ 50ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 370 ದಶಲಕ್ಷಕ್ಕೂ ಹೆಚ್ಚು ಯುವಕರನ್ನು ಹೊಂದಿರುವ ಭಾರತ, ಯುವಪೀಳಿಗೆಯೇ ಭವಿಷ್ಯದ ಚಾಲನ ಶಕ್ತಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಜನಸಂಖ್ಯೆಯ ಸ್ಥಿರೀಕರಣ ಸಾಧಿಸಲು ಮತ್ತು 2024ರ ವೇಳೆಗೆ 5 ಟ್ರಿಲಿಯನ್ ಡಾಲರ್​ ಆರ್ಥಿಕತೆ ಕನಸು ನನಸಾಗಿಸಲು ನಾವು ನಮ್ಮ ಬದ್ಧತೆಗಳನ್ನು ಪೂರೈಸಬೇಕಿದೆ. ನಾವು ಭವಿಷ್ಯದ ಯುವ ನಾಗರಿಕರನ್ನು ಕೇಂದ್ರೀಕರಿಸಿ ಹೂಡಿಕೆ ಮಾಡಬೇಕು ಎಂದು ಪರೋಕ್ಷವಾಗಿ ಉದ್ಯಮಿಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಕಿವಿಮಾತು ಹೇಳಿದರು.

ಪ್ರತಿ ಕ್ಷೇತ್ರದಲ್ಲೂ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನಿರಾಕರಿಸುವ ಲಿಂಗ ತಾರತಮ್ಯದ ಸಮಸ್ಯೆಯನ್ನು ಬಗೆಹರಿಸುವುದರ ಜೊತೆಗೆ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದು ರತನ್ ಟಾಟಾ ಒತ್ತಿ ಹೇಳಿದರು.

ABOUT THE AUTHOR

...view details