ನವದೆಹಲಿ:ರಾಷ್ಟ್ರಾದ್ಯಂತ 21 ದಿನಗಳವರೆಗೆ ಲಾಕ್ಡೌನ್ ಜಾರಿಯಲಿದ್ದು, ಈ ವೇಳೆಯಲ್ಲಿ ಪ್ರಿಪೇಯ್ಡ್ ಸಿಮ್ ಬಳಕೆದಾರರ ಸೇವಾ ವ್ಯಾಲಿಡಿಟಿ ಅವಧಿ ಮುಂದೂಡುವಂತೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕೋರಿದೆ.
ಸಿಮ್ ಬಳಕೆದಾರರ ವ್ಯಾಲಿಡಿಟಿ ಅವಧಿ ವಿಸ್ತರಣೆಗೆ ಟ್ರಾಯ್ ಸೂಚನೆ - ಟ್ರಾಯ್ ಸುದ್ದಿ
ಪ್ರಿಪೇಯ್ಡ್ ಸೇವೆಯಲ್ಲಿ ತೊಂದರೆ ಆಗದಂತೆ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಟ್ರಾಯ್ ಟೆಲಿಕಾಂ ಆಪರೇಟರ್ಗಳನ್ನು ಮನವಿ ಮಾಡಿದೆ. ಇಂತಹ ಬಿಕ್ಕಟ್ಟಿನ ಲಾಕ್ಡೌನ್ ಸಂದರ್ಭದಲ್ಲಿ ಪ್ರಿಪೇಯ್ಡ್ ಬಳಕೆದಾರರಿಗೆ ಪಾವತಿ, ರಿಚಾರ್ಜ್ ವೋಚರ್ ಲಭ್ಯತೆ ಹಾಗೂ ಸೇವಾ ಅವಧಿಯನ್ನು ವಿಸ್ತರಿಸುವ ಮೂಲಕ ತಡೆರಹಿತ ಸೇವೆ ನೀಡಬೇಕು ಎಂದು ಆದೇಶಿಸಿದೆ.
ಲಾಕ್ಡೌನ್ ಸಂದರ್ಭದಲ್ಲಿ ಯಾವುದೇ ಬಳಕೆದಾರ ದೂರ ಸಂಪರ್ಕ ಸೇವೆಯಿಂದ ವಂಚಿತರಾಗದಂತೆ ಕ್ರಮವಹಿಸಬೇಕು. ಪ್ರಿಪೇಯ್ಡ್ ಸೇವೆಯಲ್ಲಿ ತೊಂದರೆ ಆಗದಂತೆ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಟ್ರಾಯ್ ಟೆಲಿಕಾಂ ಆಪರೇಟರ್ಗಳನ್ನು ಮನವಿ ಮಾಡಿದೆ. ಇಂತಹ ಬಿಕ್ಕಟ್ಟಿನ ಲಾಕ್ಡೌನ್ ಸಂದರ್ಭದಲ್ಲಿ ಪ್ರಿಪೇಯ್ಡ್ ಬಳಕೆದಾರರಿಗೆ ಪಾವತಿ, ರಿಚಾರ್ಜ್ ವೋಚರ್ ಲಭ್ಯತೆ ಹಾಗೂ ಸೇವಾ ಅವಧಿಯನ್ನು ವಿಸ್ತರಿಸುವ ಮೂಲಕ ತಡೆರಹಿತ ಸೇವೆ ನೀಡಬೇಕು ಎಂದು ಆದೇಶಿಸಿದೆ.
ದೂರ ಸಂಪರ್ಕ ಸೇವೆಯನ್ನು ಅಗತ್ಯ ಸೇವೆಗಳ ಸಾಲಿಗೆ ಸೇರಿಸಲಾಗಿದೆ. ಆದರೆ, ಟೆಲಿಕಾಂ ಕಂಪನಿಗಳು ಗ್ರಾಹಕ ಸೇವಾ ಕೇಂದ್ರಗಳು, ಮಾರಾಟ ಕೇಂದ್ರಗಳಲ್ಲಿ ಸಿಬ್ಬಂದಿ ಸೇವೆಗೆ ತೊಂದರೆ ಉಂಟಾಗಿದೆ.