ನವದೆಹಲಿ: ರಿಟರ್ನ್ ಸಲ್ಲಿಸುವ ಸಮಯದಲ್ಲಿ ಓರ್ವ ವ್ಯಕ್ತಿಯು ತೆರಿಗೆ ದರ ಆಯ್ಕೆ ಮಾಡುವ ಹಕ್ಕನ್ನು ಹೊಂದಿರುತ್ತಾನೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಹೇಳಿದೆ. ಆದರೆ, ಮೂಲದಲ್ಲಿ ಕಡಿತ ತೆರಿಗೆ ಪಡೆಯುವ ಮೊದಲು ಅವನ / ಅವಳ ಉದ್ಯೋಗದಾತರಿಗೆ ತಿಳಿಸಬಹುದು.
ಹಣಕಾಸು ಕಾಯ್ದೆ 2020-21ರಲ್ಲಿ ಪರಿಚಯಿಸಲಾದ ಹೊಸ ವಿಭಾಗ 115 ಬಿಎಸಿಯ ಸ್ಪಷ್ಟೀಕರಣದಲ್ಲಿ, ಸಿಬಿಡಿಟಿ ಲಾಭ ಮತ್ತು ವ್ಯಾಪಾರ ಮತ್ತು ವೃತ್ತಿಯಿಂದ ಪಡೆದ ಲಾಭಗಳನ್ನು ಹೊರತುಪಡಿಸಿ ಆದಾಯವನ್ನು ಹೊಂದಿರುವ ಉದ್ಯೋಗಿ ಅವನು/ ಅವಳು ಕಡಿಮೆ ದರಕ್ಕೆ ಹೋಗಲು ಬಯಸುತ್ತೀರಾ ಎಂದು ಘೋಷಿಸಬಹುದು.
ಈ ವರ್ಷದ ಬಜೆಟ್‌ನಲ್ಲಿ ಒದಗಿಸಿದ ವಿನಾಯಿತಿಯಂತೆ ತೆರಿಗೆದಾರರ ದರವನ್ನು ಉದ್ಯೋಗದಾರರು ಬಯಸಿದವರ ಅನುಗುಣವಾಗಿ ಟಿಡಿಎಸ್ ಕಡಿತಗೊಳಿಸುತ್ತಾರೆ.
ಹೊಸ ಆಯ್ಕೆಯನ್ನು ಉದ್ಯೋಗಿ ಬಳಸದಿದ್ದರೆ ಅವನು /ಅವಳು ಐಟಿ ಕಾಯ್ದೆಯಲ್ಲಿರುವ ಹಳೆಯ ನಿಯಮಗಳಲ್ಲಿ ತೆರಿಗೆ ವಿಧಿಸುವುದು ಮುಂದುವರಿಯುತ್ತದೆ.
ತೆರಿಗೆ ಇಲಾಖೆಯು ತೆರಿಗೆದಾರನಿಗೆ ರಿಟರ್ನ್ಸ್ ಸಲ್ಲಿಸುವ ಸಮಯದಲ್ಲಿ ಆದ್ಯತೆಯ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಲು ಅವಕಾಶ ನೀಡಿದೆ. ಆದರೆ, ವ್ಯವಹಾರ ಅಥವಾ ವೃತ್ತಿಪರ ಆದಾಯ ಹೊಂದಿರುವ ವ್ಯಕ್ತಿಗೆ, ಕಡಿಮೆ ತೆರಿಗೆಯ ಆಯ್ಕೆಯನ್ನು ಒಮ್ಮೆ ನಿರ್ದಿಷ್ಟಪಡಿಸಿದ ನಂತರ ಅನ್ವಯವಾಗುತ್ತದೆ. ಬದಲಾವಣೆಯ ಆಧಾರದ ಮೇಲೆ ಇಲಾಖೆಗೆ ಸರಿಯನಿಸಿದರೇ ಮಾತ್ರ ಬದಲಾಯಿಸಬಹುದು.
2020-21ರ ಬಜೆಟ್‌ನಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ತೆರಿಗೆದಾರರಿಗೆ ಎಲ್ಲಾ ಕಡಿತಗಳನ್ನು ತ್ಯಜಿಸಲು ಸಿದ್ಧರಿದ್ದರೆ ಕಡಿಮೆ ದರದಲ್ಲಿ ತೆರಿಗೆ ಪಾವತಿಸುವ ಆಯ್ಕೆ ನೀಡಿದ್ದರು. ಈ ಕಡಿಮೆ ದರಗಳ ಅಡಿಯಲ್ಲಿ ಆದಾಯ ತೆರಿಗೆ ದರವನ್ನು ಶೇ 10 ರಿಂದ ಶೇ 25ಕ್ಕೆ ಏರಿಸುವ ವಿವಿಧ ಆದಾಯ ನಿಯಮಗಳನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಆದಾಯದಲ್ಲಿ ಹೆಚ್ಚುವರಿ ಶುಲ್ಕದೊಂದಿಗೆ ಹಳೆಯ ತೆರಿಗೆ ನಿಯಮ ದರಗಳನ್ನು ಶೇ 5ರಿಂದ ಶೇ 30 ರವರೆಗೆ ಉಳಿಸಿಕೊಂಡಿದ್ದರು. 'ಹೊಸ ನಿಯಮವು ತೆರಿಗೆದಾರರಿಗೆ ಕಡ್ಡಾಯವಲ್ಲ. ಅದು ಆಯ್ಕೆಯಾಗಿದ್ದು, ತೆರಿಗೆದಾರರು ಬಯಸಿದರೆ ಹಳೆಯ ನಿಯಮವನ್ನೇ ಆಯ್ಕೆ ಮಾಡಿಕೊಳ್ಳಬಹದು' ಎಂದಿದ್ದರು.