ನವದೆಹಲಿ:ಕೇಂದ್ರ ಆದಾಯ ತೆರಿಗೆ ಇಲಾಖೆ 2018-19ನೇ ಸಾಲಿನ ಹಣಕಾಸು ವರ್ಷದಲ್ಲಿ 37,946 ಕೋಟಿ ರೂ. ಮೊತ್ತದ ತೆರಿಗೆ ವಂಚನೆ ಪತ್ತೆ ಹಚ್ಚಿದೆ.
ಪ್ರಸಕ್ತ ವಿತ್ತೀಯ ವರ್ಷದ ಏಪ್ರಿಲ್- ಜೂನ್ ಅವಧಿಯಲ್ಲಿ ತೆರಿಗೆ ವಂಚಕರು ಬೊಕ್ಕಸಕ್ಕೆ ₹ 6,520 ಕೋಟಿಯಷ್ಟು ನಷ್ಟ ಉಂಟುಮಾಡಿದ್ದಾರೆ. 2018-19ರಲ್ಲಿ ₹ 1,289 ಕೋಟಿ ಮೌಲ್ಯದ ನಕಲಿ ಇನ್ ವಾಯ್ಸ್ಗಳನ್ನು ಪತ್ತೆ ಹಚ್ಚಲಾಗಿದೆ. ಅದೇ ರೀತಿ, ಈ ವರ್ಷದ ಏಪ್ರಿಲ್ - ಜೂನ್ ನಡುವೆ ₹ 2,805 ಕೋಟಿ ಮೊತ್ತದ ಫೇಕ್ ಇನ್ವಾಯ್ಸ್ ಲಭ್ಯವಾಗಿವೆ ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.