ಕರ್ನಾಟಕ

karnataka

ETV Bharat / business

ತೈಲ ಬೆಲೆ ಇಳಿಕೆ ಮಧ್ಯೆ ಮತ್ತೆ ಪೆಟ್ರೋಲ್​, ಡೀಸೆಲ್​ ಮೇಲೆ 3 - 6 ರೂ. ಸುಂಕ ಏರಿಕೆಗೆ ಕೇಂದ್ರದ ಚಿಂತನೆ! - Taxes on Fuel for mobilise resources to economic recovery packages

ಕೋವಿಡ್ -19 ಸಂಬಂಧಿತ ಅಡೆ - ತಡೆ ಎದುರಿಸಲು ಹಾಗೂ ಹೆಚ್ಚುವರಿ ಆರ್ಥಿಕ ಚೇತರಿಕೆ ಪ್ಯಾಕೇಜ್‌ಗಳಿಗೆ ಹಣಕಾಸಿನ ನೆರವು ಒದಗಿಸಲು ಕೇಂದ್ರಕ್ಕೆ ವ್ಯಾಪಕ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಅಗತ್ಯವಾಗಿದ್ದು, ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕದಲ್ಲಿ 3-6 ರೂ.ಗಳಷ್ಟು ಹೆಚ್ಚಳ ಆಗಬಹುದ ಎಂದು ಮೂಲಗಳು ತಿಳಿಸಿವೆ.

Fuel
ಇಂಧನ

By

Published : Oct 26, 2020, 3:49 PM IST

ನವದೆಹಲಿ:ಕೋವಿಡ್ -19 ಸಾಂಕ್ರಾಮಿಕ ಮತ್ತು ಆ ನಂತರದ ಆದಾಯದ ಮೇಲಿನ ಒತ್ತಡದಿಂದ ಉಂಟಾದ ಆರ್ಥಿಕ ಬಿಕ್ಕಟ್ಟು ಸರಿದೂಗಿಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸಲು ಕೇಂದ್ರ ಮತ್ತೊಮ್ಮೆ ಚಿಂತಿಸುತ್ತಿದೆ.

ಕೋವಿಡ್ -19 ಸಂಬಂಧಿತ ಅಡೆತಡೆ ಎದುರಿಸಲು ಹಾಗೂ ಹೆಚ್ಚುವರಿ ಆರ್ಥಿಕ ಚೇತರಿಕೆ ಪ್ಯಾಕೇಜ್‌ಗಳಿಗೆ ಹಣಕಾಸಿನ ನೆರವು ಒದಗಿಸಲು ಕೇಂದ್ರಕ್ಕೆ ವ್ಯಾಪಕ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಅಗತ್ಯತೆ ಇದ್ದು, ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕದಲ್ಲಿ 3 - 6 ರೂ.ನಷ್ಟು ಹೆಚ್ಚಳ ಆಗಬಹುದ ಎಂದು ಮೂಲಗಳು ತಿಳಿಸಿವೆ.

3-6 ರೂ.ನಷ್ಟು ಸುಂಕ ಏರಿಕೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಆದಾಯವಾಗಿ ಒಂದು ವರ್ಷದಲ್ಲಿ 60,000 ರೂ. ಬರಲಿದೆ. ಈ ಎರಡೂ ತೈಲ ಉತ್ಪನ್ನಗಳ ಸುಂಕ ರಚನೆಯ ಆಂತರಿಕ ಪರೀಕ್ಷೆಗಳು ನಡೆಯುತ್ತಿದೆ. ಸುಂಕ ಪ್ರಕಟಣೆಯ ನಿಖರ ಸಮಯ ಶೀಘ್ರದಲ್ಲೇ ಅಂತಿಮವಾಗಬಹುದು.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಹೆಚ್ಚಳವು, ಈ ಎರಡು ಉತ್ಪನ್ನಗಳ ಚಿಲ್ಲರೆ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣ ಆಗಬಾರದು ಎಂದು ಸರ್ಕಾರ ಬಯಸಿದೆ. ಮಾರಾಟದಲ್ಲಿ ದರ ಏರಿಕೆ ಸಂಭವಿಸಿದರೇ ಗ್ರಾಹಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬೆಲೆ ಹೆಚ್ಚಳವು ಆರ್ಥಿಕತೆ ಮೇಲೆ ಹಣದುಬ್ಬರ ಪರಿಣಾಮಗಳು ಬೀರಬಹುದು ಎಂಬ ಚಿಂತೆ ಸರ್ಕಾರದ್ದು.

ಜಾಗತಿಕ ಕಚ್ಚಾ ಬೆಲೆಗಳು ಇಳಿಕೆ ಆಗಿದ್ದರೂ ಮತ್ತು ಒಂದು ತಿಂಗಳ ಹಿಂದೆ ಬ್ಯಾರೆಲ್‌ಗೆ ಸುಮಾರು 40 ಡಾಲರ್​ನಿಂದ 45 ಡಾಲರ್​ಗೆ ತಲುಪಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಕಳೆದ ಒಂದು ತಿಂಗಳಿನಿಂದ ಪರಿಷ್ಕರಿಸದ ಕಾರಣ, ಪ್ರಸ್ತುತ ಸಂದರ್ಭದಲ್ಲಿ ಪೆಟ್ರೋಲ್ ಅಬಕಾರಿ ಸುಂಕ ಹೆಚ್ಚಳ ಸೂಕ್ತವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಮಾರ್ಚ್​ನಲ್ಲಿ ಪೆಟ್ರೋಲ್​ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವಾಗಿ ಲೀಟರ್​ ಮೇಲೆ 18 ರೂ. ಮತ್ತು ಡೀಸೆಲ್​ಗೆ 12 ರೂ, ಹೆಚ್ಚಿಸಲು ಸರ್ಕಾರವು ಸಂಸತ್ತಿನ ಅನುಮೋದನೆ ಪಡೆದಿತ್ತು. ಆದರೆ, ಆಗ ತೆರಿಗೆ ಬದಲಾಯಿಸಲಿಲ್ಲ. ಮೇ ತಿಂಗಳಲ್ಲಿ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವಾಗಿ ಪೆಟ್ರೋಲ್ ಮೇಲೆ 12 ರೂ. ಮತ್ತು ಡೀಸೆಲ್ ಮೇಲೆ 9 ರೂ. ಹೆಚ್ಚಿಸಿತ್ತು. ಉಳಿದ 6 ರೂ. ಮತ್ತು 3 ರೂ. ಎರಡೂ ತೈಲಗಳ ಮೇಲೆ ಹೆಚ್ಚಿಸಲು ಸರ್ಕಾರಕ್ಕೆ ಅವಕಾಶವಿದೆ. ಹೀಗಾಗಿ, ಈ ಆಯ್ಕೆಯನ್ನು ಈಗ ಪರಿಶೀಲಿಸಲಾಗುತ್ತಿದೆ.

ಸುಂಕದ ಏರಿಕೆಯು ಚಿಲ್ಲರೆ ಮಾರಾಟದಲ್ಲಿ ಹೆಚ್ಚು ಪರಿಣಾಮ ಬೀರಬಾರದು. ಚಿಲ್ಲರೆ ಬೆಲೆಗಳು ಬದಲಾಗದೆಯೂ ಅಥವಾ ಸ್ವಲ್ಪಮಟ್ಟಿಗೆ ಹೆಚ್ಚಳವು ಆಗಬಹುದು. ಇಂಧನದ ಮೇಲಿನ ತೆರಿಗೆಯನ್ನು ಮತ್ತಷ್ಟು ಹೆಚ್ಚಿಸುವುದರಿಂದ ಜಾಗತಿಕವಾಗಿ ಹೆಚ್ಚು ತೆರಿಗೆ ವಿಧಿಸಿದಂತಾಗುತ್ತದೆ. ಪ್ರಸ್ತುತ ತೆರಿಗೆಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಶೇ 70ರಷ್ಟಿದೆ. ಒಂದು ವೇಳೆ ಈ ಸುಂಕ ಅನುಷ್ಠಾನಗೊಂಡರೇ ಇದು ಶೇ 75-80ರ ಮಟ್ಟವನ್ನು ತಲುಪಬಹುದು.

ಕೋವಿಡ್​ನಂತಹ ಈ ಸಮಯದಲ್ಲಿ ಹೆಚ್ಚಿನ ಚಿಲ್ಲರೆ ಬೆಲೆಯು ಸರ್ಕಾರಕ್ಕೆ ಒಂದು ಆಯ್ಕೆಯಾದರೇ, ಅದು ಹಣದುಬ್ಬರ ಹೆಚ್ಚಿಸುತ್ತದೆ.

ABOUT THE AUTHOR

...view details