ನವದೆಹಲಿ :ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ 1.02 ಕೋಟಿಗೂ ಅಧಿಕ ತೆರಿಗೆ ಪಾವತಿದಾರರಿಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ₹1.48 ಲಕ್ಷ ಕೋಟಿ ರೂ. ತೆರಿಗೆ ಬಾಕಿ ಹಣ ಪಾವತಿಸಿದೆ.
ಸಿಬಿಡಿಟಿಯು 2020ರ ಏಪ್ರಿಲ್ 1ರಿಂದ ಈವರೆಗೆ 1.48 ಲಕ್ಷ ಕೋಟಿ ರೂ. ತೆರಿಗೆ ಬಾಕಿ ಹಣವನ್ನು 1.02 ಕೋಟಿಗೂ ಅಧಿಕ ತೆರಿಗೆದಾರರಿಗೆ ಪಾವತಿಸಿದೆ. ಈ ಪೈಕಿ 45,264 ಕೋಟಿ ರೂ.ಗಳ ವೈಯಕ್ತಿಕ ಆದಾಯ ತೆರಿಗೆ ಮರುಪಾವತಿ ಮತ್ತು 1.03 ಲಕ್ಷ ಕೋಟಿ ರೂ.ಗಳ ಕಾರ್ಪೊರೇಟ್ ತೆರಿಗೆ ಮರುಪಾವತಿ ಮಾಡಲಾಗಿದೆ.