ನವದೆಹಲಿ: 15ನೇ ಹಣಕಾಸು ಆಯೋಗದ ಉಲ್ಲೇಖಿತ ನಿಯಮಗಳನ್ನು ಬದಲಾಯಿಸುವ ಮೊದಲು ರಾಜ್ಯ ಸರ್ಕಾರಗಳ ಮುಖ್ಯಮಂತ್ರಿಗಳ ಅಭಿಪ್ರಾಯಗಳು ತೆಗೆದುಕೊಳ್ಳಬೇಕು. ಫೆಡರಲ್ ನೀತಿ ಮತ್ತು ಸಹಕಾರಿ ಫೆಡರಲಿಸಂಗೆ ಏಕಪಕ್ಷೀಯ ನಿರ್ಧರ ಒಳ್ಳೆಯದಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ನಿಧಾನಗತಿಯ ಆರ್ಥಿಕತೆಯ ಚೇತರಿಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ಎರಡು ದಿನಗಳ ಹಿಂದಷ್ಟೆ ನೀಡಿದ್ದರು. ಜುಲೈನಲ್ಲಿ ಕೇಂದ್ರ ಸರ್ಕಾರವು 15ನೇ ಹಣಕಾಸು ಆಯೋಗದ ಉಲ್ಲೇಖದ ನಿಯಮಗಳನ್ನು ಬದಲಾಯಿಸಿತು. ರಕ್ಷಣೆ ಮತ್ತು ಆಂತರಿಕ ಭದ್ರತೆಗಾಗಿ ಮೀಸಲಿಡಲಾದ ಹಣದ ಹಂಚಿಕೆ ಮಾರ್ಗಗಳನ್ನು ಸೂಚಿಸಲು ಸಮಿತಿಗೆ ಆದೇಶಿಸಿತು.