ಕರ್ನಾಟಕ

karnataka

ETV Bharat / business

ಇಪಿಎಫ್ಒ ಅರ್ಜಿ ವಜಾ... ಖಾಸಗಿ ಉದ್ಯೋಗಿಗಳು ಭವಿಷ್ಯ ನಿಧಿ ಸೇಫ್​:  ಪಿಎಫ್​ಗೆ ಕುತ್ತು..!

ಸುಪ್ರೀಂಕೋರ್ಟ್​ನ ಈ ತೀರ್ಪಿನಿಂದ ಪಿಂಚಣಿ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ. ಆದರೆ, ಹೆಚ್ಚುವರಿ ದೇಣಿಗೆ ಇದೀಗ 'ಪಿಎಫ್​' ಬದಲಾಗಿ 'ಇಪಿಎಫ್​'​ಗೆ ಹೋಗುವುದರಿಂದ ಭವಿಷ್ಯನಿಧಿಯ ನಿಧಿ ಕಡಿಮೆಯಾಗಲಿದೆ. ಆದರೆ, ಹೆಚ್ಚಳವಾಗುವ ಪಿಂಚಣಿಯಿಂದಾಗಿ ಉದ್ಯೋಗಿಗಳಿಗೆ ನಷ್ಟವಾಗುವ ಸಾಧ್ಯತೆ ಇದೆ.

By

Published : Apr 2, 2019, 12:00 PM IST

Updated : Apr 2, 2019, 12:19 PM IST

ಪಿಂಚಣಿ

ನವದೆಹಲಿ: ಖಾಸಗಿ ವಲಯದ ಎಲ್ಲ ಉದ್ಯೋಗಿಗಳಿಗೆ ಪಿಂಚಣಿ ಹೆಚ್ಚಿಸಬೇಕೆಂಬ ಕೇರಳ ಹೈಕೋರ್ಟ್​ ತೀರ್ಪನ್ನು ಸುಪ್ರೀಂಕೋರ್ಟ್​ ಎತ್ತಿಹಿಡಿದಿದೆ.

ಗರಿಷ್ಠ ಮಾಸಿಕ 15 ಸಾವಿರ ವೇತನಕ್ಕೆ ಮಿತಗೊಳಿಸಿ ಉದ್ಯೋಗಿ ದೇಣಿಗೆಯನ್ನು ಲೆಕ್ಕಾಚಾರ ಮಾಡುವ ಬದಲು ಎಲ್ಲ ನಿವೃತ್ತ ಉದ್ಯೋಗಿಗಳಿಗೆ ಅವರ ಪೂರ್ಣ ವೇತನ ಆಧಾರದಲ್ಲಿ ಪಿಂಚಣಿ ನೀಡಬೇಕು ಎಂದು ಕೇರಳ ಹೈಕೋರ್ಟ್​ ಉದ್ಯೋಗಿ ಭವಿಷ್ಯನಿಧಿ ಸಂಸ್ಥೆಗೆ (ಇಪಿಎಫ್) ನಿರ್ದೇಶನ ನೀಡಿತ್ತು. ಈ ತೀರ್ಪಿನ ವಿರುದ್ಧ ಇಪಿಎಫ್​ಒ ಸಲ್ಲಿಸಿದ್ದ ವಿಶೇಷ ರಜಾಕಾಲದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.

ಉದ್ಯೋಗಿ ಭವಿಷ್ಯನಿಧಿ ಸಂಸ್ಥೆ ಕೇರಳ ಹೈಕೋರ್ಟ್​ ಆದೇಶ ವಿರುದ್ಧ ಸಲ್ಲಿಸಿದ್ದ ರಜಾಕಾಲದ ಅರ್ಜಿಯಲ್ಲಿ ಹುರುಳಿಲ್ಲ. ಆದ್ದರಿಂದ ಈ ಅರ್ಜಿ ವಜಾ ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್​ ತಿಳಿಸಿದೆ.

ಕೇಂದ್ರ ಸರ್ಕಾರ 1995ರಲ್ಲಿ ಉದ್ಯೋಗ ಪಿಂಚಣಿ ಯೋಜನೆ ಆರಂಭಿಸಿತ್ತು. ಇದರ ಅನ್ವಯ ಉದ್ಯೋಗದಾತರು ನೌಕರರ ವೇತನದ ಶೇ 8.33ರಷ್ಟು ಪಿಂಚಣಿ ಯೋಜನೆಗೆ ದೇಣಿಗೆ ನೀಡಬೇಕು. ಆದರೆ, ಇದನ್ನು ಗರಿಷ್ಠ ಮಾಸಿಕ 6,500 ರೂ. ಶೇ 8.33ಕ್ಕೆ ಸೀಮಿತಗೊಳಿಸಲಾಗಿತ್ತು. ಆದರೆ, ಉದ್ಯೋಗ ಹಾಗೂ ಉದ್ಯೋಗದಾತರ ಆಕ್ಷೇಪ ಇಲ್ಲದಿದ್ದರೆ ವಾಸ್ತವ ವೇತನಕ್ಕೆ ಅನುಗುಣವಾಗಿ ದೇಣಿಗೆ ನೀಡಲು 1996ರಲ್ಲಿ ಸರ್ಕಾರ ಆದೇಶ ನೀಡಿತ್ತು.

2014 ಸೆಪ್ಟೆಂಬರ್ ಇಪಿಎಫ್​ಒ, ದೇಣಿಗೆ ಪ್ರಮಾಣವನ್ನು ಗರಿಷ್ಠ 15 ಸಾವಿರ ವೇತನ ಶೇ 8.33ಕ್ಕೆ ಹೆಚ್ಚಿಸಿತು. ಆದರೆ, ಪೂರ್ಣ ವೇತನ ಅನುಗುಣವಾಗಿ ಪಿಂಚಣಿ ಪಡೆಯುವ ಉದ್ಯೋಗಿಗಳಿಗೆ ಕೊನೆಯ ಐದು ವರ್ಷದ ಸರಾಸರಿ ಮಾಸಿಕ ವೇತನಕ್ಕೆ ಅನುಗುಣವಾಗಿ ಪಿಂಚಣಿ ಲೆಕ್ಕಾಚಾರ ಮಾಡಲಾಗುತ್ತಿತ್ತು. ಕೊನೆಯ ಐದು ವರ್ಷದ ಸರಾಸರಿ ಮಾಸಿಕ ವೇತನವನ್ನು ಪರಿಗಣಿಸಿದರೆ ಉದ್ಯೋಗಿಗಳಿಗೆ ಕಡಿಮೆ ಪಿಂಚಣಿ ಸಿಗುತ್ತಿತ್ತು. ಇದನ್ನು ರದ್ದುಪಡಿಸಿ ಹಳೆಯ ಪದ್ಧತಿ ಅನುಸರಿಸುವಂತೆ ಕೇರಳ ಹೈಕೋರ್ಟ್ ಆದೇಶ ನೀಡಿತ್ತು.

Last Updated : Apr 2, 2019, 12:19 PM IST

ABOUT THE AUTHOR

...view details