ಕರ್ನಾಟಕ

karnataka

ETV Bharat / business

ಕೊರೊನಾ ಭೀತಿಯಿಂದ ₹1 ಲಕ್ಷ ಕೋಟಿ ವಿದೇಶಿ ಬಂಡವಾಳ ಹೊರ ಹರಿವು..

ಮಾರ್ಚ್​ ಮಾಸಿಕದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್​ಪಿಐ) 1 ಲಕ್ಷ ಕೋಟಿ ರೂ. ಹಿಂದಕ್ಕೆ ಪಡೆದುಕೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೊರೊನಾ ವೈರಸ್​ನಿಂದ ದೇಶಿ ಆರ್ಥಿಕತೆಯಲ್ಲಿ ಉಂಟಾಗಿರುವ ಆರ್ಥಿಕ ಹಿಂಜರಿತ ಕಾರಣ ಎನ್ನಲಾಗಿದೆ.

ಕೊರೊನಾ ಭೀತಿ
ಕೊರೊನಾ ಭೀತಿ

By

Published : Mar 30, 2020, 7:41 PM IST

ನವದೆಹಲಿ :ಕೋವಿಡ್​-19 ಸಾಂಕ್ರಾಮಿಕ ವೈರಸ್​ ಭೀತಿಯಿಂದಾಗಿ ಮಾರ್ಚ್​ ತಿಂಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು ಭಾರತದ ಮಾರಕಟ್ಟೆಯಿಂದ ಲಕ್ಷ ಕೋಟಿ ರೂ. ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಮಾರ್ಚ್​ 2ರಿಂದ 27ರ ಅವಧಿಯ ನಡುವೆ ಹೂಡಿಕೆದಾರರು ₹5,377 ಕೋಟಿ ಮೌಲ್ಯದ ಷೇರುಗಳನ್ನು ಹಾಗೂ 52,811 ಕೋಟಿ ರೂ. ಮೌಲ್ಯದ ಸಾಲ ಪತ್ರಗಳನ್ನು ಮಾರಾಟ ಮಾಡಿದ್ದಾರೆ. ಒಟ್ಟಾರೆ ಮಾರ್ಚ್​ ಮಾಸಿಕದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್​ಪಿಐ) 1 ಲಕ್ಷ ಕೋಟಿ ರೂ. ಹಿಂದಕ್ಕೆ ಪಡೆದುಕೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೊರೊನಾ ವೈರಸ್​ನಿಂದ ದೇಶಿ ಆರ್ಥಿಕತೆಯಲ್ಲಿ ಉಂಟಾಗಿರುವ ಆರ್ಥಿಕ ಹಿಂಜರಿತ ಕಾರಣ ಎನ್ನಲಾಗಿದೆ.

ಮಾರ್ಚ್‌ ತಿಂಗಳಿನಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ₹1ಲಕ್ಷ ಕೋಟಿ ಹಿಂದಕ್ಕೆ ಪಡೆದಿದ್ದಾರೆ. ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ ದತ್ತಾಂಶವನ್ನು ಸಂಗ್ರಹಿಸಲು ಆರಂಭಿಸಿದ ಬಳಿಕ ಗರಿಷ್ಠ ಮಟ್ಟದ ಬಂಡವಾಳ ಹೊರಹರಿವು ಇದಾಗಿದೆ. ಹೂಡಿಕೆದಾರರು ಮಾರ್ಚ್‌ 2 ರಿಂದ 27ರವರೆಗೆ ನಡೆದಿರುವ ವಹಿವಾಟಿನಲ್ಲಿ ₹59,377 ಕೋಟಿ ಮೌಲ್ಯದ ಷೇರುಗಳನ್ನು ಹಾಗೂ ₹ 52,811 ಕೋಟಿ ಮೌಲ್ಯದ ಸಾಲಪತ್ರಗಳನ್ನು ಮಾರಾಟ ಮಾಡಿದ್ದಾರೆ.

ಸೋಂಕು ಹರಡುವುದನ್ನು ನಿಯಂತ್ರಿಸಲು ಜಗತ್ತಿನೆಲ್ಲೆಡೆ ಲಾಕ್‌ಡೌನ್‌ ವಿಧಿಸಲಾಗಿದೆ. ಇದರಿಂದ ಹೂಡಿಕೆದಾರರು ಎಚ್ಚರಿಕೆಯಿಂದ ವಹಿವಾಟು ನಡೆಸುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.

ABOUT THE AUTHOR

...view details