ನವದೆಹಲಿ :ಗುಣಮಟ್ಟ, ತಂತ್ರಜ್ಞಾನ ಮತ್ತು ಉತ್ಪಾದನೆಯ ಪ್ರಮಾಣವು ಭಾರತದ ತನ್ನ ವಾರ್ಷಿಕ ರಫ್ತು 1 ಟ್ರಿಲಿಯನ್ ಡಾಲರ್ಗೆ ಕೊಂಡೊಯ್ಯಲು ನೆರವಾಗುತ್ತದೆ ವಿನಹಃ ಸರ್ಕಾರದ ಸಬ್ಸಿಡಿಗಳಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ಹೇಳಿದರು.
ಸರ್ಕಾರದ ಸಬ್ಸಿಡಿಗಳಿಂದ ರಫ್ತು ವಹಿವಾಟು ವೃದ್ಧಿಸಲಾರದು; ಸಚಿವ ಪಿಯೂಶ್ ಗೋಯಲ್ - ರಫ್ತು
ಜಾಗತಿಕ ವ್ಯವಹಾರದಲ್ಲಿ ಸಬ್ಸಿಡಿಯೊಂದಿಗೆ ದೀರ್ಘಾವಧಿಯ ವಹಿವಾಟು ನಡೆಸುತ್ತಿದ್ದರೆ ಅದು ಕೈಗೂಡುವುದಿಲ್ಲ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
ಭಾರತದಿಂದ ನಾವು1 ಟ್ರಿಲಿಯನ್ ಅಮೆರಿಕನ್ ಡಾಲರ್ಗೆ ರಫ್ತು ಏರಿಕೆಯ ಗುರಿ ಏಕೆ ಇರಿಸಿಕೊಳ್ಳಬಾರದು. ನಾವು ಖಂಡಿತವಾಗಿಯೂ ಮಾಡಬಹುದು. ನಮಗೆ ಏಕೆ ಸಾಧ್ಯವಿಲ್ಲ. ಅದಕ್ಕಾಗಿ ನಾವು ಕ್ರಿಯಾತ್ಮಕ ವಸ್ತುಗಳ ಬಗ್ಗೆ ಸ್ಪಷ್ಟವಾಗಿರಬೇಕು. ಸಬ್ಸಿಡಿಗಳು ಎಂದಿಗೂ ನಮ್ಮನ್ನು ಅಲ್ಲಿಗೆ ತಲುಪಲು ಬಿಡುವುದಿಲ್ಲ. ಅದರ ಬಗ್ಗೆ ನನಗೆ ತುಂಬಾ ಸ್ಪಷ್ಟವಾಗಿ ತಿಳಿದಿದೆ ಎಂದು ಹೇಳಿದರು.
ನನ್ನ ಆರು ವರ್ಷಗಳ ನಿರಂತರ ಆಡಳಿತದ ಒಡನಾಟದಲ್ಲಿ ಸಬ್ಸಿಡಿಗಳು ಭಾರತದ ಸಮಸ್ಯೆಗಳಿಗೆ ಪರಿಹಾರವೆಂದು ನಾನು ಕಂಡುಕೊಂಡಿಲ್ಲ. ಗುಣಮಟ್ಟ, ತಂತ್ರಜ್ಞಾನ, ಬೆಳವಣಿಗೆ, ಪ್ರಮಾಣ ಎಂಬುದನ್ನು ನಾನು ಭಾವಿಸುತ್ತೇನೆ. ಕೆಲವೊಮ್ಮೆ ಅಲ್ಪಾವಧಿಗೆ ಸ್ವಲ್ಪ ಒತ್ತಡ ಅಥವಾ ಬೆಂಬಲ ನೀಡಬೇಕಾಗಬಹುದು. ಜಾಗತಿಕ ವ್ಯವಹಾರದಲ್ಲಿ ಸಬ್ಸಿಡಿಯೊಂದಿಗೆ ದೀರ್ಘಾವಧಿಯ ವಹಿವಾಟು ನಡೆಸುತ್ತಿದ್ದರೆ ಅದು ಕೈಗೂಡುವುದಿಲ್ಲ ಎಂದರು.