ಕರ್ನಾಟಕ

karnataka

ETV Bharat / business

ಹೊಸ ಶಿಕ್ಷಣ ನೀತಿ ನೌಕರರ ಬದಲಿಗೆ ಉದ್ಯೋಗ ಸೃಷ್ಟಿಕರ್ತರನ್ನು ತಯಾರಿಸುತ್ತೆ: ಮೋದಿ

ನೀವು ಕಲಿತಾಗ ಬುದ್ಧಿವಂತಿರಾಗುತ್ತೀರಿ. ನೀವು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಾಗ ಸಮಸ್ಯೆಗಳನ್ನು ಪರಿಹರಿಸುವ ರೂಪಿತ ವಿಧಾನಗಳಿಂದ ಹೊರಬರುತ್ತೀರಿ ಎಂದು ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್​ ಸ್ಪರ್ಧೆಯ ಅಂತಿಮ ಸುತ್ತಿನಂದು ವಿದ್ಯಾರ್ಥಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು.

PM
ಪ್ರಧಾನಿ

By

Published : Aug 1, 2020, 6:50 PM IST

ನವದೆಹಲಿ: ಕಲಿಕೆ, ಪ್ರಶ್ನೆ ಮತ್ತು ಪರಿಹಾರ ಎಂಬ ಮೂರು ಕೆಲಸಗಳನ್ನು ವಿದ್ಯಾರ್ಥಿಗಳು ಎಂದಿಗೂ ನಿಲ್ಲಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನೀವು ಕಲಿತಾಗ ಬುದ್ಧಿವಂತಿರಾಗುತ್ತೀರಿ. ನೀವು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಾಗ ಸಮಸ್ಯೆಗಳನ್ನು ಅವುಗಳನ್ನು ಪರಿಹರಿಸುವ ಬಾಕ್ಸ್ ವಿಧಾನಗಳಿಂದ ಹೊರಬರುತ್ತೀರಿ ಎಂದು ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್​ ಸ್ಪರ್ಧೆಯ ಅಂತಿಮ ಸುತ್ತಿನಂದು ವಿದ್ಯಾರ್ಥಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸುತ್ತಾ ಹೇಳಿದರು.

21ನೇ ಶತಮಾನದ ವೇಳೆ ವಿದ್ಯಾರ್ಥಿಗಳಲ್ಲಿ ಜೀವನ ಕೌಶಲ್ಯ ವೃದ್ಧಿಸುವತ್ತ ಶಿಕ್ಷಣ ವ್ಯವಸ್ಥೆಯನ್ನು ಮಾರ್ಪಡಿಸಬೇಕಾಗಿದೆ. ಕಳೆದ ಐದು ವರ್ಷಗಳಿಂದ ಎಲ್ಲಾ ಕ್ಷೇತ್ರಗಳ ಜನರೊಂದಿಗೆ ಚರ್ಚಿಸಿದ ನಂತರ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಯಿತು ಎಂದರು.

ಈ ಮೊದಲು ವಿದ್ಯಾರ್ಥಿಗಳು ಆಸಕ್ತಿ ಹೊಂದಿರುವ ವಿಷಯಗಳನ್ನು ಆಯ್ಕೆ ಮಾಡಲು ಸಿಗುತ್ತಿರಲಿಲ್ಲ. ಹಲವು ಪದವಿಗಳನ್ನು ಗಳಿಸಿದ ನಂತರವೂ ವಿದ್ಯಾರ್ಥಿಗಳು ತೃಪ್ತರಾಗಲಿಲ್ಲ. ಈ ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಹಿತಾಸಕ್ತಿಗೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.

ಹೊಸ ಶಿಕ್ಷಣ ನೀತಿಯು ‘ಉದ್ಯೋಗಾಕಾಂಕ್ಷಿಗಳು’ ಬದಲಿಗೆ ‘ಉದ್ಯೋಗ ಸೃಷ್ಟಿಕರ್ತರನ್ನು’ ಸೃಜಿಸಲು ಒತ್ತು ನೀಡುತ್ತದೆ. ನಮ್ಮ ಹೊಸ ಶಿಕ್ಷಣ ನೀತಿಯು ಪ್ರಾಥಮಿಕ ಶಿಕ್ಷಣದಿಂದಲೇ ಸೇರ್ಪಡೆಗೆ ಉತ್ಸುಕವಾಗಿದೆ. ಉನ್ನತ ಶಿಕ್ಷಣದಲ್ಲಿ 2035ರ ವೇಳೆಗೆ ಒಟ್ಟು ದಾಖಲಾತಿ ಅನುಪಾತ ಶೇ 50ರಷ್ಟು ಹೆಚ್ಚಿಸುವ ಗುರಿ ಹೊಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನಾವೀನ್ಯತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದರು.

ABOUT THE AUTHOR

...view details