ಕರ್ನಾಟಕ

karnataka

ಹೆಚ್ಚಿನ ಅನುದಾನ ನೀಡುವಂತೆ ಬಜೆಟ್ ಪೂರ್ವ​ ಸಭೆಯಲ್ಲಿ ವಿವಿಧ ರಾಜ್ಯಗಳ ಒತ್ತಾಯ

By

Published : Dec 18, 2019, 8:17 PM IST

ಮೂಲಸೌಕರ್ಯ ಯೋಜನೆಗಳನ್ನು ತ್ವರಿತಗೊಳಿಸಲು, ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಸಂಗ್ರಹಿಸಲು ಮತ್ತು ಕೇಂದ್ರೀಯ ಪ್ರಾಯೋಜಿತ ಯೋಜನೆಗಳ ಹೊಣೆಯನ್ನು ಹಂಚಿಕೊಳ್ಳಲು ವಿವಿಧ ರಾಜ್ಯಗಳು ಕೇಂದ್ರ ಸರ್ಕಾರದಿಂದ ಇಂದು ನಡೆದ ಬಜೆಟ್​ ಪೂರ್ವ​ ಸಭೆಯಲ್ಲಿ ಹೆಚ್ಚಿನ ಹಣದ ನೆರವು ಕೇಳಿವೆ.

pre-budge meet
ಪೂರ್ವ ಬಜೆಟ್​ ಸಭೆ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಇಂದು ಬಜೆಟ್ ಪೂರ್ವ​​ ಸಭೆ ನಡೆಯಿತು. ಸಭೆಯಲ್ಲಿ ಮೂಲಸೌಕರ್ಯಗಳ ಯೋಜನೆ ತ್ವರಿತಗೊಳಿಸಲು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಸಂಗ್ರಹಿಸಲು ಕೇಂದ್ರ ಸರ್ಕಾರವು ಹೆಚ್ಚಿನ ಅನುದಾನ ನೀಡಬೇಕೆಂದು ವಿವಿಧ ರಾಜ್ಯಗಳು ಆಗ್ರಹಿಸಿವೆ.

ಈ ವೇಳೆ ದೆಹಲಿಯ ಹಣಕಾಸು ಸಚಿವ ಹಾಗೂ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಮಾತನಾಡಿ, 2001ರಿಂದ ಇಲ್ಲಿಯವರೆಗೆ ದೆಹಲಿಗೆ ಕೇಂದ್ರದಿಂದ 325 ಕೋಟಿ ರೂಗಳನ್ನು ಮಾತ್ರ ನೀಡಲಾಗುತ್ತಿದೆ. ಆದರೆ ಈ ಬಾರಿ ದೆಹಲಿ ಸೇರಿದಂತೆ ರಾಜ್ಯದ ಇತರ ಮಹಾನಗರ ಪಾಲಿಕೆ ಹಾಗೂ ಯು.ಟಿಗಳಿಗೆ 8,150 ಕೋಟಿ ರೂಪಾಯಿ ನೀಡಬೇಕೆಂದು ಬೇಡಿಕೆ ಇಟ್ಟರು.

ಇದೇ ವೇಳೆ ಕೇಂದ್ರ ಸರ್ಕಾರವು ಹುಲ್ಲು ಸುಡುವ (ಧಾನ್ಯಗಳನ್ನು ಬೆಳೆದ ನಂತರ ಉಳಿದಿರುವ ಒಣಹುಲ್ಲಿಗೆ ಬೆಂಕಿ ಹಚ್ಚುವುದು) ಉತ್ತರ ಪ್ರದೇಶ, ಹರಿಯಾಣ ರಾಜ್ಯದ ರೈತರ ಬಗ್ಗೆ ನಿರ್ದಿಷ್ಟವಾದ ನೀತಿ ಜಾರಿಗೆ ತರುವುದು ಹಾಗೂ ಆ ರೈತರಿಗೆ ಸಬ್ಸಿಡಿ ರೂಪದಲ್ಲಿ ಹಣ ನೀಡಬೇಕೆಂದು ಒತ್ತಾಯಿಸಿದರು.

ಹಿಮಾಚಲ ಪ್ರದೇಶದ ಕೈಗಾರಿಕಾ ಸಚಿವ ವಿಕ್ರಮ್ ಸಿಂಗ್ ಮಾತನಾಡಿ, ಮೂಲಸೌಕರ್ಯವಿಲ್ಲದೆ ರಾಜ್ಯದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸ್ಥಗಿತಗೊಂಡಿರುವ ರೈಲ್ವೆ ಯೊಜನೆಗಳಿಗೆ ಮತ್ತು ರಸ್ತೆ ಮಾರ್ಗಗಳಿಗೆ ಪಿಎಂಜಿಎಸ್​ವೈ ಅಡಿಯಲ್ಲಿ ಹಣವನ್ನು ನೀಡಬೇಕು ಎಂದು ಕೋರಿದರು.

ಮಧ್ಯಪ್ರದೇಶದ ವಾಣಿಜ್ಯ ತೆರಿಗೆ ಸಚಿವ ಬ್ರಜೇಂದ್ರ ಸಿಂಗ್ ರಾಥೋಡ್ ಮಾತನಾಡಿ, ಕೇಂದ್ರೀಯ ಪ್ರಾಯೋಜಿತ ಯೋಜನೆಗಳಲ್ಲಿ ಕೇಂದ್ರದ ಪಾಲು ತೀವ್ರವಾಗಿ ಕಡಿಮೆಯಾಗುತ್ತಿರುವುದರಿಂದ ರಾಜ್ಯದ ಹಣಕಾಸಿನ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ರು.

ಇನ್ನು, ಉತ್ತರಾಖಾಂಡ್​ನಲ್ಲಿ ನಡೆಯಲಿರುವ ಮಹಾಕುಂಭ ಮೇಳಕ್ಕೆ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ 1000ಕೋಟಿ ಹಣ ನೀಡಬೇಕೆಂದು ಉತ್ತಾರಖಾಂಡ್​ ಸರ್ಕಾರ ಕೇಳಿದೆ.

ಪುದುಚೇರಿ ಸಿಎಂ ನಾರಾಯಣ್ ಸ್ವಾಮಿ ಮಾತನಾಡಿ, ದೆಹಲಿಗೆ ಮತ್ತು ಪುದುಚೇರಿಗೆ ನೀಡುವ ಅನುದಾನದಲ್ಲಿ ತಾರತಮ್ಯವಾಗುತ್ತಿದೆ. ಇದರಿಂದ ರೈತರ ಜೀವನದ ಮೇಲೆ ಪರಿಣಾಮ ಬೀರಿದಂತಾಗುತ್ತದೆ. ದೆಹಲಿ ಮತ್ತು ಪುದುಚೇರಿಗೆ ನೀಡುವ ಅನುದಾನ ಸಮಾನವಾಗಿರಬೇಕು ಎಂದು ಆಗ್ರಹಿಸಿದ್ದಾರೆ.

ತಮಿಳುನಾಡಿನ ಉಪಮುಖ್ಯಮಂತ್ರಿ ಪನ್ನೀರ್​ ಸೆಲ್ವಂ ಮಾತನಾಡಿ, 14 ನೇ ಹಣಕಾಸು ಆಯೋಗದ ಸೂಚನೆಯಂತೆ ರಾಜ್ಯ ಸರ್ಕಾರದ ಸ್ಥಳೀಯ ಸಂಸ್ಥೆಗಳಿಗೆ ಅನುದಾನವಾಗಿ 3,369 ಕೋಟಿ ರೂ.ಯನ್ನು ಕೇಂದ್ರ ಸರ್ಕಾರದಿಂದ ಪಾವತಿಸುವುದು ಬಾಕಿ ಇದೆ ಎಂದು ಹಣಕಾಸು ಸಚಿವರ ಗಮನಕ್ಕೆ ತಂದರು.

ABOUT THE AUTHOR

...view details