ಕರ್ನಾಟಕ

karnataka

ETV Bharat / business

ಆರ್ಥಿಕ ಹಿಂಜರಿತದ ಪರಿಣಾಮ​: ತೆವಳುತ್ತಾ ಸಾಗುತ್ತಿರುವ ರಾಜ್ಯಗಳ ಜಿಎಸ್​ಟಿ ಸಂಗ್ರಹ - ತೆರಿಗ ಹಣ ಸಂಗ್ರಹ

2020-25ರ ಅವಧಿಯಲ್ಲಿ ಹಣಕಾಸು ಆಯೋಗದ ಶಿಫಾರಸುಗಳು ಜಾರಿಗೆ ಬರಲಿದ್ದು, ಕೇಂದ್ರ ಸರ್ಕಾರದ ಆದಾಯವು ಸುಮಾರು 175 ಲಕ್ಷ ಕೋಟಿ ರೂ.ಗಳಷ್ಟು ಆಗಲಿದೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿನ ಆರ್ಥಿಕ ಹಿಂಜರಿತ ಇನ್ನೂ ಎಷ್ಟು ಸಮಯದವರೆಗೆ ಇರಲಿದೆ ಎಂಬುದನ್ನು ಖಚಿತವಾಗಿ ಹೇಳಲು ಆಗುವುದಿಲ್ಲ. ಕೇಂದ್ರಕ್ಕೆ ಸೆಸ್ ಪಾವತಿಸುವ ಪ್ರಕ್ರಿಯೆ ಸಂಕುಚಿತವಾಗುತ್ತಿದೆ. ರಾಜ್ಯಗಳು ನಷ್ಟದಲ್ಲಿರುವಾಗ ದೇಶದ ಆರ್ಥಿಕತೆಯನ್ನು ಸಮತೋಲನಗೊಳಿಸಿಕೊಂಡು ಸಾಗುವುದು ತುಂಬಾ ಕಷ್ಟವಾಗಲಿದೆ ಎಂದೇ ಅರ್ಥಶಾಸ್ತ್ರಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.

financial doldrums
ಆರ್ಥಿಕ ಹಿಂಜರಿತ

By

Published : Nov 26, 2019, 8:17 PM IST

ನವದೆಹಲಿ: ಆರ್ಥಿಕ ಹಿಂಜರಿತ ತಡವಾಗಿ ನಾಗರಿಕರ ಜೀವನಶೈಲಿಯ ಮೇಲೆ ನಾಟಕೀಯ ಪ್ರಭಾವ ಬೀರುತ್ತಿದೆ. ಇದರಿಂದಾಗಿ ದೇಶದ ಆರ್ಥಿಕತೆ ಕುಸಿತದ ಹಾದಿಯತ್ತ ಸಾಗುತ್ತಿದೆ.

ಹಲವಾರು ವೃತ್ತಿಪರರು ಮತ್ತು ಕಾರ್ಮಿಕರು ತಮ್ಮ ಉದ್ಯೋಗ ಕಳೆದುಕೊಂಡಿದ್ದು, ಇದು ಕುಟುಂಬಗಳ ನಿತ್ಯದ ಆರ್ಥಿಕ ಬಿಕ್ಕಟ್ಟಿಗೆ ದೂಡಲ್ಪಟ್ಟಿವೆ. ಈ ಬಿಕ್ಕಟ್ಟಿನಿಂದ ನಾಗರಿಕರ ಖರ್ಚಿನ ಸಾಮರ್ಥ್ಯವು ತೀವ್ರವಾಗಿ ಕಡಿಮೆಯಾಗಿದೆ. ಜನರು ಭವಿಷ್ಯದಲ್ಲಿ ಖರೀದಿಗೆ ಆಸಕ್ತಿ ತೋರಿಸುವುದಿಲ್ಲ. ಇದರಿಂದ ಸರ್ಕಾರದ ಬೊಕ್ಕಸದ ತೆರಿಗೆ ಹಣ (ಜಿಎಸ್​ಟಿ) ಸಂಗ್ರಹ ಕುಂದಲಿದೆ.

ದೊಡ್ಡ ಉದ್ಯಮಗಳು ಉತ್ಪನ್ನ ತಯಾರಿಕೆಯನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೇಡಿಕೆ ಮತ್ತು ಪೂರೈಕೆ ರೇಖೆಯಲ್ಲಿ ಭಾರಿ ಅಂತರ ಸೃಷ್ಟಿಯಾಗುತ್ತಿದೆ. ಇದರ ಪರಿಣಾಮವಾಗಿ ಜಿಎಸ್​ಟಿ ಸಂಗ್ರಹ ಸಾರ್ವಕಾಲಿಕ ಕೆಳಮಟ್ಟ ತಲುಪುತ್ತಿದೆ. ಈ ಕಾರಣದಿಂದಾಗಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರವು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿವೆ.

ಜಿಎಸ್​ಟಿ ಕಾಯ್ದೆಯ ಪ್ರಕಾರ, ಕೇಂದ್ರ ಸರ್ಕಾರ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಜಾರಿಯಾದ ಬಳಿಕ ರಾಜ್ಯಗಳಿಗೆ ಆಗಿರುವ ನಷ್ಟವನ್ನು ತುಂಬಿಕೊಡಲು ಜಿಎಸ್​ಟಿ ನಷ್ಟ ಪರಿಹಾರ ಪಾವತಿಸಬೇಕಾಗುತ್ತದೆ. ಕೆಲವು ರಾಜ್ಯಗಳ ತೆರಿಗೆಯ ಶೇ 14ಕ್ಕಿಂತ ಕಡಿಮೆ ತೆರಿಗೆ ಸಂಗ್ರಹಿಸುವ ಸಾಮರ್ಥ್ಯ ಹೊಂದಿವೆ. ಅಂತಹ ರಾಜ್ಯ/ಯುಟಿಗಳಿಗೆ ಕೇಂದ್ರ ಸರ್ಕಾರ ಎರಡು ತಿಂಗಳ ಆಧಾರದ ಮೇಲೆ ಅಂತರ (ಡಿಫರೆನ್ಸಿಯಲ್​​) ಮೊತ್ತ ಪಾವತಿಸುತ್ತದೆ. ಪ್ರಸಕ್ತ ವರ್ಷದ ಜೂನ್/ ಜುಲೈ ತಿಂಗಳುಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸುಮಾರು 28 ಕೋಟಿ ರೂ. ಪಾವತಿಸಿದೆ ಎಂದು ಹೇಳಿಕೊಂಡಿದೆ.

ಆಗಸ್ಟ್ / ಸೆಪ್ಟೆಂಬರ್ ತಿಂಗಳ ಬಾಕಿ ಮೊತ್ತವು ಅಕ್ಟೋಬರ್​ ತಿಂಗಳಲ್ಲಿ 40 ಕೋಟಿ ರೂ. ಪಾವತಿ ಮಾಡಬೇಕಿದೆ. ಆದರೆ, ಈ ಹಣ ಇನ್ನೂ ಸಂದಾಯವಾಗಿಲ್ಲ. ಅದನ್ನು ಪಡೆಯದ ರಾಜ್ಯಗಳನ್ನು ಆತಂಕಕ್ಕೆ ಒಳಗಾಗಿವೆ. ಓವರ್‌ಡ್ರಾಫ್ಟ್ ಸೌಲಭ್ಯ ಪಡೆಯುತ್ತಿರುವ ಕೇರಳ ರಾಜ್ಯ ಅರ್ಹ ಸಾಲ ಮಾನದಂಡದ ಗೆರೆಯನ್ನು ಈಗಾಗಲೇ ದಾಟಿದೆ. ಈ ಬಗ್ಗೆ ಇಲ್ಲಿನ ರಾಜ್ಯ ಸರ್ಕಾರ ಮರೆತಂತಿದೆ.

ಜಿಎಸ್​​ಟಿ ಅನುಷ್ಠಾನದ ನಂತರ 5 ರಾಜ್ಯಗಳು, ನವದೆಹಲಿ, ರಾಜಸ್ಥಾನ, ಪಂಜಾಬ್, ಕೇರಳ ಮತ್ತು ಪಶ್ಚಿಮ ಬಂಗಾಳ ಮೊದಲ ಬಾರಿಗೆ ಜಿಎಸ್​​ಟಿ ಕೌನ್ಸಿಲ್ ಸಭೆ ನಡೆಸಬೇಕೆಂದು ಒತ್ತಾಯಿಸುತ್ತಿವೆ. ಕಾರ್ಪೊರೇಟ್ ತೆರಿಗೆಗಳನ್ನು ಸ್ವೀಕರಿಸದ ರಾಜ್ಯಗಳ ಪ್ರಸ್ತುತ ಸ್ಥಿತಿಗತಿ, ಆರ್ಥಿಕ ಹಿಂಜರಿತದ ಪರಿಣಾಮದಿಂದ ರಾಜ್ಯಗಳಲ್ಲಿ ಹೆಚ್ಚಳವಾದ ಸಮಸ್ಯೆಗಳನ್ನು ಪರಿಹರಿಸಲು ಬಲವಾದ ಸುಧಾರಣಾ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸುತ್ತಿವೆ.ಇಂದಿನ ವಿತ್ತೀಯ ವರ್ಷದಲ್ಲಿ ಒಟ್ಟಾರೆ ತೆರಿಗೆ ಆದಾಯದಲ್ಲಿ ಕೇಂದ್ರ ಸುಮಾರು 2 ಲಕ್ಷ ಕೋಟಿ ರೂ. ಕಡಿತವಾಗಲಿದೆ ಎಂದು ನಿರೀಕ್ಷಿಸಿದೆ.

2020-25ರ ಅವಧಿಯಲ್ಲಿ ಹಣಕಾಸು ಆಯೋಗದ ಶಿಫಾರಸುಗಳು ಜಾರಿಗೆ ಬರಲಿದ್ದು, ಕೇಂದ್ರದ ಆದಾಯವು ಸುಮಾರು 175 ಲಕ್ಷ ಕೋಟಿ ರೂ.ಗಳಷ್ಟು ಆಗಲಿದೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿನ ಆರ್ಥಿಕ ಹಿಂಜರಿತವು ಇನ್ನೂ ಎಷ್ಟು ಸಮಯದವರೆಗೆ ಇರಲಿದೆ ಎಂಬುದನ್ನು ಖಚಿತವಾಗಿ ಹೇಳಲು ಆಗುವುದಿಲ್ಲ. ಕೇಂದ್ರ ಸರ್ಕಾರಕ್ಕೆ ಸೆಸ್ ಪಾವತಿಸುವ ಪ್ರಕ್ರಿಯೆ ಸಂಕುಚಿತವಾಗುತ್ತಿದೆ. ರಾಜ್ಯಗಳು ನಷ್ಟದಲ್ಲಿರುವಾಗ ದೇಶದ ಆರ್ಥಿಕತೆಯನ್ನು ಸಮತೋಲನಗೊಳಿಸಿಕೊಂಡು ಸಾಗುವುದು ಕೇಂದ್ರಕ್ಕೆ ತುಂಬಾ ಕಷ್ಟವಾಗಲಿದೆ ಎಂದು ವಿತ್ತ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details