ಕರ್ನಾಟಕ

karnataka

ETV Bharat / business

ಕೊರೊನಾ ಜಯಿಸಲು ಭಾರತೀಯ ಮಸಾಲೆಗೆ ಹೆಚ್ಚಿದ ಬೇಡಿಕೆ: ಒಂದೇ ತಿಂಗಳಲ್ಲಿ ಶೇ 23ರಷ್ಟು ರಫ್ತು ವೃದ್ಧಿ! - ವಾಣಿಜ್ಯ ಸುದ್ದಿ

ಮಸಾಲೆ ಪದಾರ್ಥಗಳ ರಫ್ತು ಹೆಚ್ಚಳ ಮಹತ್ವದ್ದಾಗಿದ್ದು, ಜೂನ್​ನಲ್ಲಿ ಭಾರತದ ಒಟ್ಟಾರೆ ರಫ್ತು ವಹಿವಾಟು ಶೇ 12.4ರಷ್ಟು ಸಂಕುಚಿತಗೊಂಡಿದೆ. 2019ರ ಜೂನ್​ನಲ್ಲಿ 25.01 ಬಿಲಿಯನ್ ಡಾಲರ್‌ ನಷ್ಟಿದ್ದು, ಅದು 21.91 ಬಿಲಿಯನ್ ಡಾಲರ್‌ಗೆ ತಲುಪಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಪ್ರಪಂಚದಾದ್ಯಂತದ ಜನರಲ್ಲಿ ಆರೋಗ್ಯದತ್ತ ಒಲವು ಮೂಡಿ, ಮಸಾಲೆ ಬಳಕೆ ಹೆಚ್ಚಾಗಿದ್ದು ಇದೇ ರಫ್ತು ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

Spice
ಮಸಾಲೆ

By

Published : Jul 20, 2020, 4:09 PM IST

ಹೈದರಾಬಾದ್​:ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್​ ಇಂಡಸ್ಟ್ರಿ ಆಫ್ ಇಂಡಿಯಾ (ಅಸ್ಸೋಚಾಮ್) ಒದಗಿಸಿದ ಮಾಹಿತಿಯ ಪ್ರಕಾರ, 2020ರ ಜೂನ್ ಮಾಸಿಕದಲ್ಲಿ ಭಾರತವು 359 ಮಿಲಿಯನ್ ಡಾಲರ್​ ಮೌಲ್ಯದ ಮಸಾಲೆ ಪದಾರ್ಥಗಳನ್ನು ರಫ್ತು ಮಾಡಿದೆ. ಡಾಲರ್ ಪರಿಭಾಷೆಯಲ್ಲಿ ಇದರ ರಫ್ತು ಬೆಳವಣಿಗೆ ದರ ಶೇ 23ರಷ್ಟು ಹೆಚ್ಚಾಗಿದೆ.

ರೂಪಾಯಿ ಲೆಕ್ಕಾಚಾರದಲ್ಲಿ ಮಸಾಲೆ ರಫ್ತು ಬೆಳವಣಿಗೆ ಹೇಳುವುದಾದರೆ 2019ರ ಜೂನ್‌ನಲ್ಲಿ 2,030 ಕೋಟಿ ರೂ.ಗಳಿಗೆ ಹೋಲಿಸಿದರೆ 2020ರ ಜೂನ್‌ನಲ್ಲಿ ಶೇ 34ರಷ್ಟು ಬೆಳವಣಿಗೆಯ ಮುಖೇನ 2,721 ಕೋಟಿ ರೂ.ಗೆ ತಲುಪಿದೆ.

ಮಸಾಲೆಗಳ ರಫ್ತು ಹೆಚ್ಚಳ ಮಹತ್ವದ್ದಾಗಿದ್ದು, ಜೂನ್​ನಲ್ಲಿ ಭಾರತದ ಒಟ್ಟಾರೆ ರಫ್ತು ವಹಿವಾಟು ಶೇ 12.4ರಷ್ಟು ಸಂಕುಚಿತಗೊಂಡಿದೆ. 2019ರ ಜೂನ್​ನಲ್ಲಿ 25.01 ಬಿಲಿಯನ್ ಡಾಲರ್‌ ನಷ್ಟಿದ್ದು, ಅದು 21.91 ಬಿಲಿಯನ್ ಡಾಲರ್‌ಗೆ ತಲುಪಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಪ್ರಪಂಚದಾದ್ಯಂತದ ಜನರಲ್ಲಿ ಆರೋಗ್ಯದತ್ತ ಒಲವು ಮೂಡಿ, ಮಸಾಲೆ ರಫ್ತು ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಕೋವಿಡ್‌ನಿಂದಾಗಿ ಸಂಪೂರ್ಣ ಆಹಾರ ಪಥ್ಯ ಪದ್ಧತಿ ಬದಲಾಗಿದೆ. ಆಹಾರ ಈಗ ರೋಗನಿರೋಧಕ ಶಕ್ತಿಯತ್ತ ಕೇಂದ್ರೀಕೃತವಾಗಿದೆ. ಜನರು ತಮ್ಮ ರೋಗನಿರೋಧಕ ಶಕ್ತಿಯನ್ನು ಸ್ವಾಭಾವಿಕವಾಗಿ ಹೆಚ್ಚಿಸಲು ಬಯಸುತ್ತಾರೆ. ಆದ್ದರಿಂದ ನಾವು ಮಸಾಲೆಗಳಿಗೆ ಬಲವಾದ ಬೇಡಿಕೆಯನ್ನು ಎದುರು ನೋಡುತ್ತಿದ್ದೇವೆ ಎನ್ನುತ್ತಾರೆ ಕೃಷಿ ರಫ್ತು ನೀತಿ ವಿಶ್ಲೇಷಕ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಮಾಜಿ ಸಲಹೆಗಾರ ಡಾ. ಪರಶ್ರಮ ಪಾಟೀಲ್.

ಭಾರತವು ಕಳೆದ ಎರಡು ತಿಂಗಳಿಂದ ಮಸಾಲೆಗಳಿಗೆ ಸಾಕಷ್ಟು ಬೇಡಿಕೆ ಕಂಡಿದೆ. 2020ರ ಮೇ ತಿಂಗಳಲ್ಲಿ ಶೇ 10.6ರಷ್ಟು ಬೆಳವಣಿಗೆ ದಾಖಲಿಸಿದೆ. ಆದರೆ ಇದು 2020ರ ಏಪ್ರಿಲ್‌ನಲ್ಲಿ 32.2ರಷ್ಟಿತ್ತು. ಮಸಾಲೆಗಳ ಬೇಡಿಕೆ ಕಳೆದ 10-15 ವರ್ಷಗಳಿಂದ ಉತ್ತಮವಾಗಿದೆ. ಮಸಾಲೆಗಳು ಬಲವಾದ ಔಷಧೀಯ ಮೌಲ್ಯವನ್ನು ಹೊಂದಿದೆ. ಅರಿಶಿನವನ್ನು ಅನೇಕ ಔಷಧೀಯ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.

ಮೆಣಸು, ಏಲಕ್ಕಿ, ಶುಂಠಿ, ಅರಿಶಿನ, ಕೊತ್ತಂಬರಿ, ಜೀರಿಗೆ, ಸೆಲರಿ ದಂಟು, ಫೆನ್ನೆಲ್, ಮೆಂತ್ಯೆ, ಜಾಯಿಕಾಯಿ, ಮಸಾಲೆ ಎಣ್ಣೆ, ಮೆಣಸಿನಕಾಯಿ ಮತ್ತು ಪುದೀನ ಉತ್ಪನ್ನಗಳು ವಿದೇಶಗಳಿಗೆ ರವಾನೆಯಾಗುವ ಪ್ರಮುಖ ಸರಕುಗಳೊಂದಿಗೆ ಭಾರತವು ವಿಶ್ವದ ಅತಿದೊಡ್ಡ ಮಸಾಲೆ ರಫ್ತುದಾರ ರಾಷ್ಟ್ರವಾಗಿದೆ. ವಿಯೆಟ್ನಾಂ, ಚೀನಾ, ಅಮೆರಿಕ, ಇಂಗ್ಲೆಂಡ್​, ಬಾಂಗ್ಲಾ, ಮಲೇಷ್ಯಾ, ಯುಎಇ, ಇಂಡೋನೇಷ್ಯಾ, ಥೈಲ್ಯಾಂಡ್ ಮತ್ತು ಇರಾನ್ ದೇಶಗಳು ಭಾರತೀಯ ಮಸಾಲೆ ಪದಾರ್ಥಗಳನ್ನು ಖರೀದಿಸುವ ಪ್ರಮುಖ ದೇಶಗಳಾಗಿವೆ.

ABOUT THE AUTHOR

...view details