ನವದೆಹಲಿ : ಕೋವಿಡ್ ಬಿಕ್ಕಟ್ಟಿನ ಈ ಸಮಯದಲ್ಲಿ ಆರ್ಥಿಕತೆ ಚೇತರಿಕೆಯ ವೇಗ ‘ಆಹ್ಲಾದಕರ ಆಶ್ಚರ್ಯ’ ತಂದಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದಲ್ಲಿ ಉತ್ಪಾದಕತೆ ಹೆಚ್ಚುತ್ತಿದ್ದು, ಆಮದಿನ ಪ್ರಮಾಣ ಕಡಿಮೆಯಾಗಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಂಡಿದೆ. ಉತ್ಪಾದಕತೆ ಹೆಚ್ಚಾಗಿದ್ದರಿಂದ ಜಿಡಿಪಿ ಕೂಡ ಹೆಚ್ಚುತ್ತಿದೆ.
ಕೊರೊನಾ ಅವಧಿಯಲ್ಲಿ ಆರ್ಥಿಕ ಚಟುವಟಿಕೆ ಕುಂಠಿತಗೊಂಡಿದ್ದು, 2020-21 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 23.9 ರಷ್ಟು ಜಿಡಿಪಿ ಕುಗ್ಗಿದೆ. ಜೂನ್ನಲ್ಲಿ ವ್ಯಾಪಾರ, ವಹಿವಾಟು ಗರಿಗೆದರಿದ್ದರಿಂದ ಆರ್ಥಿಕತೆ ಹೆಚ್ಚಾಗಿದೆ ಎಂದು ಅಧಿಕೃತ ಅಂಕಿ, ಅಂಶಗಳು ತಿಳಿಸಿವೆ.
ಹಿಂದಿನ ತ್ರೈಮಾಸಿಕದಲ್ಲಿ ಉತ್ಪಾನೆಯು ಶೇಕಡಾ 39 ರಷ್ಟು ಭಾರಿ ಪ್ರಮಾಣದಲ್ಲಿ ಕುಗ್ಗಿದ ನಂತರ, ಜುಲೈ, ಸೆಪ್ಟೆಂಬರ್‌ನಲ್ಲಿ ಶೇಕಡಾ 0.6 ರಷ್ಟು ಬೆಳವಣಿಗೆ ಕಂಡಿದೆ.
ಕೃಷಿ ಕ್ಷೇತ್ರದಲ್ಲಿ ಶೇಕಡಾ 3.4 ರಷ್ಟು ಏರಿಕೆಯಾದರೆ, ಸೇವಾ ವಲಯವು ನಿರೀಕ್ಷೆಗಿಂದ ಕಡಿಮೆ ಅಂದರೆ ಶೇಕಡಾ 15.6 ರಷ್ಟು ಬೆಳವಣಿಗೆ ಕಂಡಿದೆ. ಜುಲೈ- ಸೆಪ್ಟೆಂಬರ್‌ನಲ್ಲಿ ಜಿಡಿಪಿ ಶೇಕಡಾ 7.5 ರಷ್ಟಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಶೇಕಡಾ 4.4 ರಷ್ಟು ಜಿಡಿಪಿ ಅಭಿವೃದ್ಧಿಯಾಗಿತ್ತು.