ಕರ್ನಾಟಕ

karnataka

ETV Bharat / business

ಅಗ್ಗದ ಬೆಲೆಯ ಸುರಕ್ಷಿತ ಹೂಡಿಕೆ ಗೋಲ್ಡ್ ಬಾಂಡ್ ಖರೀದಿ: ಬಡ್ಡಿ ಎಷ್ಟು, ಎಲ್ಲಿ, ಹೇಗೆ? ಇಲ್ಲಿದೆ ಮಾಹಿತಿ - ಸವರನ್ ಗೋಲ್ಡ್ ಬಾಂಡ್ ತೆರಿಗೆ ಲಾಭ

ಹಳದಿ ಲೋಹವನ್ನು ಕೇವಲ ಹೂಡಿಕೆಯ ದೃಷ್ಟಿಕೋನದಿಂದ ನೋಡುವ ಖರೀದಿದಾರರು ಭೌತಿಕ ಲೋಹವನ್ನು ಖರೀದಿಸುವುದಕ್ಕಿಂತ ಹೆಚ್ಚಿನ ಅನುಕೂಲಗಳಿಂದಾಗಿ ಈ ಚಿನ್ನದ ಬಾಂಡ್‌ಗಳಿಗೆ ಚಂದಾದಾರರಾಗಬಹುದು. ಸವರನ್​ ಗೋಲ್ಡ್​ ಬಾಂಡ್‌ಗಳ (ಎಸ್‌ಜಿಬಿ) ಚಂದಾದಾರಿಕೆ ಇಂದಿನಿಂದಲೇ ಶುರುವಾಗಿದೆ.

ಸವರನ್ ಗೋಲ್ಡ್ ಬಾಂಡ್
ಸವರನ್ ಗೋಲ್ಡ್ ಬಾಂಡ್

By

Published : May 24, 2021, 3:15 PM IST

ಮುಂಬೈ: ನೀವು ಚಿನ್ನದಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸೋಮವಾರದಿಂದ ಪ್ರಾರಂಭವಾಗುವ ಐದು ದಿನಗಳವರೆಗೆ ಸಾರ್ವಭೌಮ ಚಿನ್ನದ ಬಾಂಡ್‌ (ಎಸ್‌ಜಿಬಿ) ಒಂದು ಗ್ರಾಂ. ಚಿನ್ನಕ್ಕೆ 4,842 ರೂ. ನಿಗದಿಪಡಿಸಿದೆ.

ಹಳದಿ ಲೋಹವನ್ನು ಕೇವಲ ಹೂಡಿಕೆಯ ದೃಷ್ಟಿಕೋನದಿಂದ ನೋಡುವ ಖರೀದಿದಾರರು ಭೌತಿಕ ಲೋಹವನ್ನು ಖರೀದಿಸುವುದಕ್ಕಿಂತ ಹೆಚ್ಚಿನ ಅನುಕೂಲಗಳಿಂದಾಗಿ ಈ ಚಿನ್ನದ ಬಾಂಡ್‌ಗಳಿಗೆ ಚಂದಾದಾರರಾಗಬಹುದು. ಸವರನ್​ ಗೋಲ್ಡ್​ ಬಾಂಡ್‌ಗಳ (ಎಸ್‌ಜಿಬಿ) ಚಂದಾದಾರಿಕೆ ಇಂದಿನಿಂದಲೇ ಶುರುವಾಗಿದೆ.

2021ರ ಮೇ 28ರವರೆಗೆ ಬಾಂಡ್‌ಗಳು ಚಂದಾದಾರಿಕೆಗಾಗಿ ತೆರೆದಿರುವುದರಿಂದ, ಈಟಿವಿ ಭಾರತ ಈ ಯೋಜನೆಯ ಕೆಲವು ಪ್ರಮುಖ ಲಕ್ಷಣಗಳನ್ನು ನಿಮ್ಮ ಮುಂದಿ ಇಡುತ್ತಿದೆ.

ಏನಿದು ಚಿನ್ನದ ಬಾಂಡ್​?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅನುದಾನದ ವಿತರಣಾ ಬೆಲೆ ಪ್ರತಿ ಗ್ರಾಂ.ಗೆ 4,842 ರೂ. ನಿಗದಿಪಡಿಸಲಾಗಿದೆ. ಹೂಡಿಕೆದಾರರು ಮೇ 28ರವರೆಗೆ ಚಂದಾದಾರರಾಗಬಹುದು.

ಬಾಂಡ್ ಖರೀದಿಯ ವಿಧಾನ:

ಭಾರತೀಯರಿಗಷ್ಟೇ ಈ ಬಾಂಡ್​ಗಳ ಖರೀದಿಗೆ ಅವಕಾಶವಿದೆ. ಹಿಂದೂ ಅವಿಭಜಿತ ಕುಟುಂಬಗಳು, ಟ್ರಸ್ಟ್‌ಗಳು, ವಿಶ್ವವಿದ್ಯಾಲಯಗಳು, ಚಾರಿಟಬಲ್‌ ಸಂಸ್ಥೆಗಳು ಸಹ ಖರೀದಿಸಬಹುದು.

ಮಹತ್ವದ ದಿನಗಳು

ಚಂದಾದಾರ ದಿನಾಂಕ: ಮೇ 24ರಿಂದ​ 28ರ ವರೆಗೆ ಖರೀದಿ,

ಬೆಲೆ ಮತ್ತು ಪಾವತಿ

ಭಾರತೀಯ ಚಿನ್ನ ಹಾಗೂ ಆಭರಣ ಸಂಘಟನೆ ಪ್ರಕಟಿಸುವ ದರ ಆಧರಿಸಿ ಬಾಂಡ್‌ಗಳ ಬೆಲೆ ನಿಗದಿಪಡಿಸಲಾಗುತ್ತದೆ. ಬಾಂಡ್‌ ಖರೀದಿಸುವ ಸಂದರ್ಭದಲ್ಲಿ ಮಾರುಕಟ್ಟೆಯ ಗ್ರಾಂ. ಚಿನ್ನದ ದರಕ್ಕಿಂದ ₹ 50 ಕಡಿಮೆ ನಿಗದಿ ಮಾಡಲಾಗುತ್ತದೆ.

ಮಾರಾಟ ಆಗುವ ಸ್ಥಳಗಳು

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ), ಅಂಚೆ ಕಚೇರಿಗಳು, ಬ್ಯಾಂಕ್‌ಗಳು, ಸ್ಟಾಕ್‌ ಹೋಲ್ಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎಸ್‌ಎಚ್‌ಸಿಐಎಲ್‌) ಮತ್ತು ಮುಂಬೈ ಷೇರು ವಿನಿಮಯ ಕೇಂದ್ರದಂಥ ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳಲ್ಲಿ ಖರೀದಿಸಬಹುದು. ಕನಿಷ್ಠ ಒಂದು ಗ್ರಾಂ. ಚಿನ್ನವನ್ನು ಬಾಂಡ್ ರೂಪದಲ್ಲಿ ಖರೀದಿಸಬಹುದು. ಹಣಕಾಸು ವರ್ಷದಲ್ಲಿ ವ್ಯಕ್ತಿಯೊಬ್ಬ 500 ಗ್ರಾಂ ತನಕ ಖರೀದಿ ಅವಕಾಶವಿದೆ.

ಬಡ್ಡಿ ಮತ್ತು ಬಾಂಡ್ ಅವಧಿ

ಚಿನ್ನದ ಬಾಂಡ್‌ಗಳಿಗೆ ವಾರ್ಷಿಕ ಶೇ 2.5ರಷ್ಟು ಬಡ್ಡಿ ದೊರೆಯುತ್ತದೆ. ಬಡ್ಡಿಯನ್ನು ಪ್ರತಿ 6 ತಿಂಗಳಿಗೊಮ್ಮೆ ನೀಡಲಾಗುತ್ತದೆ. ಬಾಂಡ್‌ ಅವಧಿ 8 ವರ್ಷಗಳು. ಜತೆಗೆ 5ನೇ ವರ್ಷದಲ್ಲಿ ಯೋಜನೆಯಿಂದ ಹೊರಬರುವ ಅವಕಾಶವಿದೆ.

ತೆರಿಗೆ

ಚಿನ್ನದ ಯೋಜನೆಗಳಿಗೆ ಅನ್ವಯವಾಗುವಂತಹ ಆದಾಯ ತೆರಿಗೆ ಕಾಯ್ದೆ ಚಿನ್ನದ ಬಾಂಡ್​ಗೂ ಅನ್ವಯವಾಗುತ್ತದೆ. ಬಾಂಡ್‌ಗಳು ಗಳಿಸುವ ಬಡ್ಡಿಯನ್ನು ಹೂಡಿಕೆದಾರರ ಗಳಿಕೆಗೆ ಸೇರಿಸಿ, ತೆರಿಗೆ ವಿಧಿಸಲಾಗುತ್ತದೆ.

ABOUT THE AUTHOR

...view details