ನವದೆಹಲಿ: ಏಷ್ಯಾದ ಇತರ ದೇಶಗಳಾದ ಚೀನಾ, ಸಿಂಗಾಪುರ್ ಮತ್ತು ಹಾಂಗ್‌ಕಾಂಗ್‌ಗಳಂತೆ 15 ವಿದೇಶಿ ಬ್ಯಾಂಕ್ಗಳು ಭಾರತದಲ್ಲಿ ತಮ್ಮ ಶಾಖೆಗಳನ್ನು ತೆರೆಯಲು ಸೆಂಟ್ರಲ್ ಬ್ಯಾಂಕ್ ಜೊತೆಗೆ ಮಾತುಕತೆ ನಡೆಸುತ್ತಿವೆ.
ಭಾರತಕ್ಕೆ ಬರಲಿವೆ 15 ಹೊಸ ವಿದೇಶಿ ಬ್ಯಾಂಕ್ಗಳು.. ಚೀನಾ,ಸಿಂಗಾಪುರ್ಗೆ ಠಕ್ಕರ್..! - ವಿದೇಶಿ ಬ್ಯಾಂಕ್ಗಳ ಸುದ್ದಿ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ ) ದತ್ತಾಂಶದ ಪ್ರಕಾರ ಈಗಾಗಲೇ 46 ವಿದೇಶಿ ಹಾಗೂ ಎರಡು ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ (ಡಬ್ಲ್ಯುಒಎಸ್) ಬ್ಯಾಂಕ್ಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಾರತಕ್ಕೆ ಹೊಸದಾಗಿ 15 ಬ್ಯಾಂಕ್ಗಳು ತಮ್ಮ ಶಾಖೆಗಳನ್ನು ತೆರೆಯಲು ಆಸಕ್ತಿ ತೋರುತ್ತಿವೆ ಎಂದು ಆರ್‌ಬಿಐ ಹಣಕಾಸು ಸಚಿವಾಲಯಕ್ಕೆ ತಿಳಿಸಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದತ್ತಾಂಶದ ಪ್ರಕಾರ ಈಗಾಗಲೇ 46 ವಿದೇಶಿ ಹಾಗೂ ಎರಡು ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ (ಡಬ್ಲ್ಯುಒಎಸ್) ಬ್ಯಾಂಕ್ಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಾರತಕ್ಕೆ ಹೊಸದಾಗಿ 15 ಬ್ಯಾಂಕ್ಗಳು ತಮ್ಮ ಶಾಖೆಗಳನ್ನು ತೆರೆಯಲು ಆಸಕ್ತಿ ತೋರುತ್ತಿವೆ ಎಂದು ಆರ್‌ಬಿಐ ಹಣಕಾಸು ಸಚಿವಾಲಯಕ್ಕೆ ತಿಳಿಸಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಡಬ್ಲ್ಯುಒಎಸ್ ನಿಯಮದಡಿ ಕಾರ್ಯನಿರ್ವಹಿಸುವ ಬ್ಯಾಂಕ್ಗಳು ಹೊರತುಪಡಿಸಿ ವಿದೇಶಿ ಬ್ಯಾಂಕ್ಗಳು ಭಾರತದಲ್ಲಿ ಶಾಖೆ ತೆರೆಯಲು ಆರ್‌ಬಿಐನ ಪೂರ್ವಾನುಮತಿ ಪಡೆಯಬೇಕು. ವಿದೇಶಿ ಬ್ಯಾಂಕ್ಗಳು ತಮ್ಮ ವಾಣಿಜ್ಯ ನಿರ್ಧಾರದ ಆಧಾರದ ಮೇಲೆ ಭಾರತದಲ್ಲಿ ತಮ್ಮ ಶಾಖೆಗಳನ್ನು ತೆರೆಯಬೇಕೆಂದು ಆರ್‌ಬಿಐ ತಿಳಿಸಿದೆ.