ಕರ್ನಾಟಕ

karnataka

ETV Bharat / business

ದಯವಿಟ್ಟು ಗಮನಿಸಿ: ಇಂದು ಮತ್ತೆ ನಾಳೆ ಎಸ್​​ಬಿಐ ಬ್ಯಾಂಕಿಂಗ್​ ಸೇವೆಯಲ್ಲಿ ಕೆಲ ವ್ಯತ್ಯಯ! - ಇಂಟರ್ನೆಟ್ ಬ್ಯಾಂಕಿಂಗ್

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಈ ಹಿಂದೆ ಜುಲೈ 10ರಂದು ಹಾಗೂ ಮೇ ತಿಂಗಳ 22- 23ರಂದು ತನ್ನ ಬ್ಯಾಂಕಿಂಗ್​ ಸೇವೆಗಳ ಅಪ್​​ಗ್ರೇಡ್​ ಹಾಗೂ ನಿರ್ವಹಣೆ ಸಂಬಂಧ ಕಾರ್ಯವನ್ನು ಸ್ಥಗಿತಗೊಳಿಸಿತ್ತು. ಮೇ 22ನೇ ತಾರೀಕಿನಂದು NEFT, RTGS, YONO ಹಾಗೂ YONO Lite ಸೇವೆಗಳು ಲಭ್ಯ ಇರಲಿಲ್ಲ.

some-service-of-sbi-remain-affected
some-service-of-sbi-remain-affected

By

Published : Jul 16, 2021, 12:29 PM IST

ನವದೆಹಲಿ:ಇಂದು ರಾತ್ರಿಯಿಂದ ನಾಳೆ ಮಧ್ಯಾಹ್ನದವರೆಗೂಎಸ್​​​​ಬಿಐ ಬ್ಯಾಂಕಿಂಗ್​​ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಭಾರತೀಯ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ತಿಳಿಸಿದೆ. ಇಂದು ರಾತ್ರಿ 10:45 ರಿಂದ ನಾಳೆ ಮಧ್ಯಾಹ್ನ 1:15ರವರೆಗೆ ಇಂಟರ್ನೆಟ್ ಬ್ಯಾಂಕಿಂಗ್/ಯೋನೊ/ಯೋನೊ ಲೈಟ್/ಯುಪಿಐ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬ್ಯಾಂಕ್​ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಈ ಹಿಂದೆ ಜುಲೈ 10ರಂದು ಹಾಗೂ ಮೇ ತಿಂಗಳ 22- 23ರಂದು ತನ್ನ ಬ್ಯಾಂಕಿಂಗ್​ ಸೇವೆಗಳ ಅಪ್​​ಗ್ರೇಡ್​ ಹಾಗೂ ನಿರ್ವಹಣೆ ಸಂಬಂಧ ಕಾರ್ಯವನ್ನು ಸ್ಥಗಿತಗೊಳಿಸಿತ್ತು. ಮೇ 22ನೇ ತಾರೀಕಿನಂದು NEFT, RTGS, YONO ಹಾಗೂ YONO Lite ಸೇವೆಗಳು ಲಭ್ಯ ಇರಲಿಲ್ಲ.

ಇದೀಗ ಮತ್ತೆ ಇಂತಹುದೇ ಅಪ್​​ಗ್ರೇಡ್​​ ಮಾಡಲಾಗುತ್ತಿದೆ. ಹಾಗಾಗಿ ಸೇವೆಯಲ್ಲಿ ಆಗುವ ವ್ಯತ್ಯಯಕ್ಕೆ ಗ್ರಾಹಕರು ಸಹಕರಿಸಬೇಕು ಎಂದು ಬ್ಯಾಂಕ್​ ಮನವಿ ಮಾಡಿದೆ.

ABOUT THE AUTHOR

...view details