ಕರ್ನಾಟಕ

karnataka

ETV Bharat / business

ಪ್ಯಾರಾ ಮಿಲಿಟರಿ ಕ್ಯಾಂಟೀನ್​ಗಳಲ್ಲಿ ಪ್ರಥಮ ಬಾರಿಗೆ ದೇಶಿಯ ವಸ್ತುಗಳ ಮಾರಾಟ - ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ

ಭಾರತದಾದ್ಯಂತ ಸೋಮವಾರದಿಂದ ಕೇವಲ ಸ್ಥಳೀಯ ಸರಕುಗಳ ಮಾರಾಟವನ್ನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಕ್ಯಾಂಟೀನ್‌ಗಳು ಪ್ರಾರಂಭಿಸಿವೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮೂಲಕ "ಸ್ವದೇಶಿ" ವಸ್ತುಗಳನ್ನು ವಿತರಿಸಲಾಯಿತು.

paramilitary canteens
ಸಿಎಪಿಎಫ್ ಕ್ಯಾಂಟೀನ್

By

Published : Jun 1, 2020, 7:14 PM IST

ನವದೆಹಲಿ:ಸ್ವಾವಲಂಬಿ ಭಾರತಕ್ಕೆ ಸ್ಥಳೀಯ ಹಾಗೂ ದೇಶಿಯ ವಸ್ತುಗಳನ್ನು ಖರೀದಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟ ಬಳಿಕ ಪ್ರಥಮ ಬಾರಿಗೆ ಎಲ್ಲ ಸಶಸ್ತ್ರ ಪಡೆಗಳ ಕ್ಯಾಂಟೀನ್​ನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ.

ಜೂನ್​ 1ರಿಂದ ಎಲ್ಲ ಸಶಸ್ತ್ರ ಪಡೆಗಳ ಕ್ಯಾಂಟೀನ್​​ಗಳಲ್ಲಿ ಸ್ಥಳೀಯ ವಸ್ತುಗಳನ್ನು ಮಾತ್ರ ಮಾರಾಟ ಮಾಡುವಂತೆ ಗೃಹ ಸಚಿವ ಅಮಿತ್ ಶಾ ಅವರು ಈ ಹಿಂದೆಯೇ ಆದೇಶಿಸಿದ್ದರು. ಇಂದು ಸಿಎಪಿಎಫ್ ಕ್ಯಾಂಟೀನ್​ಗಳು ಅನುಷ್ಠಾನಕ್ಕೆ ತಂದಿವೆ.

ಖಾದಿ ಕುರ್ತಾ, ಹತ್ತಿ ಜಾಕೆಟ್‌ಗಳು, ಜೇನುತುಪ್ಪ, ಸಾಸಿವೆ ಎಣ್ಣೆ, ಅಗರಬತ್ತಿ, ರಾಷ್ಟ್ರೀಯ ಧ್ವಜ ಮತ್ತು 13 ಆಹಾರ ಉತ್ಪನ್ನಗಳ ತಿನಿಸಿ ಕಳೆದ ಶನಿವಾರ ದೆಹಲಿಯ ಐದು ಸಿಎಪಿಎಫ್ ಕ್ಯಾಂಟೀನ್‌ಗಳಿಗೆ ಕೆವಿಐಸಿ ವಿತರಿಸಿದೆ.

ಸಿಎವಿಎಫ್ ಸರಬರಾಜುಗಳನ್ನು ನೋಡಿಕೊಳ್ಳಲು ಕೆವಿಐಸಿ ವಿಶೇಷ ತಂಡವನ್ನು ರಚಿಸಿದೆ. ದೇಶಾದ್ಯಂತ ಈ ಸಂಸ್ಥೆಗಳಲ್ಲಿ ಗರಿಷ್ಠ ಬೇಡಿಕೆಗಳನ್ನು ಈಡೇರಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಕೆವಿಐಸಿ ಪಡೆದ ಸರಬರಾಜು ಆರ್ಡರ್​ನಲ್ಲಿ ಹತ್ತಿಯ ಟವೆಲ್, ಅಚಾರ್ (ಉಪ್ಪಿನಕಾಯಿ), ಅಗರಬತ್ತಿ ಇತ್ಯಾದಿಗಳೂ ಸೇರಿವೆ.

ಈ ಕ್ಯಾಂಟೀನ್‌ಗಳಲ್ಲಿ ಪೂರೈಸಬೇಕಾದ 63 ಹೊಸ ಉತ್ಪನ್ನಗಳಾದ ಖಾದಿ ಬಟ್ಟೆ, ಉಣ್ಣೆ, ಗಿಡಮೂಲಿಕೆ ತೈಲಗಳು, ಶಾಂಪೂ, ಸಾಬೂನು, ಫೇಸ್ ವಾಶ್, ಟೀ ಮತ್ತು ಕಾಫಿ ಮತ್ತು ಇತರ 63 ಉತ್ಪನ್ನಗಳ ಪಟ್ಟಿಯನ್ನು ಕೆವಿಐಸಿ ಸ್ವೀಕರಿಸಿದೆ.

ABOUT THE AUTHOR

...view details