ಕರ್ನಾಟಕ

karnataka

By

Published : Feb 26, 2020, 7:08 PM IST

Updated : Feb 27, 2020, 1:01 PM IST

ETV Bharat / business

ಕನ್ನಡದಲ್ಲೂ ಬಂತು ಜಿಎಸ್​ಟಿ ಹೆಲ್ಪ್​ಲೈನ್....365 ದಿನವೂ ಲಭ್ಯವಿರುವ GSTN ನಂ. ಹೀಗಿದೆ..!

ಹೊಸದಾಗಿ ಪರಿಚಯಿಸಲಾದ ನಂಬರ್​ನಿಂದ ಈ ಹಿಂದೆ ಚಾಲ್ತಿಯಲ್ಲಿದ್ದ ಜಿಎಸ್​ಟಿ ಹೆಲ್ಫ್​ ಡೆಸ್ಕನ್​ 0120-24888999 ನಂಬರ್ ಸೇವೆಯಿಂದ ಸ್ಥಗಿತಗೊಳಿಸಲಾಗಿದೆ. ತೆರಿಗೆದಾರರು ಹತ್ತು ಭಾಷೆಗಳಲ್ಲಿ ತಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಹಿಂದಿ, ಇಂಗ್ಲಿಷ್, ಬೆಂಗಾಲಿ, ಮರಾಠಿ, ತೆಲುಗು, ತಮಿಳು, ಗುಜರಾತ್, ಓಡಿಯಾ, ಮಲಯಾಳಂ, ಒಂಜಾಬ್ ಮತ್ತು ಅಸ್ಸೋಂ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಲಿದೆ.

GSTN
ಜಿಎಸ್​ಟಿಎನ್​​

ನವದೆಹಲಿ: ಸರಕು ಮತ್ತು ಸೇವೆಗಳ ತೆರಿಗೆ ಜಾಲ (ಜಿಎಸ್‌ಟಿಎನ್) ಜಿಎಸ್‌ಟಿ ಹೆಲ್ಪ್‌ಡೆಸ್ಕ್‌ಗಾಗಿ ನೂತನ ಟೋಲ್-ಫ್ರೀ ಸಂಖ್ಯೆಗೆ ಚಾಲನೆ ನೀಡಿದ್ದು, ಇದು ಪರೋಕ್ಷ ತೆರಿಗೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು 365 ದಿನಗಳು ಕಾರ್ಯನಿರ್ವಹಿಸಲಿದೆ.

ತೆರಿಗೆ ವ್ಯವಸ್ಥೆಯನ್ನು ಹೆಚ್ಚು ಸದೃಢವಾಗಿ ಮತ್ತು ಪಾರದರ್ಶಕ ಆಗಿಸುವ ಮೂಲಕ ತೆರಿಗೆದಾರರ ಅನುಭವವನ್ನು ಸುಧಾರಿಸಲು ಜಿಎಸ್​​ಟಿ ಸಹಾಯವಾಣಿ ಸೇವೆ ಲಭ್ಯವಾಗಲಿದೆ ಎಂದು ಜಿಎಸ್​ಟಿಎನ್ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಎಸ್​ಟಿಎನ್​ನ ತಂದಿರುವ ಉಚಿತ ಸಹಾವಾಣಿ ಸಂಖ್ಯೆಯು 1800 103 4786 ಆಗಿದ್ದು, ವರ್ಷದ 365 ದಿನಗಳ ಕಾಲ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ಕರೆ ಮಾಡಬಹುದು ಎಂದಿದೆ.

ಹೊಸದಾಗಿ ಪರಿಚಯಿಸಲಾದ ನಂಬರ್​ನಿಂದ ಈ ಹಿಂದೆ ಚಾಲ್ತಿಯಲ್ಲಿದ್ದ ಜಿಎಸ್​ಟಿ ಹೆಲ್ಫ್​ ಡೆಸ್ಕನ್​ 0120-24888999 ನಂಬರ್ ಸೇವೆಯಿಂದ ಸ್ಥಗಿತಗೊಳಿಸಲಾಗಿದೆ. ತೆರಿಗೆದಾರರು ಹತ್ತು ಭಾಷೆಗಳಲ್ಲಿ ತಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಹಿಂದಿ, ಇಂಗ್ಲಿಷ್, ಬೆಂಗಾಲಿ, ಮರಾಠಿ, ತೆಲುಗು, ತಮಿಳು, ಗುಜರಾತ್, ಓಡಿಯಾ, ಮಲಯಾಳಂ, ಪಂಜಾಬ್ ಮತ್ತು ಅಸ್ಸೋಂ ಭಾಷೆಯಲ್ಲಿ ಪ್ರತಿಕ್ರಿಯೆ ನೀಡಲಿದೆ.

Last Updated : Feb 27, 2020, 1:01 PM IST

ABOUT THE AUTHOR

...view details