ಕರ್ನಾಟಕ

karnataka

ETV Bharat / business

ಮೋದಿ ಅಂದುಕೊಂಡಂತಿಲ್ಲ ಆರ್ಥಿಕತೆ: ಪಾತಾಳಕ್ಕಿಳಿದ ಪೆಟ್ರೋಲ್​, ಡೀಸೆಲ್​ ಬಳಕೆ - ಡೀಸೆಲ್ ಬಳಕೆ

ಪ್ರಥಮ ಬಾರಿಗೆ ಕಳೆದ ಹಲವು ತಿಂಗಳಿಂದ ತೈಲ ಬೇಡಿಕೆ ಮತ್ತು ಆಮದು ತೀವ್ರ ಕುಸಿತ ಕಾಣುತ್ತಿವೆ. ಮಂದಗತಿಯ ಆರ್ಥಿಕತೆಯು ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಇಂಧನ ಕ್ಷೇತ್ರದ ಮೇಲೆ ಪರಿಣಾಮ ಬೀರಲು ಆರಂಭಿಸಿದೆ. ತೈಲ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಸೆಪ್ಟೆಂಬರ್‌ನಲ್ಲಿ 105.7 ಮಿಲಿಯನ್ ಟನ್‌ಗಳಿಗೆ ಇಳಿದಿದೆ. ಇದು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅತ್ಯಂತ ಕೆಳಮಟ್ಟದ ಕುಸಿತವಾಗಿದೆ.

ಸಾಂದರ್ಭಿಕ ಚಿತ್ರ

By

Published : Oct 17, 2019, 10:13 PM IST

ನವದೆಹಲಿ: ಪ್ರಸ್ತುತದಲ್ಲಿನ ಆರ್ಥಿಕ ಕುಸಿತದಿಂದಾಗಿ ಒತ್ತಡ ಎದುರಿಸುತ್ತಿರುವ ಕ್ಷೇತ್ರಗಳ ಪಟ್ಟಿಗೆ ತೈಲ ವಲಯವು ಇತ್ತೀಚಿನ ಸೇರ್ಪಡೆಯಾಗಿದೆ.

ಇದೇ ಪ್ರಥಮ ಬಾರಿಗೆ ಕಳೆದ ಹಲವು ತಿಂಗಳಿಂದ ತೈಲ ಬೇಡಿಕೆ ಮತ್ತು ಆಮದು ತೀವ್ರ ಕುಸಿತ ಕಾಣುತ್ತಿವೆ. ಮಂದಗತಿಯ ಆರ್ಥಿಕತೆಯು ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಇಂಧನ ಕ್ಷೇತ್ರದ ಮೇಲೆ ಪರಿಣಾಮ ಬೀರಲು ಆರಂಭಿಸಿದೆ.

ತೈಲ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಸೆಪ್ಟೆಂಬರ್‌ನಲ್ಲಿ 105.7 ಮಿಲಿಯನ್ ಟನ್‌ಗಳಿಗೆ ಇಳಿದಿದೆ. ಇದು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅತ್ಯಂತ ಕೆಳಮಟ್ಟದ ಕುಸಿತವಾಗಿದೆ. ವಾಹನ ಇಂಧನಗಳಾದ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯಲ್ಲಿ ಸ್ಥಿರವಾದ ಕುಸಿತ ಕಂಡುಬಂದಿದೆ.

ಸೆಪ್ಟೆಂಬರ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯು ಕ್ರಮವಾಗಿ 2.3 ಮತ್ತು 5.8 ಮಿಲಿಯನ್ ಟನ್ ಮಟ್ಟಕ್ಕೆ ಇಳಿಕೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರತಿ ತಿಂಗಳು ಈ ಎರಡೂ ಉತ್ಪನ್ನಗಳ ಅನುಭೋಗದ ಪ್ರಮಾಣ ಇಳಿಕೆಯಾಗಿದೆ. ಈ ನಿಧಾನಗತಿಯು ತೈಲ ಕ್ಷೇತ್ರದ ಮೇಲೆ ನಷ್ಟವನ್ನುಂಟುಮಾಡುತ್ತಿದ್ದು, 2019ರ ಏಪ್ರಿಲ್- ಆಗಸ್ಟ್ ಅವಧಿಯಲ್ಲಿ ತೈಲ ಆಮದು ಶೇ 0.5 ರಷ್ಟು ಕುಸಿದಂತಾಗಿದೆ.

ABOUT THE AUTHOR

...view details