ಕರ್ನಾಟಕ

karnataka

ETV Bharat / business

ಅತಿ ದೀರ್ಘ ಬಜೆಟ್​​​ ಮಂಡನೆ ಮಾಡಿದ ಸೀತಾರಾಮನ್​... ಏನಿದರ ವಿಶೇಷತೆ! - 2020-21ರ ಬಹುನಿರೀಕ್ಷಿತ ಕೇಂದ್ರ ಸರ್ಕಾರದ ಆಯವ್ಯವ

2020-21ರ ಬಹುನಿರೀಕ್ಷಿತ ಕೇಂದ್ರ ಸರ್ಕಾರದ ಆಯವ್ಯವನ್ನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ಮಂಡಿಸಿದ್ದು, ದೀರ್ಘ ಭಾಷಣದ ಮೂಲಕ ಆಯವ್ಯಯದ ಎಲ್ಲಾ ಅಂಶಗಳನ್ನು ಪ್ರಕಟಿಸಿದ್ದಾರೆ.

Sitharaman
ವಿತ್ತ ಸಚಿವೆ ನಿರ್ಮಲಾ ಸೀತಾರಮನ್

By

Published : Feb 1, 2020, 5:22 PM IST

ನವದೆಹಲಿ:ಕಾಶ್ಮೀರಿ ಪದ್ಯ ಹಾಗೂ ತಮಿಳಿನ ಪದ್ಯದ ಸಾಲುಗಳು ಮತ್ತು ಸರಸ್ವತಿ - ಸಿಂದೂ ನಾಗರಿಕತೆಯ ಉಲ್ಲೇಖಗಳೊಂದಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ 2020-21 ರ ಬಜೆಟ್​​ ಅನ್ನು ಇಂದು ಪೂರ್ವಾಹ್ನ 11:20ರ ಸುಮಾರಿಗೆ ಓದಲು ಆರಂಭಿಸಿದವರು. ಬರೋಬ್ಬರಿ 160 ನಿಮಿಷಗಳ ಕಾಲ ನಿರರ್ಗಳವಾಗಿ ಓದಿ ಮುಗಿಸಿದರು. ಜ್ವರದ ಹಿನ್ನೆಲೆಯ ಇನ್ನೆರಡು ಪೇಜ್​ಗಳು ಓದುವುದನ್ನ ಕೈಬಿಟ್ಟು ಬಜೆಟ್​ ಮಂಡನೆ ಮುಗಿಸಿದರು.

ಶುಭ್ರ ಪ್ರಕಾಶಮಾನವಾದ ಹಳದಿ ಸೀರೆ ಧರಿಸಿದ್ದ ಸಚಿವೆ ಸೀತಾರಾಮನ್​​, 2020-21ರ ಕೇಂದ್ರ ಬಜೆಟ್​​ನ್ನು ಮಂಡಿಸಿದ್ದು, ಈ ಬಜೆಟ್​​ನಲ್ಲಿ ವೈಯಕ್ತಿಕ ಆದಾಯ ತೆರಿಗೆ ದರವನ್ನು ಕಡಿತಗೊಳಿಸಿದ್ದು, ಸೇರಿದಂತೆ ಅನೇಕ ಪ್ರಕಟಣೆಗಳನ್ನ ಮಾಡಿದರು. ಸಚಿವರ ಈ ಘೋಷಣೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಇನ್ನಿತರರು ಸಹ ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು.

ಮಹತ್ವಾಕಾಂಕ್ಷೆಯ ಭಾರತ, ಸರ್ವ ಸಮಾಜದ ಆರ್ಥಿಕ ಅಭಿವೃದ್ಧಿ ಈ ಬಜೆಟ್​​ನ ಪ್ರಮುಖ ವಿಷಯಗಳಾಗಿದ್ದು ವಿಶೇಷ. ಭವ್ಯ ಭಾರತ ಕಟ್ಟುವ ಘೋಷಣೆ ಮಾಡಿದ ಸೀತಾರಾಮನ್​​, ಸುಮಾರು 150 ನಿಮಿಷಗಳ ನಿರಂತರ ಬಜೆಟ್​​ ಮಂಡನೆ ನಂತರ ಕೊಂಚ ಆರೋಗ್ಯ ಸಮಸ್ಯೆಯಿಂದಾಗಿ ದಣಿದಿದ್ದರು. ಈ ವೇಳೆ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಸೀತಾರಾಮನ್​ಗೆ ಕ್ಯಾಂಡಿ(ಸಿಹಿ ತಿನಿಸು) ನೀಡಿದರು. ಇದಾದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್​ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸೇರಿದಂತೆ ಕೆಲ ಕಾಂಗ್ರೆಸ್​​ ನಾಯಕರು ಸಹ ಸೀತಾರಾಮನ್​ ಬಳಿ ಬಂದು ಅವರ ಆರೋಗ್ಯ ವಿಚಾರಿಸಿದರು.

ಕೊಂಚವೇ ಉಳಿದ ಬಜೆಟ್​​ ಮಂಡನೆ ಮಾಡಲು ಸಾಧ್ಯವಾಗದ ಹಿನ್ನೆಲೆ, ಸೀತಾರಮನ್​ ಸ್ಪೀಕರ್​ ಬಳಿ ಕಾಲಾವಕಾಶ ಕೇಳಿದರು. ನಂತರ ಆಯವ್ಯದ ಪಟ್ಟಿಯನ್ನು ಸ್ಪೀಕರ್​ಗೆ ಸಲ್ಲಿಸಿ ಸದನದಿಂದ ಹೊರ ನಡೆದರು.

ವಿತ್ತ ಸಚಿವೆ ಮಂಡಿಸಿದ ಈ ಬಜೆಟ್​ ಮಂಡನೆಯನ್ನು ಕಣ್ತುಂಬಿಕೊಳ್ಳಲು ಅವರ ಕುಟುಂಬದ ಸದಸ್ಯರು ಸದನದ ಗ್ಯಾಲರಿಯಲ್ಲಿ ಹಾಜರಿದ್ದರು. ಇನ್ನು ಈ ಬಜೆಟ್​​ ಮಂಡನೆ ವೇಳೆ, ಕಾಂಗ್ರೆಸ್​​ ಅಧ್ಯೆಕ್ಷೆ ಸೋನಿಯಾ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್​ರ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ABOUT THE AUTHOR

...view details