ಭಾರತದ ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆಗೆ ಬೇಕಿದೆ ಕಾಯಕಲ್ಪ
ಬಹುತೇಕ ವಾಣಿಜ್ಯ ಬ್ಯಾಂಕ್ಗಳು ಈಗಲೂ ಗ್ರಾಮೀಣ ಭಾಗದಲ್ಲಿ ಶಾಖೆ ಆರಂಭಿಸಲು ಹಿಂದೇಟು ಹಾಕುತ್ತಿವೆ. ಗ್ರಾಮೀಣ ಭಾಗದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಈಗಿರುವ ಸಿಬ್ಬಂದಿ ಸಂಖ್ಯೆ ಸೂಕ್ತ ಸೇವೆ ನೀಡಲು ಸಾಕಾಗುತ್ತಿಲ್ಲ. ಹೀಗಾಗಿ ಹೊಸ ಶಾಖೆ ತೆರೆಯುವುದು ಸಮಸ್ಯೆಯಾಗುತ್ತಿದೆ.
Shortage Of Banking Services
By
Published : Jun 18, 2020, 6:25 PM IST
ಭಾರತದ ಗ್ರಾಮೀಣ ಭಾಗಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಇನ್ನೂ ಸಮರ್ಪಕವಾಗಿಲ್ಲ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ವಾಣಿಜ್ಯ ಬ್ಯಾಂಕ್ಗಳ ಕೊರತೆ ಸಾಕಷ್ಟಿದೆ. ಆರ್ಬಿಐ ಪ್ರಕಾರ ಭಾರತದಲ್ಲಿರುವ ಒಟ್ಟು ವಾಣಿಜ್ಯ ಬ್ಯಾಂಕ್ ಶಾಖೆಗಳ ಸಂಖ್ಯೆ 1,55,211. ಇವುಗಳಲ್ಲಿ ಕೇವಲ 52,186 ಶಾಖೆಗಳು ಮಾತ್ರ ಗ್ರಾಮೀಣ ಭಾಗದಲ್ಲಿವೆ. ಅಂದರೆ ಒಟ್ಟು ಬ್ಯಾಂಕ್ ಶಾಖೆಗಳ ಶೇ 33.62 ರಷ್ಟು ಮಾತ್ರ ಗ್ರಾಮೀಣ ಭಾಗದಲ್ಲಿವೆ.
ಗ್ರಾಮಗಳಲ್ಲಿ ಶಾಖೆ ಆರಂಭಿಸಲು ಹಿಂದೇಟು!
ಬಹುತೇಕ ವಾಣಿಜ್ಯ ಬ್ಯಾಂಕ್ಗಳು ಈಗಲೂ ಗ್ರಾಮೀಣ ಭಾಗದಲ್ಲಿ ಶಾಖೆ ಆರಂಭಿಸಲು ಹಿಂದೇಟು ಹಾಕುತ್ತಿವೆ. ಗ್ರಾಮೀಣ ಭಾಗದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಈಗಿರುವ ಸಿಬ್ಬಂದಿ ಸಂಖ್ಯೆ ಸೂಕ್ತ ಸೇವೆ ನೀಡಲು ಸಾಕಾಗುತ್ತಿಲ್ಲ. ಹೀಗಾಗಿ ಹೊಸ ಶಾಖೆ ತೆರೆಯುವುದು ಸಮಸ್ಯೆಯಾಗುತ್ತಿದೆ.
2020-21 ರ ರಾಜ್ಯಗಳ ಬ್ಯಾಂಕಿಂಗ್ ವ್ಯವಸ್ಥೆ ಕುರಿತ ನಬಾರ್ಡ್ ವರದಿ
ವಾಣಿಜ್ಯ ಬ್ಯಾಂಕ್ಗಳು ಬಹುತೇಕ ನಗರ ಕೇಂದ್ರೀಕೃತವಾಗಿವೆ. ಎಸ್ಬಿಐ, ಯುಕೊ, ಯುನಿಯನ್ ಬ್ಯಾಂಕ್, ಇಂಡಿಯನ್ ಓವರಸೀಸ್ ಬ್ಯಾಂಕ್, ಬ್ಯಾಂಕ್ ಇಂಡಿಯಾಗಳನ್ನು ಹೊರತುಪಡಿಸಿದರೆ ಇತರ ಬ್ಯಾಂಕ್ಗಳು ಗ್ರಾಮೀಣ ಭಾಗದಲ್ಲಿ ಹೇಳಿಕೊಳ್ಳುವಂಥ ಅಸ್ತಿತ್ವ ಹೊಂದಿಲ್ಲ. ಇನ್ನು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಶಾಖೆಗಳು ಸಾಕಷ್ಟಿದ್ದರೂ ಅವುಗಳಲ್ಲಿ ಹೆಚ್ಚಿನ ಬ್ಯಾಂಕ್ಗಳ ಹಣಕಾಸು ಸ್ಥಿತಿ ಉತ್ತಮವಾಗಿಲ್ಲ. ಈ ಹಿಂದೆ ಎರಡು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ 786 ಶಾಖೆಗಳು ಗ್ರಾಮೀಣ ಪ್ರದೇಶದಲ್ಲಿದ್ದವು, ಆದರೆ ಈ ಎರಡೂ ಬ್ಯಾಂಕ್ಗಳು 2018-19 ನೇ ಸಾಲಿನಲ್ಲಿ 596.82 ಕೋಟಿ ರೂ. ನಷ್ಟ ಅನುಭವಿಸಿದವು.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಬ್ಯಾಂಕ್ ಶಾಖೆಗಳ ರಾಜ್ಯವಾರು ಸಂಖ್ಯೆ: