ಕರ್ನಾಟಕ

karnataka

ETV Bharat / business

'ನಿರ್ಮಲಾ'ಘೋಷಣೆಯ ಆಹ್ಲಾದಕರ.. ಕುಸಿದು ಬಿದ್ದ ಸೇವಾ ವಲಯ ಮತ್ತೆ ಮೇಲೆದ್ದಿತು.. - ಹಣಕಾಸು ವರ್ಷದ ಬೆಳವಣಿಗೆ

ಕಚ್ಚಾ ವಸ್ತುಗಳ ಖರೀದಿ ವೆಚ್ಚವು ಒಂದು ವರ್ಷದ ಹಿಂದಿನ ಮಟ್ಟಕ್ಕೆ ತಲುಪಿದ್ದರಿಂದ ಸೇವಾ ವಲಯದಲ್ಲಿ ಆತ್ಮವಿಶ್ವಾಸವು 3 ವರ್ಷಗಳ ಹಿಂದಿನ ಮಟ್ಟಕ್ಕೆ ಇಳಿದಿತ್ತು. ಸೇವಾ ವಲಯವು ದೇಶಿ ಆರ್ಥಿಕತೆಗೆ ಅರ್ಧಕ್ಕಿಂತ ಹೆಚ್ಚಿನ ಕೊಡುಗೆ ನೀಡುತ್ತಿದೆ. ಹೀಗಾಗಿ, ಸೇವಾ ವಲಯದಲ್ಲಿನ ಏರಿಳಿತಿದ ವಿದ್ಯಮಾನವು ಅರ್ಥ ವ್ಯವಸ್ಥೆ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರುತ್ತದೆ. ಇದನ್ನು ಅರಿತ ಕೇಂದ್ರ ಸರ್ಕಾರವು ಕಳೆದ ತಿಂಗಳಿಂದ ಆರ್ಥಿಕ ಸುಧಾರಣೆಯ ಭಾಗವಾಗಿ ಈ ಕ್ಷೇತ್ರಕ್ಕೂ ಅನ್ವಯಿಸುವಂತಹ ಕೆಲವು ಉಪಕ್ರಮಗಳನ್ನು ಘೋಷಿಸಿತ್ತು. ಅವುಗಳು ಈಗ ಒಂದೊಂದಾಗಿ ಫಲಕೊಡುತ್ತಿವೆ.

Service Sector
ಸೇವಾ ವಲಯ

By

Published : Dec 4, 2019, 2:11 PM IST

ನವದೆಹಲಿ:ಪ್ರಸಕ್ತ ಹಣಕಾಸು ವರ್ಷದ 3ನೇ ತ್ರೈಮಾಸಿಕದ ಆರಂಭದಲ್ಲಿಯೇ ದೇಶಿ ಆರ್ಥಿಕತೆಗೆ ಸಂಬಂಧಿಸಿದಂತೆ ನಿರಾಶಾದಾಯಕ ಬೆಳವಣಿಗೆಗಳು ಕಂಡು ಬಂದಿದ್ದ ಸೇವಾ ವಲಯ, ಸತತ 2 ತಿಂಗಳ ಕುಸಿತದ ಬಳಿಕ ಮತ್ತೆ ಹಳೆಯ ಲಯಕ್ಕೆ ಮರಳಿದೆ.

ನೂತನ ವ್ಯವಹಾರಿಕ ಆರ್ಡರ್​ಗಳು, ವೇಗದ ಉದ್ಯೋಗ ಸೃಷ್ಟಿ ಮತ್ತು ವೃದ್ಧಿಗೊಂಡ ವ್ಯಾಪಾರ- ವಹಿವಾಟಿನ ವಿಶ್ವಾಸದ ಮೂಲಕ ನವೆಂಬರ್‌ ತಿಂಗಳಲ್ಲಿ ಭಾರತೀಯ ಸೇವಾ ವಲಯದ ಚಟುವಟಿಕೆಗಳು ಬೆಳವಣಿಗೆಯ ಹಾದಿಗೆ ಮರಳಿದೆ ಎಂದು ಎಚ್‌ ಎಸ್ ಮಾರ್ಕಿಟ್ ಭಾರತ ಸೇವೆಗಳ ವ್ಯವಹಾರ ಚಟುವಟಿಕೆ ಸೂಚ್ಯಂಕ ತಿಳಿಸಿದೆ.

ದೇಶಿ ಆರ್ಥಿಕತೆಯಲ್ಲಿ ನಿರಾಶದಾಯಕ ಚಟುವಟಿಕೆಗಳಿಂದ ಸೇವಾ ವಲಯವು ಸತತ ಎರಡು ತಿಂಗಳು ಕುಸಿತ ಕಂಡಿತ್ತು. ಅಕ್ಟೋಬರ್‌ನಲ್ಲಿ 49.2 ಇದ್ದದ್ದು ನವೆಂಬರ್​ನಲ್ಲಿ 52.7ಕ್ಕೆ ತಲುಪಿದೆ. ಈ ಜಿಗಿತ ಹೊರತಾಗಿಯೂ ದೀರ್ಘಾವಧಿಯ ಸರಾಸರಿ ಬೆಳವಣಿಗೆಯು 54.2ಕ್ಕಿಂತ ಕಡಿಮೆಯಾಗಿದೆ ಎಂದು ಸಮೀಕ್ಷೆ ಎಚ್ಚರಿಸಿದೆ.

ಸೇವಾ ವಲಯದಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ ಮಾಸಿಕದಲ್ಲಿ ಕಂಡುಬಂದ ಕೆಲವು ದೌರ್ಬಲ್ಯಗಳು ನಿವಾರಿಸಿದರೂ ಪರ್ಚೇಸಿಂಗ್ ಮ್ಯಾನೇಜರ್ ಇಂಡೆಕ್ಸ್ (ಪಿಎಂಐ) ಫಲಿತಾಂಶಗಳ ಬೇಡಿಕೆ ಮತ್ತು ವಲಯದ ಸ್ಥಿತಿಗತಿಯ ಬಗ್ಗೆ ಎಚ್ಚರಿಕೆ ನೀಡಿದೆ ಎಂದು ಐಎಚ್‌ಎಸ್ ಮಾರ್ಕಿಟ್​ನ ಅರ್ಥಶಾಸ್ತ್ರಜ್ಞ ಪೊಲಿಯಣ್ಣ ಡಿ ಲಿಮಾ ಹೇಳಿದ್ದಾರೆ.

ಕಚ್ಚಾ ವಸ್ತುಗಳ ಖರೀದಿ ವೆಚ್ಚವು ಒಂದು ವರ್ಷದ ಹಿಂದಿನ ಮಟ್ಟಕ್ಕೆ ತಲುಪಿದ್ದರಿಂದ ಸೇವಾ ವಲಯದಲ್ಲಿ ಆತ್ಮವಿಶ್ವಾಸವು 3 ವರ್ಷಗಳ ಹಿಂದಿನ ಮಟ್ಟಕ್ಕೆ ಇಳಿದಿತ್ತು. ಸೇವಾ ವಲಯವು ದೇಶಿ ಆರ್ಥಿಕತೆಗೆ ಅರ್ಧಕ್ಕಿಂತ ಹೆಚ್ಚಿನ ಕೊಡುಗೆ ನೀಡುತ್ತಿದೆ. ಹೀಗಾಗಿ ಸೇವಾ ವಲಯದಲ್ಲಿನ ಏರಿಳಿತಿದ ವಿದ್ಯಮಾನವು ಅರ್ಥ ವ್ಯವಸ್ಥೆ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರುತ್ತಿದೆ. ಇದನ್ನು ಅರಿತ ಕೇಂದ್ರ ಸರ್ಕಾರವು ಕಳೆದ ತಿಂಗಳಿಂದ ಆರ್ಥಿಕ ಸುಧಾರಣೆಯ ಭಾಗವಾಗಿ ಈ ಕ್ಷೇತ್ರಕ್ಕೂ ಅನ್ವಯಿಸುವಂತಹ ಕೆಲವು ಉಪಕ್ರಮಗಳನ್ನು ಘೋಷಿಸಿತ್ತು. ಅವುಗಳು ಈಗ ಒಂದೊಂದಾಗಿ ಫಲಕೊಡುತ್ತಿವೆ.

ABOUT THE AUTHOR

...view details