ಮುಂಬೈ:ಜಾಗತಿಕ ಮಾರುಕಟ್ಟೆಯಲ್ಲಿ ವ್ಯಕ್ತವಾದ ಮಿಶ್ರ ಫಲಿತಾಂಶಗಳಿಂದಾಗಿ ಮುಂಬೈ ಷೇರುಟೆಯಲ್ಲಿಂದು ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 503 ಅಂಕಗಳ ಕುಸಿತ ಕಂಡು 58,283ಕ್ಕೆ ತಲುಪಿದರೆ, ನಿಫ್ಟಿ 143 ಪಾಯಿಂಟ್‌ಗಳ ನಷ್ಟದೊಂದಿಗೆ 17,368ಕ್ಕೆ ಬಂದು ನಿಂತಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಹೆಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್, ಎಂ ಅಂಡ್ ಎಂ, ನೆಸ್ಲೆ ಇಂಡಿಯಾ ಹಾಗೂ ಎಸ್‌ಬಿಐ ನಷ್ಟು ಅನುಭವಿಸಿದ ಪ್ರಮುಖ ಕಂಪನಿಗಳಾಗಿವೆ. ಬಜಾಬ್ ಫೈನಾನ್ಸ್ ಷೇರುಗಳ ಮೌಲ್ಯದಲ್ಲಿ ಸುಮಾರು ಶೇ.3ರಷ್ಟು ಕುಸಿತ ಕಂಡಿತು. ಮತ್ತೊಂದೆಡೆ ಆಕ್ಸಿಸ್ ಬ್ಯಾಂಕ್, ಟೆಕ್ ಮಹೀಂದ್ರಾ, ಪವರ್‌ಗ್ರೀಡ್ ಹಾಗೂ ಮಾರುತಿ ಷೇರುಗಳು ಲಾಭಗಳಿಸಿದವು.
ಬ್ರಿಟನ್‌ನಲ್ಲಿ ಒಮಿಕ್ರಾನ್ ಪ್ರಮಾಣಗಳು ಹೆಚ್ಚಾಗುತ್ತಿರುವುದು ಜಾಗತಿಕ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನಲ್ಲಿ ಮುಖ್ಯ ಹೂಡಿಕೆ ತಂತ್ರಜ್ಞರಾಗಿರುವ ವಿಕೆ ವಿಜಯ್‌ಕುಮಾರ್ ತಿಳಿಸಿದ್ದಾರೆ.