ಕರ್ನಾಟಕ

karnataka

ETV Bharat / business

ಆರ್ಥಿಕ ಸಮೀಕ್ಷೆ, ಬಜೆಟ್​ಗೂ ಮುನ್ನ ಮುಂಜಾನೆ ವಹಿವಾಟಿನಲ್ಲಿ ಸೆನ್ಸೆಕ್ಸ್​ಗೆ ಆನೆ ಬಲ - ಬಿಎಸ್​ಇ

ಮುಂಬೈ ಷೇರು ಸೂಚ್ಯಂಕ ಬಿಎಸ್​ಇ 168.91 ಅಂಕಗಳ ಏರಿಕೆಯೊಂದಿಗೆ 41,182 ಅಂಕಗಳ ಮಟ್ಟದಲ್ಲೂ ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ ಎನ್​ಎಸ್​ಇ 39.35 ಅಂಕಗಳ ಏರಿಕೆಯೊಂದಿಗೆ 12,075 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಯುತ್ತಿದೆ.

Sensex
ಸೆನ್ಸೆಕ್ಸ್​

By

Published : Jan 31, 2020, 11:12 AM IST

ಮುಂಬೈ: ಆರ್ಥಿಕ ಸಮೀಕ್ಷೆ ಬಿಡುಗಡೆ ಹಾಗೂ ಬಜೆಟ್ ಮಂಡನೆಗೂ ಮುನ್ನ ಶುಕ್ರವಾರದ ಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 200 ಅಂಕಗಳ ಏರಿಕೆ ದಾಖಲಿಸಿದೆ.

ಮುಂಬೈ ಷೇರು ಸೂಚ್ಯಂಕ ಬಿಎಸ್​ಇ 168.91 ಅಂಕಗಳ ಏರಿಕೆಯೊಂದಿಗೆ 41,182 ಅಂಕಗಳ ಮಟ್ಟದಲ್ಲೂ ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ ಎನ್​ಎಸ್​ಇ 39.35 ಅಂಕಗಳ ಏರಿಕೆಯೊಂದಿಗೆ 12,075 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಯುತ್ತಿದೆ.

ಕೋಟಕ್ ಮಹೀಂದ್ರ ಬ್ಯಾಂಕ್, ಬಜಾಜ್ ಆಟೋ, ಇಂಡಸ್​ಲ್ಯಾಂಡ್ ಬ್ಯಾಂಕ್, ಎಂ&ಎಂ, ಹೀರೋ ಮೋಟಾರ್​ ಕಾರ್ಪ್​, ಬಜಾಜ್​ ಫೈನಾನ್ಸ್​ ಮತ್ತು ಭಾರ್ತಿ ಏರ್​ಟೆಲ್​ ಸಕಾರಾತ್ಮಕ ಹಾದಿಯಲ್ಲಿವೆ. ಪವರ್‌ಗ್ರಿಡ್, ಒಎನ್‌ಜಿಸಿ, ಎಚ್‌ಸಿಎಲ್ ಟೆಕ್, ಎನ್‌ಟಿಪಿಸಿ ಮತ್ತು ಟಿಸಿಎಸ್ ರೆಡ್​ ಬಣ್ಣದಲ್ಲಿದ್ದವು.

ವಿಶ್ಲೇಷಕರ ಪ್ರಕಾರ, ಮಾರುಕಟ್ಟೆಯು ಈಗ ಆರ್ಥಿಕ ಸಮೀಕ್ಷೆ ಮತ್ತು ಕೇಂದ್ರ ಬಜೆಟ್ ಮೇಲೆ ಕೇಂದ್ರೀಕರಿಸಿದೆ. ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ಸಿಗಬಹುದೆಂಬ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದೆ.

ಚೇತರಿಕೆಯಲ್ಲಿರುವ ಜಾಗತಿಕ ಮಾರುಕಟ್ಟೆಗಳು ಇಲ್ಲಿನ ಹೂಡಿಕೆದಾರರ ಮನೋಭಾವ ಉತ್ತೇಜನಕಾವಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಹಾಂಗ್ ಕಾಂಗ್, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿನ ಬೋರ್ಸಸ್ ಅಲ್ಪ ಲಾಭದೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಚೀನಾದಲ್ಲಿ ಮಾರುಕಟ್ಟೆ ಸ್ಥಗಿತಗೊಂಡಿದೆ.

ABOUT THE AUTHOR

...view details