ಕರ್ನಾಟಕ

karnataka

ETV Bharat / business

ನಮ್ಮ ರೊಕ್ಕ ನಮಗೆ ಕೊಡದಿದ್ದರೆ ಸಂಘರ್ಷಕ್ಕೆ ಇಳೀಬೇಕಾಗುತ್ತೆ: ಬಿಜೆಪಿಗೆ ಶಿವಸೇನಾ ಎಚ್ಚರಿಕೆ - ಜಿಎಸ್​ಟಿ ಶಿವಸೇನಾ

ಪ್ರಸ್ತುತ ಆರ್ಥಿಕತೆಯ ಅನಿಶ್ಚಿತತೆಗೆ ಕೇಂದ್ರ ಸರ್ಕಾರವೇ ಕಾರಣ. ಜಿಎಸ್​​ಟಿ ಅನುಷ್ಠಾನದಿಂದ ಉಂಟಾಗುವ ಆದಾಯ ನಷ್ಟ ಸರಿದೂಗಿಸಲು ರಾಜ್ಯಗಳಿಗೆ 50,000 ಕೋಟಿ ರೂ. ಪಾವತಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ, ಕಳೆದ ನಾಲ್ಕು ತಿಂಗಳಿಂದ ರಾಜ್ಯಗಳಿಗೆ ಪರಿಹಾರದ ಮೊತ್ತ ದೊರೆತಿಲ್ಲ ಎಂದು ಶಿವಸೇನಾ ತನ್ನ ಮುಖವಾಣಿ ಪತ್ರಿಕೆ 'ಸಾಮ್ನಾ'ದಲ್ಲಿ ಟೀಕಿಸಿ, ಸಂಪನ್ಮೂಲಗಳ ಪಾಲನ್ನು ಸರಿಯಾಗಿ ಹಸ್ತಾಂತರಿಸದಿದ್ದರೆ ರಾಜ್ಯಗಳು ಕೇಂದ್ರದ ವಿರುದ್ಧ ಧ್ವನಿ ಎತ್ತಬೇಕಾಗುತ್ತದೆ ಎಂಬ ಎಚ್ಚರಿಕೆ ಸಹ ನೀಡಿದೆ.

GST dues
ಜಿಎಸ್​ಟಿ ಪರಿಹಾರ ನಿಧಿ

By

Published : Dec 14, 2019, 4:56 PM IST

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ರಾಜ್ಯಗಳ ಪರಿಹಾರ ನಿಧಿ ಪಾವತಿಸಲು ಮೋದಿ ಸರ್ಕಾರ ವಿಳಂಬ ಮಾಡುತ್ತಿರುವುದರ ವಿರುದ್ಧ ಶಿವಸೇನಾ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಸ್ತುತದ ಆರ್ಥಿಕತೆಯ ಅನಿಶ್ಚಿತತೆಗೆ ಕೇಂದ್ರ ಸರ್ಕಾರವೇ ಕಾರಣ. ಜಿಎಸ್​​ಟಿ ಅನುಷ್ಠಾನದಿಂದ ಉಂಟಾಗುವ ಆದಾಯ ನಷ್ಟವನ್ನು ಸರಿದೂಗಿಸಲು ರಾಜ್ಯಗಳಿಗೆ 50,000 ಕೋಟಿ ರೂ. ಪಾವತಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ, ಕಳೆದ ನಾಲ್ಕು ತಿಂಗಳಿಂದ ರಾಜ್ಯಗಳಿಗೆ ಪರಿಹಾರದ ಮೊತ್ತ ದೊರೆತಿಲ್ಲ ಎಂದು ಶಿವಸೇನಾ ತನ್ನ ಪತ್ರಿಕೆ 'ಸಾಮ್ನಾ'ದಲ್ಲಿ ಟೀಕಿಸಿದೆ.

ರಾಜ್ಯಗಳಿಗೆ ಬರಬೇಕಾದ ಪರಿಹಾರ ನಿಧಿ ವಿಳಂಬವಾದರೆ ಅವುಗಳ ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ. ಸಂಪನ್ಮೂಲಗಳ ಪಾಲನ್ನು ಸರಿಯಾಗಿ ಹಸ್ತಾಂತರಿಸದಿದ್ದರೆ ರಾಜ್ಯಗಳು ಕೇಂದ್ರದ ವಿರುದ್ಧ ಧ್ವನಿ ಎತ್ತಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಎರಡು ದಿನಗಳ ಹಿಂದೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆಯಲ್ಲಿ ರಾಜ್ಯಗಳಿಗೆ ಜಿಎಸ್​ಟಿ ಬಾಕಿ ಮೊತ್ತ ಪಾವತಿಸುವ ಭರವಸೆ ನೀಡಿದ್ದರು. 'ರಾಜ್ಯಗಳಿಗೆ ಜಿಎಸ್​​ಟಿ ಪರಿಹಾರ ಪಾವತಿಸುವ ಸೀತಾರಾಮನ್ ಅವರ ಮಾತುಗಳ ಬದ್ಧತೆಯನ್ನು ಗೌರವಿಸುತ್ತೇವೆ. ಆದರೆ, ಯಾವಾಗ ನೀಡುತ್ತಾರೆ ಎಂಬುದರ ಬಗ್ಗೆ ಸ್ಪಷ್ಟವಾದ ದಿನಾಂಕ ನಿಗದಿಪಡಿಸಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ABOUT THE AUTHOR

...view details