ನವದೆಹಲಿ: ಉಚ್ಚಾಟಿತ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರನ್ನು ಮರುನೇಮಕ ಮಾಡುವಂತೆ ಆದೇಶ ನೀಡಿದ್ದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಆದೇಶದ ವಿರುದ್ಧ ಸುಪ್ರೀಂಕೋರ್ಟ್, ಶುಕ್ರವಾರ ತಡೆಯೊಡ್ಡಿ ಅದನ್ನು ವಜಾಗೊಳಿಸಿ ಇತರೆ ವ್ಯಾಜ್ಯಗಳಿಗೆ ಮೇಲ್ಮನವಿ ಸಲ್ಲಿಸಲು ಟಾಟಾಗೆ ಅನುಮತಿ ನೀಡಿದೆ. ನ್ಯಾಯಾಲಯದ ಈ ತೀರ್ಪನ್ನು ಉದ್ಯಮಿ ದಿಗ್ಗಜ ರತನ್ ಟಾಟಾ ಸ್ವಾಗತಿಸಿದ್ದಾರೆ.
ಗೌರವಾನ್ವಿತ ಸುಪ್ರೀಂಕೋರ್ಟ್ ಇಂದು ನೀಡಿದ ತೀರ್ಪನ್ನು ನಾನು ಪ್ರಶಂಸಿಸುತ್ತೇನೆ ಮತ್ತು ಕೃತಜ್ಞನಾಗಿದ್ದೇನೆ. ಇದು ಗೆಲುವು ಅಥವಾ ಸೋಲಿನ ವಿಷಯವಲ್ಲ. ನನ್ನ ಸಮಗ್ರತೆ ಮತ್ತು ಗ್ರೂಪಿನ ನೈತಿಕ ನಡವಳಿಕೆಯ ಮೇಲೆ ಪಟ್ಟುಹಿಡಿದ ದಾಳಿಯ ನಂತರ, ಟಾಟಾ ಸನ್ಸ್‌ನ ಎಲ್ಲಾ ಮೇಲ್ಮನವಿಗಳನ್ನು ಎತ್ತಿಹಿಡಿಯುವ ತೀರ್ಪು. ಇದು ಯಾವಾಗಲೂ ಗ್ರೂಪಿನ ಮಾರ್ಗದರ್ಶಿ ಸೂತ್ರಗಳಾಗಿರುವ ಮೌಲ್ಯಗಳು ಮತ್ತು ನೈತಿಕತೆಯ ಮೌಲ್ಯಮಾಪನವಾಗಿದೆ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.