ಕರ್ನಾಟಕ

karnataka

ETV Bharat / business

ಚಕ್ರ ಬಡ್ಡಿ ಮನ್ನಾ ಅಫಿಡವಿಟ್​ಗೆ ಅಸಮಾಧಾನ: ವಾರದೊಳಗೆ ಸಮಗ್ರ ವಿವರಣೆ ನೀಡುವಂತೆ ಕೇಂದ್ರ, RBIಗೆ ಸುಪ್ರೀಂ ತಾಕೀತು - ಭಾರತೀಯ ರಿಸರ್ವ್ ಬ್ಯಾಂಕ್

ಸಾಲ ಮರುಪಾವತಿ ಮತ್ತು 2 ಕೋಟಿ ರೂ.ವರೆಗಿನ ಸಾಲಗಳ ಮೇಲಿನ ಬಡ್ಡಿ ಮನ್ನಾ ಅಫಿಡವಿಟ್‌ನಲ್ಲಿ ಅಂತಹ ಯಾವುದೇ ಸಮಸ್ಯೆಗಳಿಲ್ಲ ಎಂದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು, ಮುಂದಿನ ಸೋಮವಾರದೊಳಗೆ ಉತ್ತರಗಳನ್ನು ಸಲ್ಲಿಸುವಂತೆ ಆದೇಶಿಸಿದೆ. ಅಕ್ಟೋಬರ್ 13ರಂದು ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಹೇಳಿದೆ.

SC
ಸುಪ್ರೀಂಕೋರ್ಟ್​

By

Published : Oct 5, 2020, 5:29 PM IST

ನವದೆಹಲಿ: ಕೋವಿಡ್​ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ನಿಷೇಧ ಅವಧಿ ವಿಸ್ತರಣೆ ಮತ್ತು 2 ಕೋಟಿ ರೂ.ವರೆಗಿನ ಸಾಲಗಳ ಮೇಲಿನ ಬಡ್ಡಿ ಮನ್ನಾ ಕುರಿತು ಸಲ್ಲಿಕೆಯಾಗಿದ್ದ ಎರಡು ಅರ್ಜಿಗಳ ಅಫಿಡವಿಟ್‌ನಲ್ಲಿ ಅಸಮಾಧಾನವಿದೆ. ಒಂದು ವಾರದೊಳಗೆ ಸಮಗ್ರ ಉತ್ತರಗಳನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಸುಪ್ರೀಂಕೋರ್ಟ್​ ನಿರ್ದೇಶನ ನೀಡಿದೆ.

ಈ ಪ್ರಕರಣದ ಅಫಿಡವಿಟ್‌ನಲ್ಲಿ ಅಂತಹ ಯಾವುದೇ ಸಮಸ್ಯೆಗಳಿಲ್ಲ ಎಂದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು, ಮುಂದಿನ ಸೋಮವಾರದೊಳಗೆ ಉತ್ತರಗಳನ್ನು ಸಲ್ಲಿಸುವಂತೆ ಆದೇಶಿಸಿದೆ. ಅಕ್ಟೋಬರ್ 13ರಂದು ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಹೇಳಿದೆ.

ಆರ್‌ಬಿಐ ಅಥವಾ ಇನ್ನಾವುದೇ ಪ್ರಾಧಿಕಾರವು ಪರಿಣಾಮಕಾರಿ ಸುತ್ತೋಲೆ ಹೊರಡಿಸಿಲ್ಲ. ಕಾಮತ್ ಸಮಿತಿಯ ಶಿಫಾರಸುಗಳನ್ನು ಸಹ ಪರಿಗಣಿಸಬೇಕಾಗಿದೆ. ಅಕ್ಟೋಬರ್ 13ರಂದು ಹೆಚ್ಚಿನ ವಿಚಾರಣೆ ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿದೆ.

ಆರ್‌ಬಿಐ ಅಥವಾ ಇನ್ನಾವುದೇ ಪ್ರಾಧಿಕಾರವು ಪರಿಣಾಮಕಾರಿಯಾದ ಸುತ್ತೋಲೆ ಹೊರಡಿಸಿಲ್ಲ ಎಂಬುದನ್ನು ಗಮನಿಸಿದ ಕೋರ್ಟ್​, ಕಾಮತ್ ಸಮಿತಿಯ ಶಿಫಾರಸುಗಳನ್ನು ಸಹ ಪರಿಗಣಿಸಬೇಕಾಗಿದೆ. ನ್ಯಾಯಮೂರ್ತಿ ಭೂಷಣ್​​ ವರದಿಯನ್ನು ಅಗತ್ಯವಿರುವ ಜನರಿಗೆ ತಲುಪಬೇಕಿದೆ ಎಂದು ಹೇಳಿತು.

ಈ ಪ್ರಕರಣದ ಮತ್ತೊಂದು ಪಕ್ಷವಾದ ಕಾನ್ಫೆಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಕ್ರೆಡಾ) ಕೇಂದ್ರದ ಅಫಿಡವಿಟ್​ಗೆ ಉತ್ತರಿಸಲು ಸಮಯ ಕೋರಿತು. ಸರ್ಕಾರವು ತನ್ನ ಅಫಿಡವಿಟ್‌ನಲ್ಲಿ ನೀಡಿರುವ 6 ಲಕ್ಷ ಕೋಟಿ ರೂ. ಸೇರಿದಂತೆ ಹಲವು ಸಂಗತಿಗಳು ಮತ್ತು ಅಂಕಿ - ಅಂಶಗಳು ಯಾವುದೇ ಆಧಾರ ಇಲ್ಲದೇ ದಾಖಲಾಗಿವೆ ಎಂದು ಅದು ಅರ್ಜಿ ಸಲ್ಲಿಸಿತು.

ಗಜೇಂದ್ರ ಶರ್ಮಾ ಮತ್ತು ವಕೀಲ ವಿಶಾಲ್ ತಿವಾರಿ ಅವರು ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಉನ್ನತ ನ್ಯಾಯಾಲಯ ವಿಚಾರಣೆ ನಡೆಸಿತು. ನಿಷೇಧದ ಅವಧಿಯನ್ನು ವಿಸ್ತರಿಸುವ ಕುರಿತು ಕೇಂದ್ರವು ಅಫಿಡವಿಟ್ ಸಲ್ಲಿಸಬೇಕು. ಮಧ್ಯಂತರ ಕ್ರಮಗಳನ್ನು ನೀಡಬೇಕು ಎಂದು ತಿವಾರಿ ಹೇಳಿದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಆರು ತಿಂಗಳ ನಿಷೇಧ ಮತ್ತು 2 ಕೋಟಿ ರೂ.ಗಳವರೆಗಿನ ವೈಯಕ್ತಿಕ ಸಾಲಗಳಿಗೆ ಚಕ್ರ ಬಡ್ಡಿ (ಬಡ್ಡಿ ಮೇಲಿನ ಬಡ್ಡಿ) ಮನ್ನಾ ಮಾಡಲು ನಿರ್ಧರಿಸಿದೆ ಎಂದು ಕೇಂದ್ರವು ಕಳೆದ ವಾರ ಅಫಿಡವಿಟ್‌ನಲ್ಲಿ ಸಲ್ಲಿಸಿತ್ತು.

ABOUT THE AUTHOR

...view details