ಕರ್ನಾಟಕ

karnataka

ETV Bharat / business

ಮಂಗಳೂರು, ಕ್ಯಾಲಿಕಟ್ ​ಏರ್​ಪೋರ್ಟ್​ಗೆ EMAS ಅಳವಡಿಕೆ: ಡಿಜಿಸಿಎ, ವಿಮಾನಯಾನ ಸಚಿವಾಲಯಕ್ಕೆ ಸುಪ್ರೀಂ ನೋಟಿಸ್​ - ಇಎಂಎಎಸ್ ಅಳವಡಿಕೆ ಕೋರಿ ಸಲ್ಲಿಸಿದ ಅರ್ಜಿ

ರನ್​ವೇ ಅತಿಕ್ರಮಣದ ಪರ್ಯಾಯ ಪರಿಹಾರವಾದ ಎಂಜಿನಿಯರಿಂಗ್ ಮೆಟೀರಿಯಲ್ಸ್ ಅರೆಸ್ಟಿಂಗ್ ಸಿಸ್ಟಮ್ (ಇಎಂಎಎಸ್) ಅಳವಡಿಕೆ ಸ್ಥಾಪನೆ ಕೋರಿ ಸಲ್ಲಿಸಿದ ಅರ್ಜಿಯ ಕುರಿತು ಸುಪ್ರೀಂಕೋರ್ಟ್​​ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ನೋಟಿಸ್ ನೀಡಿದೆ.

Air India
ಏರ್​ ಇಂಡಿಯಾ

By

Published : Sep 16, 2020, 7:06 PM IST

ನವದೆಹಲಿ: ರಾಜ್ಯದ ಮಂಗಳೂರು ಹಾಗೂ ಕೇರಳದ ಕ್ಯಾಲಿಕಟ್​ ವಿಮಾನ ನಿಲ್ದಾಣಗಳಲ್ಲಿ ಎಂಜಿನಿಯರಿಂಗ್ ಮೆಟೀರಿಯಲ್ಸ್ ಅರೆಸ್ಟಿಂಗ್ ಸಿಸ್ಟಮ್ ಅಳವಡಿಸುವ ಕುರಿತು ಸುಪ್ರೀಂಕೋರ್ಟ್​​ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹಾಗೂ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ನೋಟಿಸ್ ನೀಡಿದೆ.

ರನ್​ವೇ ಅತಿಕ್ರಮಣ ಪರ್ಯಾಯ ಪರಿಹಾರವಾದ ಎಂಜಿನಿಯರಿಂಗ್ ಮೆಟೀರಿಯಲ್ಸ್ ಅರೆಸ್ಟಿಂಗ್ ಸಿಸ್ಟಮ್ (ಇಎಂಎಎಸ್) ಅಳವಡಿಕೆ ಸ್ಥಾಪನೆ ಕೋರಿ ಸಲ್ಲಿಸಿದ ಅರ್ಜಿಯ ಕುರಿತು ಕೋರ್ಟ್ ಬುಧವಾರ ನೋಟಿಸ್ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ಕ್ಯಾಲಿಕಟ್​ನಲ್ಲಿ ಸಂಭವಿಸಿದ ಅಪಘಾತದ ಹಿನ್ನೆಲೆಯಲ್ಲಿ ಸಲ್ಲಿಸಲಾದ ಅರ್ಜಿದಾರರ ಮನವಿಯನ್ನು ಆಲಿಸುತು. ಇಎಂಎಎಸ್, ಅಗತ್ಯವಿರುವ ರನ್‌ವೇ ಮತ್ತು ವಿಮಾನ ನಿಲ್ದಾಣಗಳನ್ನು ಪರೀಕ್ಷಿಸುತ್ತದೆ. ಅರ್ಜಿದಾರರು, ದೇಶದ ಅಗತ್ಯ ವಿಮಾನ ನಿಲ್ದಾಣಗಳಲ್ಲಿ ಇದನ್ನು ಸ್ಥಾಪಿಸುವಂತೆ ನಿರ್ದೇಶನ ನೀಡಲು ಕೋರಿದ್ದರು.

ಆಗಸ್ಟ್ 7ರಂದು ಕೊಯಿಕೋಡ್‌ನ ಕರಿಪುರ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ 10 ಮಕ್ಕಳು ಸೇರಿದಂತೆ 190 ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತಕ್ಕೆ ಈಡಾಗಿತ್ತು. ಈ ದುರ್ಘಟನೆಯಲ್ಲಿ ಇಬ್ಬರು ಪೈಲಟ್‌ ಮೃತಪಟ್ಟು, 21 ಜನ ಗಾಯಗೊಂಡಿದ್ದರು.

ಅಪಘಾತದ ಸ್ಥಳದಿಂದ ಫ್ಲೈಟ್ ಡಾಟಾ ರೆಕಾರ್ಡರ್ (ಎಫ್‌ಡಿಆರ್) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್) ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಪಘಾತದ ಬಗ್ಗೆ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ಕ್ಯಾಪ್ಟನ್ ಎಸ್.ಎಸ್. ಆದೇಶಿಸಿದ ಕೆಲ ತಿಂಗಳಲ್ಲಿ ತಮ್ಮ ವರದಿ ಸಲ್ಲಿಸಲಿದ್ದಾರೆ ಎಂದರು. ಈ ಪ್ರಕರಣದ ತನಿಖೆಗಾಗಿ ಚಹರ್ ಅವರನ್ನು 2020 ಆಗಸ್ಟ್ 13ರಂದು ಎಎಐಬಿ ಮಹಾನಿರ್ದೇಶಕರು ನೇಮಕ ಮಾಡಿದ್ದರು.

ಈ ಅಪಘಾತಕ್ಕೆ ಕಾರಣವಾಗುವ ಸಂಭವನೀಯ ಕಾರಣವಾದ ಅಂಶಗಳನ್ನು ತನಿಖಾಧಿಕಾರಿ ನಿರ್ಧರಿಸುತ್ತಾರೆ ಎಂದು ಕೇಂದ್ರ ಸಚಿವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details