ಕರ್ನಾಟಕ

karnataka

ETV Bharat / business

ಲಾಕ್​ಡೌನ್​ ವೇಳೆ ಸಾಲ ನಿಷೇಧದ ಬಡ್ಡಿ ಮನ್ನಾ: ಮತ್ತೆ ವಿಚಾರಣೆ ಮುಂದೂಡಿದ ಸುಪ್ರೀಂ - ನಿಷೇಧದ ಅವಧಿಯ ಸಾಲದ ಮೇಲಿ ಬಡ್ಡಿ ಮನ್ನಾ

ಸೆಂಟ್ರಲ್ ವಿಸ್ಟಾ ನಿರ್ಮಾಣ ಯೋಜನೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿದಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮತ್ತೊಂದು ನ್ಯಾಯಪೀಠದ ಮುಂದೆ ಹಾಜರಾಗಬೇಕಿದೆ ಎಂದು ಉಲ್ಲೇಖಿಸಿ, ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಮೂವರು ನ್ಯಾಯಾಧೀಶರ ನ್ಯಾಯಪೀಠವು ನಿಷೇಧದ ಅವಧಿಯಲ್ಲಿ ಸಾಲ ನಿಷೇಧ ವಿಸ್ತರಿಸುವ ಮತ್ತು ಸಾಲಗಳ ಮೇಲಿನ ಬಡ್ಡಿ ಮನ್ನಾ ವಿಚಾರಣೆ ಮುಂದೂಡಿದೆ.

SC
ಸುಪ್ರೀಂ

By

Published : Nov 3, 2020, 3:44 PM IST

ನವದೆಹಲಿ:ಆರು ತಿಂಗಳ ನಿಷೇಧದ ಅವಧಿಯಲ್ಲಿ ಸಾಲ ನಿಷೇಧ ವಿಸ್ತರಿಸುವ ಮತ್ತು ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ಮನವಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನವೆಂಬರ್ 5ಕ್ಕೆ ಮುಂದೂಡಿದೆ.

ಸೆಂಟ್ರಲ್ ವಿಸ್ಟಾ ನಿರ್ಮಾಣ ಯೋಜನೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿದಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮತ್ತೊಂದು ನ್ಯಾಯಪೀಠದ ಮುಂದೆ ಹಾಜರಾಗಬೇಕಿದೆ ಎಂದು ಉಲ್ಲೇಖಿಸಿ, ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಮೂವರು ನ್ಯಾಯಾಧೀಶರ ನ್ಯಾಯಪೀಠ ಇದರ ವಿಚಾರಣೆ ಮುಂದೂಡಿದೆ.

ನಾವು ವಿಚಾರಣೆಯನ್ನು ಮುಂದೂಡುತ್ತೇವೆ. ನವೆಂಬರ್ 5ರಂದು ನಾವು ಈ ಪ್ರಕರಣದ ವಿಚಾರಣೆ ತೆಗದುಕೊಳ್ಳುತ್ತೇವೆ ಎಂದು ನ್ಯಾಯಮೂರ್ತಿ ಭೂಷಣ್ ಹೇಳಿದರು.

ಮುಂದೂಡಿಕೆಗಾಗಿ ಮೆಹ್ತಾ ಅವರ ವಾದಕ್ಕೆ ಅರ್ಜಿದಾರರು ಸಹ ಒಪ್ಪಿಕೊಂಡರು. ಉನ್ನತ ನ್ಯಾಯಾಲಯವು ಅರ್ಜಿಗಳನ್ನು ಆಲಿಸುತ್ತಿತ್ತು. ಇದರಲ್ಲಿ ಗಜೇಂದ್ರ ಶರ್ಮಾ ವಕೀಲ ವಿಶಾಲ್ ತಿವಾರಿ ಸಲ್ಲಿಸಿದ್ದ ಎರಡು ಪ್ರಕರಣಗಳು ಕೂಡ ಸೇರಿವೆ.

ಕೋವಿಡ್​-19 ಸಾಂಕ್ರಾಮಿಕ ರೋಗದ ಪರಿಹಾರವಾಗಿ ನೀಡಲಾಗುವ ಸಾಲ ನಿಷೇಧದ ಬಡ್ಡಿ ಮತ್ತು ಇತರ ಸೂಕ್ತ ನಿರ್ದೇಶನಗಳ ಮೇಲಿನ ಬಡ್ಡಿ ಮನ್ನಾ ಮಾಡಲು ಅರ್ಜಿದಾರರು ಕೋರಿದ್ದಾರೆ.

ಕೇಂದ್ರ ಸರ್ಕಾರ ಅಕ್ಟೋಬರ್ 25 ರಂದು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ 2020ರ ಮಾರ್ಚ್ 1ರಿಂದ ಆಗಸ್ಟ್ 31ರವರೆಗೆ ನಿರ್ದಿಷ್ಟ ಸಾಲ ಖಾತೆಗಳ ಸಾಲಗಾರ ಬಡ್ಡಿ ಮನ್ನಾ ಯೋಜನೆಯನ್ನು ಪಡೆಯಬಹುದು ಎಂದು ತಿಳಿಸಿತ್ತು.

ಈ ನಿರ್ಧಾರವನ್ನು ಹಣಕಾಸು ಸಚಿವಾಲಯ ಮತ್ತು ಅಕ್ಟೋಬರ್ 21ರಂದು ನಡೆದ ಸಭೆಯಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಅಫಿಡವಿಟ್​ನಲ್ಲಿ ಹೇಳಿತ್ತು.

For All Latest Updates

TAGGED:

ABOUT THE AUTHOR

...view details