ನವದೆಹಲಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳ ಮಟ್ಟಿಗೆ ಸಾಲದ ಕಂತು ಪಾವತಿಸುವುದಿಂದ ವಿನಾಯತಿ ಘೋಷಿಸಿದ ಭಾರತೀಯ ರಿಸರ್ವ್ ಬ್ಯಾಂಕ್ನ ಸುತ್ತೋಲೆಯನ್ನು ಸಹವರ್ತಿ ಬ್ಯಾಂಕ್ಗಳು ಅನುಸರಿಸುತ್ತಿರುವ ಬಗ್ಗೆ ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಆರ್ಬಿಐಗೆ ಸೂಚಿಸಿದೆ.
ಬ್ಯಾಂಕ್ಗಳು 3 ತಿಂಗಳ ಇಎಂಐ ಮುಕ್ತಿ ನೀಡಿವೆಯಾ?: RBIಗೆ ಸುಪ್ರೀಂಕೋರ್ಟ್ ತಾಕೀತು - ಸಾಲ ವಿನಾಯತಿ
ಕೊರೊನಾ ವೈರಸ್ ಬಿಕ್ಕಟ್ಟು ಹಿನ್ನೆಲೆಯಲ್ಲಿ ಮಾರ್ಚ್ 1 ಮತ್ತು ಮೇ 31ರ ನಡುವೆ ಸಾಲ ಮರುಪಾವತಿಯ ಮೂರು ತಿಂಗಳ ವಿನಾಯಿತಿ ನೀಡಿ, ಮಾರ್ಚ್ 27ರಂದು ಆರ್ಬಿಐ, ಎಲ್ಲ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿತ್ತು.
ಕೊರೊನಾ ವೈರಸ್ ಬಿಕ್ಕಟ್ಟು ಹಿನ್ನೆಲೆಯಲ್ಲಿ ಮಾರ್ಚ್ 1 ಮತ್ತು ಮೇ 31ರ ನಡುವೆ ಸಾಲ ಮರುಪಾವತಿಯ ಮೂರು ತಿಂಗಳ ವಿನಾಯತಿ ನೀಡಿ, ಮಾರ್ಚ್ 27ರಂದು ಆರ್ಬಿಐ, ಎಲ್ಲ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿತ್ತು. ಬ್ಯಾಂಕ್ಗಳು ಇದನ್ನು ಎಷ್ಟರ ಮಟ್ಟಿಗೆ ಅನುಸರಿಸುತ್ತಿವೆ. ಅದರ ಕುರಿತು ಪರಿಶೀಲನೆ ನಡೆಸುವಂತೆ ಕೇಂದ್ರೀಯ ಬ್ಯಾಂಕ್ಗೆ ನ್ಯಾಯಾಲಯ ಆದೇಶಿಸಿದೆ.
ಇದು ಪಿಐಎಲ್ ವಿವಾದವಲ್ಲ. ಆದರೆ, ಹಲವು ಸಮಸ್ಯೆಗಳಿಂದಾಗಿ ವಿವಾದ ಎದ್ದಿದೆ. ತನ್ನ ಆದೇಶವನ್ನು ಸ್ಫೂರ್ತಿಯಿಂದ ಅನುಷ್ಠಾನಗೊಳಿಸಬೇಕೆಂದು ಆರ್ಬಿಐಗೆ ಕೋರ್ಟ್ ಮನವಿ ಮಾಡಿದೆ. 'ಲಾಭಗಳನ್ನು ಬ್ಯಾಂಕ್ನವರು ಸಾಲಗಾರರಿಗೆ ವಿಸ್ತರಿಸುತ್ತಿಲ್ಲ. ಇದಕ್ಕೆ ಸೂಕ್ತ ಮಾರ್ಗಸೂಚಿ ಇರಬೇಕು ಎಂದು ಮೇಲ್ನೋಟಕ್ಕೆ ಕಾಣುತ್ತದೆ' ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.