ಕರ್ನಾಟಕ

karnataka

By

Published : Oct 1, 2020, 3:33 PM IST

ETV Bharat / business

ಲಾಕ್​ಡೌನ್​ ವೇಳೆ ಬುಕಿಂಗ್ ವಿಮಾನ ಟಿಕೆಟ್​ ರದ್ದು: ಕ್ರೆಡಿಟ್ ಶೆಲ್ ಮೊತ್ತದಡಿ ಬಡ್ಡಿ ಪಾವತಿಸುವಂತೆ ಸುಪ್ರೀಂ ಆದೇಶ

ಲಾಕ್​ಡೌನ್​ಗೂ ಮೊದಲು ಮತ್ತು ಲಾಕ್‌ಡೌನ್ ವೇಳೆ ಕಾಯ್ದಿರಿಸಿದ ವಿಮಾನಗಳ ಟಿಕೆಟ್ ಮರುಪಾವತಿ ಮತ್ತು ಕ್ರೆಡಿಟ್ ಶೆಲ್ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಪ್ರಸ್ತಾವನೆಯನ್ನು ಸುಪ್ರೀಂಕೋರ್ಟ್ ಅನುಮೋದಿಸಿದೆ.

air
ವಿಮಾನ

ನವದೆಹಲಿ:ಕೋವಿಡ್ -19 ಸಾಂಕ್ರಾಮಿಕ ಪ್ರೇರೇಪಿತ ವಿಧಿಸಲಾಗಿದ್ದ ನಿರ್ಬಂಧಗಳಿಂದ ರದ್ದಾದ ಟಿಕೆಟ್‌ಗಳ ವಿಳಂಬವಾಗಿ ಮರುಪಾವತಿಸುವ ವಿಮಾನಯಾನ ಸಂಸ್ಥೆಗಳು ತಿಂಗಳಿಗೆ 0.5 ಪ್ರತಿಶತದಷ್ಟು ಬಡ್ಡಿ ನೀಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ನೇತೃತ್ವದ ನ್ಯಾಯಪೀಠವು ಆದೇಶಿಸಿದೆ.

ಲಾಕ್‌ಡೌನ್ ಅವಧಿಯಲ್ಲಿ ಅವಧಿಯಲ್ಲಿ (ಮಾರ್ಚ್ 25ರಿಂದ ಮೇ 24 ರವರೆಗೆ) ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿದ್ದರೆ ಮತ್ತು ಅದೇ ಅವಧಿಯಲ್ಲಿ ಪ್ರಯಾಣಕ್ಕಾಗಿ ವಿಮಾನ ಟಿಕೆಟ್ ಕಾಯ್ದಿರಿಸಲು ವಿಮಾನಯಾನ ಸಂಸ್ಥೆಗಳು ಪಾವತಿ ಸ್ವೀಕರಿಸಿದ್ದರೆ, ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಮತ್ತು ಆ ಬುಕ್ಕಿಂಗ್​​​​ ರದ್ದಾದುದರ ವಿರುದ್ಧ ಪ್ರಯಾಣಿಕರಿಂದ ಮರುಪಾವತಿ ಕೋರಿದರೆ, ಯಾವುದೇ ರದ್ದತಿ ಶುಲ್ಕ ಇಲ್ಲದೇ ಸ್ವೀಕರಿಸಿ ಪೂರ್ಣ ಮೊತ್ತ ಮರುಪಾವತಿಸಬೇಕು. ಮರುಪಾವತಿ ರದ್ದಾದ ದಿನಾಂಕದಿಂದ ಮೂರು ವಾರಗಳ ಅವಧಿಯಲ್ಲಿ ಕೈಗೊಳ್ಳುವಂತೆ ಎಂದು ನ್ಯಾಯಾಲಯ ಸೂಚಿಸಿದೆ.

ವಕೀಲ ಜೋಸ್ ಅಬ್ರಹಾಂ ಮೂಲಕ ಎನ್‌ಜಿಒ ಪ್ರವಾಸಿ ಲೀಗಲ್ ಸೆಲ್ ಸಲ್ಲಿಸಿದ್ದ ಮನವಿ ಮೇರೆಗೆ ಈ ತೀರ್ಪು ಬಂದಿದೆ.

ಲಾಕ್‌ಡೌನ್ ಅವಧಿಯಲ್ಲಿ ಪ್ರಯಾಣಕ್ಕಾಗಿ ಟ್ರಾವೆಲ್ ಏಜೆಂಟ್ ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರೆ, ಎಲ್ಲ ವಿಮಾನಯಾನ ಸಂಸ್ಥೆಗಳು ತಕ್ಷಣವೇ ಸಂಪೂರ್ಣ ಹಣ ಮರುಪಾವತಿ ಮಾಡುತ್ತವೆ ಎಂದು ನ್ಯಾಯಪೀಠ ಹೇಳಿದೆ.

ಯಾವುದೇ ಸಮಯದಲ್ಲಿ ಟಿಕೆಟ್ ಕಾಯ್ದಿರಿಸಿ, 2020ರ ಮೇ 24ರ ನಂತರದ ಪ್ರಯಾಣಿಸಲು ಉದ್ದೇಶಿಸಿದ್ದರೆ ಪ್ರಯಾಣಿಕರಿಗೆ ದರ ಮರುಪಾವತಿಸುವುದು ನಾಗರಿಕ ವಿಮಾನಯಾನ ಅಗತ್ಯತೆಗಳ (ಸಿಎಆರ್) ನಿಬಂಧನೆಗಳಿಂದ ನಿಯಂತ್ರಿಸಲ್ಪಡುತ್ತದೆ ಎಂದಿದೆ.

ಕ್ರೆಡಿಟ್ ಶೆಲ್ 2021ರ ಮಾರ್ಚ್ 20ರವರೆಗೆ ಮಾನ್ಯವಾಗಿರುತ್ತದೆ. ಅದರ ನಂತರ ಪ್ರಯಾಣಿಕರು ಈ ಮೊತ್ತ ಬಳಸದಿದ್ದರೆ, ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ಬಡ್ಡಿಯೊಂದಿಗೆ ಹಣ ಮರುಪಾವತಿಸಬೇಕಾಗುತ್ತದೆ. ಕ್ರೆಡಿಟ್ ಶೆಲ್‌ನಲ್ಲಿರುವ (ಭವಿಷ್ಯದ ಬುಕಿಂಗ್‌ಗೆ ಬಳಸಲು ರದ್ದಾದ ಪಿಎನ್‌ಆರ್ ವಿರುದ್ಧದ ಕ್ರೆಡಿಟ್ ಶೆಲ್​ ಬಳಕೆ) ಮೊತ್ತವನ್ನು ಯಾವುದೇ ಮಾರ್ಗದಲ್ಲಿ ಬಳಸಬಹುದು ಮತ್ತು ಅದನ್ನು ವರ್ಗಾಯಿಸಬಹುದಾಗಿದೆ ಎಂದು ಸೂಚಿಸಿದೆ.

ABOUT THE AUTHOR

...view details