ನವದೆಹಲಿ: ಏಪ್ರಿಲ್ 1ಕ್ಕೂ ಮೊದಲು ಖರೀದಿಸಿದ ಬಿಎಸ್-IV ಡೀಸೆಲ್ ವಾಹನಗಳು ನೋಂದಾಯಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದ್ದು, ಇವುಗಳನ್ನು ಮಹಾನಗರ ಪಾಲಿಕೆಗಳು ಮತ್ತು ದೆಹಲಿ ಪೊಲೀಸರು ಅಗತ್ಯ ಸಾರ್ವಜನಿಕ ಸೇವೆಗಳಿಗೆ ಬಳಸಲಿದ್ದಾರೆ.
ಅಗತ್ಯ ಸಾರ್ವಜನಿಕ ಉಪಯುಕ್ತತೆ ಸೇವೆಗಳಿಗೆ ಬಳಸಲು ಏಪ್ರಿಲ್ 1ರ ಮೊದಲು ಖರೀದಿಸಿದ ಡೀಸೆಲ್ ವಾಹನಗಳನ್ನು ಬಿಎಸ್-IV ಮಾನದಂಡಗಳ ಪ್ರಕಾರ ನೋಂದಣಿ ಮಾಡಲಾಗುವುದು. ಏಪ್ರಿಲ್ 1ರ ಬಳಿಕ ಖರೀದಿಸಿದ ಬಿಎಸ್-VI ಮಾದರಿ ವಾಹನಗಳನ್ನು ಬಿಎಸ್-VI ನಿಬಂಧನೆಯಡಿ ನೋಂದಣಿಗೆ ಅವಕಾಶ ನೀಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಆದೇಶಿಸಿದೆ.
ಎಲ್ಲಾ ನಿಯಮ ಮತ್ತು ನಿಬಂಧನೆಗಳ ಅನುಸರಣೆಗೆ ಒಳಪಟ್ಟು ಸಿಎನ್‌ಜಿ ವಾಹನಗಳ ನೋಂದಣಿಗೆ ನ್ಯಾಯಪೀಠ ಅನುಮತಿ ನೀಡಿತು. ಸಿಎನ್‌ಜಿ ವಾಹನಗಳು, ಬಿಎಸ್-IV ಮತ್ತು ಬಿಎಸ್-VI ವಾಹನಗಳು ಎಂಬ ಮೂರು ರೀತಿಯ ವಾಹನಗಳ ನೋಂದಣಿಗಾಗಿ ನ್ಯಾಯಪೀಠದ ಮುಂದೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.