ಕರ್ನಾಟಕ

karnataka

By

Published : Aug 6, 2021, 8:58 PM IST

ETV Bharat / business

ಸ್ಪರ್ಧಾತ್ಮಕ ಕಾನೂನು ಉಲ್ಲಂಘನೆ ಆರೋಪ ಕೇಸ್: ಅಮೆಜಾನ್‌, ಫ್ಲಿಪ್‌ಕಾರ್ಟ್‌ ಅರ್ಜಿ ಆ.9ಕ್ಕೆ ಮುಂದೂಡಿದ Supreme Court

ಸ್ಪರ್ಧಾತ್ಮಕ ಕಾನೂನು ಉಲ್ಲಂಘನೆ ಆರೋಪದಲ್ಲಿ ಅಮೆಜಾನ್‌ ಹಾಗೂ ಫ್ಲಿಪ್‌ ಕಾರ್ಟ್‌ ವಿರುದ್ಧ ಭಾರತದ ಸ್ಪರ್ಧಾತ್ಮಕ ಆಯೋಗಕ್ಕೆ (ಸಿಸಿಐ) ತನಿಖೆಯನ್ನು ಮುಂದುವರಿಸುವ ಪ್ರಕರಣವನ್ನು ಸುಪ್ರೀಂಕೋರ್ಟ್‌ ಆಗಸ್ಟ್ 9ಕ್ಕೆ ಮುಂದೂಡಿದೆ. ಕರ್ನಾಟಕದ ಹೈಕೋರ್ಟ್‌ ತನಿಖೆಗೆ ಅವಕಾಶ ನೀಡಿತ್ತು.

SC adjourns Amazon, Flipkart plea challenging Karnataka HC order on CCI probe
ಸ್ಪರ್ಧಾತ್ಮಕ ಕಾನೂನು ಉಲ್ಲಂಘನೆ ಆರೋಪ ಕೇಸ್; ಅಮೆಜಾನ್‌, ಫ್ಲಿಪ್‌ಕಾರ್ಟ್‌ ಅರ್ಜಿ ಆ.9ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

ನವದೆಹಲಿ: ಭಾರತೀಯ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 9ಕ್ಕೆ ಮುಂದೂಡಿದೆ. ಸ್ಪರ್ಧಾತ್ಮಕ ಕಾನೂನು ಉಲ್ಲಂಘನೆ ಆರೋಪದಲ್ಲಿ ಅಮೆಜಾನ್‌ ಹಾಗೂ ಫ್ಲಿಪ್​​​​ಕಾರ್ಟ್‌ ವಿರುದ್ಧ ಭಾರತದ ಸ್ಪರ್ಧಾತ್ಮಕ ಆಯೋಗಕ್ಕೆ (ಸಿಸಿಐ) ತನ್ನ ತನಿಖೆಯನ್ನು ಮುಂದುವರಿಸಲು ಕರ್ನಾಟಕದ ಹೈಕೋರ್ಟ್‌ ಅವಕಾಶ ನೀಡಿತ್ತು. ಇದನ್ನು ಪ್ರಶ್ನಿಸಿ ಎರಡೂ ಇ -ಕಾರ್ಮಸ್‌ ಸಂಸ್ಥೆಗಳು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದವು.

ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠವು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಕೋರಿಕೆಯ ಮೇರೆಗೆ ಪ್ರಕರಣವನ್ನು ಸೋಮವಾರಕ್ಕೆ ಮುಂದೂಡಿದೆ. ಆರಂಭದಲ್ಲಿ, ಎಸ್‌ಜಿ ಮೆಹ್ತಾ, ಪ್ರಕರಣದಲ್ಲಿ ಬಹಳ ದೊಡ್ಡ ಕಡತಗಳಿವೆ ಹೀಗಾಗಿ ವಿಚಾರಣೆ ಮುಂದೂಡುವಂತೆ ನ್ಯಾಯಪೀಠವನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಅದು ನಮಗೆ ಗೊತ್ತು. ನ್ಯಾಯಾಧೀಶರನ್ನು ಭಯಭೀತರನ್ನಾಗಿಸಲು ಬೃಹತ್ ದೊಡ್ಡ ದೊಡ್ಡ ಪ್ರಕರಣಗಳನ್ನು ದಾಖಲಿಸುವುದನ್ನು ನಾವು ಮೊದಲೇ ಗಮನಿಸಿದ್ದೇವೆ ಎಂದರು.

ನಾವು ಲಾರಿಗಳು ಮತ್ತು ಟ್ರಕ್‌ಗಳನ್ನು ಇಟ್ಟಿಕೊಳ್ಳಬೇಕು. ನಾವು ಪ್ರಕರಣವನ್ನು ಓದುವುದನ್ನು ಅವರು ಬಯಸುವುದಿಲ್ಲ ಎಂದಿದ್ದಾರೆ. ಎರಡು ವೆಬ್‌ಸೈಟ್‌ಗಳಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಸ್ಪರ್ಧಾತ್ಮಕ ಕಾನೂನು ಉಲ್ಲಂಘನೆ ಆರೋಪದ ಮೇಲೆ ಸಿಸಿಐಗೆ ಅಮೆಜಾನ್ ಇಂಡಿಯಾ ಮತ್ತು ವಾಲ್‌ಮಾರ್ಟ್ ಒಡೆತನದ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ವಿರುದ್ಧ ತನಿಖೆ ನಡೆಸಲು ಕರ್ನಾಟಕದ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ಅಮೆಜಾನ್‌ ದಿಗ್ವಿಜಯ ; ರಿಲಯನ್ಸ್‌ ಇಂಡಸ್ಟ್ರೀಸ್‌, ಫ್ಯೂಚರ್‌ ಗ್ರೂಪ್‌ ಸ್ವತ್ತುಗಳ ಖರೀದಿಗೆ ಸುಪ್ರೀಂಕೋರ್ಟ್‌ ತಡೆ

ಸಿಸಿಐ ತನಿಖೆಯನ್ನು ರದ್ದುಗೊಳಿಸುವ ಇ-ಕಾಮರ್ಸ್ ಸಂಸ್ಥೆಗಳ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ, ಎರಡೂ ಸಂಸ್ಥೆಗಳು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದವು. ದೆಹಲಿ ವ್ಯಾಪರ್ ಮಹಾಸಂಘದ ದೂರಿನ ಮೇರೆಗೆ ಹೈಕೋರ್ಟ್‌ ಈ ಆದೇಶ ನೀಡಿತ್ತು.

2020ರ ಜನವರಿ 13 ರಂದು ನ್ಯಾಯಯುತ ವ್ಯಾಪಾರ ನಿಯಂತ್ರಕ-ಸಿಸಿಐ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ವಿರುದ್ಧ ತನಿಖೆಗೆ ಆದೇಶಿಸಿತ್ತು. ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಆದ್ಯತೆಯ ಮಾರಾಟಗಾರರೊಂದಿಗೆ ಹೆಚ್ಚಿನ ರಿಯಾಯಿತಿ ಮತ್ತು ಟೈ-ಅಪ್‌ಗಳು ಸೇರಿದಂತೆ ಆಪಾದಿತ ದುಷ್ಕೃತ್ಯಗಳ ಆರೋಪ ಕೇಳಿಬಂದಿತ್ತು. ಸಿಸಿಐ ಆದೇಶದ ನಂತರ ಎರಡೂ ಕಂಪನಿಗಳು ತನಿಖಾ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದವು. ಇ-ಕಾಮರ್ಸ್ ಸಂಸ್ಥೆಗಳು ಉಲ್ಲಂಘನೆಯಲ್ಲಿ ಭಾಗಿಯಾಗದಿದ್ದರೆ ತನಿಖೆಯಿಂದ ಹಿಂದೆ ಸರಿಯುವ ಅಗತ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.

ABOUT THE AUTHOR

...view details