ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಎಟಿಎಂ ನಗದು ಹಿಂಪಡೆಯುವ ನಿಯಮಗಳನ್ನು ಶುಕ್ರವಾರ ಪರಿಷ್ಕರಿಸಿದೆ.
ಹೊಸ ಮಾನದಂಡಗಳ ಪ್ರಕಾರ, ಅಕೌಂಟಿನಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ವ್ಯವಹಾರ ವಿಫಲವಾದಾಗ ಬ್ಯಾಂಕ್ ತನ್ನ ಕಾರ್ಡ್‌ದಾರರಿಗೆ ಶುಲ್ಕ ವಿಧಿಸುತ್ತದೆ. ಎಸ್‌ಬಿಐ ವೆಬ್‌ಸೈಟ್‌ನ ಪ್ರಕಾರ, ವಿಫಲ ವಹಿವಾಟಿನ ಶುಲ್ಕ 20 ರೂ. ಜೊತೆಗೆ ಜಿಎಸ್‌ಟಿ ಸೇರಿರುತ್ತದೆ
ಹಣಕಾಸಿನೇತರ ವಹಿವಾಟುಗಳಿಗೆ ಗ್ರಾಹಕರ ಮೇಲೆ ಲೆವಿ ಶುಲ್ಕ ವಿಧಿಸುವುದಾಗಿ ಎಸ್‌ಬಿಐ ತನ್ನ ಹೊಸ ನಿಯಮಗಳಲ್ಲಿ ತಿಳಿಸಿದೆ. ಗ್ರಾಹಕರಿಗೆ ನಿಗದಿತ ಮಿತಿ ಮೀರಿದ ಯಾವುದೇ ಹೆಚ್ಚುವರಿ ಹಣಕಾಸು ವಹಿವಾಟುಗಳಿಗೆ 10 ರೂ. ಜೊತೆಗೆ ಜಿಎಸ್‌ಟಿ 20 ರೂ. ಮತ್ತು ಜಿಎಸ್‌ಟಿ ವಿಧಿಸಲಾಗುತ್ತದೆ.
ಪ್ರಸ್ತುತ, ಎಸ್‌ಬಿಐ ತನ್ನ ಕಾರ್ಡ್‌ದಾರರಿಗೆ ಮೆಟ್ರೋ ನಗರಗಳಲ್ಲಿ ಒಂದು ತಿಂಗಳಲ್ಲಿ ಎಟಿಎಂಗಳಿಂದ ಎಂಟು ಬಾರಿ ಉಚಿತ ಹಣ ಹಿಂಪಡೆಯಲು ಅವಕಾಶ ನೀಡುತ್ತದೆ. ಇದು 5 ಎಸ್‌ಬಿಐ ಎಟಿಎಂ ಮತ್ತು 3 ಎಸ್‌ಬಿಐಯೇತರ ಎಟಿಎಂಗಳಿಗೆ ಅನ್ವಯಿಸುತ್ತದೆ. ಎಸ್‌ಬಿಐ ಕಾರ್ಡ್‌ದಾರರು ಎಸ್‌ಬಿಐ ಎಟಿಎಂಗಳಿಂದ 10,000 ರೂ.ಗಿಂತ ಹೆಚ್ಚಿನ ಮೊತ್ತ ಹಿಂಪಡೆಯಬಹುದು. ಆದರೆ ಇದಕ್ಕೆ ಒನ್-ಟೈಮ್ ಪಾಸ್‌ವರ್ಡ್ (ಒಟಿಪಿ) ಅಗತ್ಯವಿದೆ.
ಇದನ್ನೂ ಓದಿ: ಅನ್ನದಾತರ ಶಾಂತಿಯುತ ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿ ಅಡಗಿದೆ: ರಾಹುಲ್ ಗಾಂಧಿ
ಪ್ರತಿ ಬಾರಿ ಎಸ್‌ಬಿಐ ಗ್ರಾಹಕರು 10,000 ರೂ.ಗಿಂತ ಹೆಚ್ಚಿನ ಮೊತ್ತ ಹಿಂಪಡೆಯಲು ಪ್ರಯತ್ನಿಸಿದಾಗ, ಅವರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಸ್ವೀಕರಿಸುತ್ತಾರೆ. ಅದನ್ನು ಅವರು ವ್ಯವಹಾರ ಪೂರ್ಣಗೊಳಿಸಲು ನಮೂದಿಸಬೇಕು.
ಎಸ್‌ಬಿಐ ಗ್ರಾಹಕರು ಈಗ ತಮ್ಮ ಫೋನ್‌ಗಳನ್ನು ಬಳಸಿ ತಮ್ಮ ಖಾತೆಯ ಬಾಕಿ ಮೊತ್ತ ಪರಿಶೀಲಿಸಬಹುದು. ಇದಕ್ಕೆ ಎರಡು ಮಾರ್ಗಗಳಿವೆ, ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9223766666ಗೆ ಎಸ್‌ಎಂಎಸ್ ಬ್ಯಾಲೆನ್ಸ್ ಎಂದು ಕಳುಹಿಸಬಹುದು ಅಥವಾ ಟೋಲ್-ಫ್ರೀ ಬ್ಯಾಲೆನ್ಸ್ ವಿಚಾರಣಾ ಸಂಖ್ಯೆ 9223766666ಗೆ ಮಿಸ್ಡ್ ಕಾಲ್ ಕೊಡಬಹುದು.