ನವದೆಹಲಿ :ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸ್ಲ್ಯಾಬ್ನಲ್ಲಿ ಬ್ಯಾಕ್ಟೀರಿಯಾ ನಿವಾರಕ ಸ್ಯಾನಿಟೈಸರ್, ಸೋಪು, ಡೆಟಾಲ್ನಂತಹ ಉತ್ಪನ್ನಗಳು ಶೇ.18ರಷ್ಟು ತೆರಿಗೆ ಆಕರ್ಷಿಸಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಹ್ಯಾಂಡ್ ಸ್ಯಾನಿಟೈಸರ್ ತಯಾರಿಕೆಯಲ್ಲಿ ಬಳಸುವ ವಿವಿಧ ರಾಸಾಯನಿಕಗಳು, ಪ್ಯಾಕಿಂಗ್ ಸಾಮಗ್ರಿಗಳು ಮತ್ತು ಇನ್‌ಪುಟ್ ಸೇವೆಗಳು ಸಹ ಶೇ.18ರಷ್ಟು ಜಿಎಸ್‌ಟಿ ಆಕರ್ಷಿಸುತ್ತವೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಯಾನಿಟೈಸರ್, ಸೋಪು, ಡೆಟಾಲ್ನಂತಹ ಉತ್ಪನ್ನಗಳಿಗೆ ಶೇ.18% ಜಿಎಸ್‌ಟಿ - ಆತ್ಮನಿರ್ಭರ ಭಾರತ
ಸ್ಯಾನಿಟೈಸರ್‌ಗಳ ಮತ್ತು ಇತರೆ ವಸ್ತುಗಳ ಮೇಲಿನ ಜಿಎಸ್‌ಟಿ ಸ್ಲ್ಯಾಬ್ ದರ ಕಡಿಮೆ ಮಾಡುವುದರಿಂದ ಕೆಳಮುಖವಾದ ತೆರಿಗೆ ರಚನೆಗೆ ಕಾರಣವಾಗುತ್ತದೆ. ದೇಶಿಯ ತಯಾರಕ ಹ್ಯಾಂಡ್ಸ್ಯಾನಿಟೈಸರ್ ಆಮದುದಾರರಿಗೆ ತೊಂದರೆ ಆಗಬಹುದು ಎಂದು ಸಚಿವಾಲಯ ತಿಳಿಸಿದೆ..
![ಸ್ಯಾನಿಟೈಸರ್, ಸೋಪು, ಡೆಟಾಲ್ನಂತಹ ಉತ್ಪನ್ನಗಳಿಗೆ ಶೇ.18% ಜಿಎಸ್‌ಟಿ Sanitizers](https://etvbharatimages.akamaized.net/etvbharat/prod-images/768-512-8040979-thumbnail-3x2-sanitizers.jpg)
ಸ್ಯಾನಿಟೈಸರ್ ಸೋಪುಗಳು, ಬ್ಯಾಕ್ಟೀರಿಯಾ ನಿಯಂತ್ರಣಕ ದ್ರವಗಳು, ಡೆಟಾಲ್ ಸೇರಿ ಇತರೆ ಸೋಂಕು ನಿವಾರಕಗಳೆಲ್ಲವೂ ಜಿಎಸ್‌ಟಿಯಲ್ಲಿ ಶೇ.18ರಷ್ಟು ಸ್ಲ್ಯಾಬ್ ದರ ನಿಗದಿಪಡಿಸಬಹುದು ಎಂದಿದೆ. ಸ್ಯಾನಿಟೈಸರ್‌ಗಳ ಮತ್ತು ಇತರೆ ವಸ್ತುಗಳ ಮೇಲಿನ ಜಿಎಸ್‌ಟಿ ಸ್ಲ್ಯಾಬ್ ದರ ಕಡಿಮೆ ಮಾಡುವುದರಿಂದ ಕೆಳಮುಖವಾದ ತೆರಿಗೆ ರಚನೆಗೆ ಕಾರಣವಾಗುತ್ತದೆ. ದೇಶಿಯ ತಯಾರಕ ಹ್ಯಾಂಡ್ಸ್ಯಾನಿಟೈಸರ್ ಆಮದುದಾರರಿಗೆ ತೊಂದರೆ ಆಗಬಹುದು ಎಂದು ಸಚಿವಾಲಯ ತಿಳಿಸಿದೆ.
ಜಿಎಸ್‌ಟಿ ಸ್ಲ್ಯಾಬ್ ದರ ಕಡಿಮೆ ಮಾಡಿದರೇ ಸ್ಯಾನಿಟೈಸರ್‌ಗಳನ್ನು ಆಮದು ಮಾಡಿಕೊಳ್ಳುವುದು ಅಗ್ಗವಾಗುತ್ತದೆ. ಕಚ್ಚಾ ಸಾಮಗ್ರಿಗಳಿಗೆ ಅಂತಿಮ ಉತ್ಪನ್ನಕ್ಕಿಂತ ಹೆಚ್ಚಿನ ತೆರಿಗೆ ವಿಧಿಸಿದ್ರೆ ದೇಶೀಯ ಉದ್ಯಮಕ್ಕೆ ಅನಾನುಕೂಲವಾಗುತ್ತದೆ ಎಂದು ತಾರ್ಕಿಕವಾಗಿ ವಿವರಿಸಿದೆ. ಕಡಿಮೆ ಜಿಎಸ್‌ಟಿ ಸ್ಲ್ಯಾಬ್ ದರಗಳು ಆಮದುಗಳನ್ನು ಅಗ್ಗವಾಗಿಸಲು ನೆರವಾಗಲಿದೆ. ಇದು 'ಆತ್ಮನಿರ್ಭಾರ್ ಭಾರತ' ನೀತಿಗೆ ವಿರುದ್ಧವಾಗಿದೆ. ಕೆಳಮುಖದ ಕಥೆಗೆ ರಚನೆಯ ಕಾರಣದಿಂದಾಗಿ ದೇಶೀಯ ಉತ್ಪಾದನೆ ಬಳಲುತ್ತಿದ್ದರೆ ಗ್ರಾಹಕರು ಕಡಿಮೆ ಜಿಎಸ್‌ಟಿ ದರದಿಂದ ಪ್ರಯೋಜನ ಪಡೆಯುವುದಿಲ್ಲ ಎಂದು ಹೇಳಿದೆ.