ಕರ್ನಾಟಕ

karnataka

ETV Bharat / business

ಕೊರೊನಾ ವೇಳೆ ಪ್ರಾಣ ಪಣಕ್ಕಿಟ್ಟು ಅನ್ನ ಕೊಟ್ಟ ರೈತರನ್ನು ವಿತ್ತ ಸಚಿವಾಲಯ ಕ್ರೂರ ತಮಾಷೆ ಮಾಡಿದೆ: ಬಾದಲ್ - ರೈತರಿಗೆ ಪ್ಯಾಕೇಜ್ ನೀಡುವಂತೆ ಶಿರೋಮಣಿ ಅಕಾಲಿ ದಳ ಮನವಿ

ಸಾಂಕ್ರಾಮಿಕ ಸಮಯದಲ್ಲಿ ರಾಷ್ಟ್ರಕ್ಕೆ ಆಹಾರವನ್ನು ಪೂರೈಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿರುವ 'ಅನ್ನದಾತನ' ಮೇಲೆ ಹಣಕಾಸು ಸಚಿವಾಲಯವು ಕ್ರೂರ ತಮಾಷೆ ಮಾಡಿದೆ ಎಂದು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಆರೋಪಿಸಿದರು.

Badal
ಬಾದಲ್

By

Published : Oct 31, 2020, 10:21 PM IST

ಚಂಡೀಗಢ: ರೈತರಿಗೆ ಸಮಗ್ರ ಪರಿಹಾರ ಪ್ಯಾಕೇಜ್ ನೀಡುವಂತೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಒತ್ತಾಯಿಸಿದ್ದಾರೆ.

ಆರು ತಿಂಗಳ ನಿಷೇಧಿತ ಅವಧಿಯಲ್ಲಿ ಸಾಲಗಾರರ ಚಕ್ರ ಬಡ್ಡಿ ಮತ್ತು ಸರಳ ಬಡ್ಡ ನಡುವಿನ ವ್ಯತ್ಯಾಸ ಎಕ್ಸ್​ಗ್ರೇಷ್​ ಪಾವತಿ ಒದಗಿಸಲು ಕೇಂದ್ರದ ಯೋಜನಾ ವ್ಯಾಪ್ತಿಯಲ್ಲಿ ಕೃಷಿ ಸಮುದಾಯ ಸೇರಿಸದಿರುವ ಬಗ್ಗೆ ಬಾದಲ್ ಅಸಾಮಾಧಾನ ವ್ಯಕ್ತಪಡಿಸಿದರು.

ವಿತ್ತೀಯ ನೀತಿ ನಿರೂಪಕರು ಕೃಷಿ ಕ್ಷೇತ್ರದ ಸಂಪರ್ಕದಿಂದ ಹೊರಗುಳಿದಿದ್ದರೆ. ಭಾರತೀಯ ಪ್ರಜಾಪ್ರಭುತ್ವಕ್ಕೆ ಇದು ದುಃಖದ ದಿನವಾಗಿದೆ. ರೈತರು ಕೋವಿಡ್​-19 ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ. ಸಾವಿರಾರು ಟನ್ ಹಣ್ಣು ಮತ್ತು ತರಕಾರಿಗಳು ಹೊಲಗಳಲ್ಲಿ ಸುರಿಯುತ್ತಿದ್ದಾರೆ. ರೈತರು ತಮ್ಮ ಉತ್ಪನ್ನಗಳನ್ನು ತಿಂಗಳುಗಟ್ಟಲೆ ಮಾರಾಟ ಮಾಡಲು ಸಾಧ್ಯವಾಗದ ಕಾರಣ ಭಾರಿ ನಷ್ಟ ಅನುಭವಿಸಿದರು. ವ್ಯವಸಾಯ ಮತ್ತು ಡೈರಿ ಕೃಷಿಯಂತಹ ಸಂಬಂಧಿತ ಚಟುವಟಿಕೆ ನಡೆಸುವ ಪ್ರತಿಯೊಬ್ಬರೂ ಹಣ ಕಳೆದುಕೊಂಡರು. ಕಾರ್ಮಿಕರಿಗೆ ದುಪ್ಪಟ್ಟು ಕೂಲಿ ಪಾವತಿಸಬೇಕಾಗಿರುವುದರಿಂದ ಪಂಜಾಬ್‌ನ ಭತ್ತದ ಬೆಳೆಗಾರರು ಸಹ ಭಾರಿ ನಷ್ಟ ಅನುಭವಿಸಿದ್ದಾರೆ ಎಂದು ಸುಖ್ಬೀರ್ ಹೇಳಿದರು.

ರೈತರು ತಮ್ಮ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವುದು ಮತ್ತು ಟ್ರಾಕ್ಟರ್ ಸಾಲಗಳ ಮೇಲಿನ ಬಡ್ಡಿ ಮನ್ನಾ ಮತ್ತು ಇತರ ಸಂಬಂಧಿತ ಚಟುವಟಿಕೆಗಳಿಗೆ ತೆಗೆದುಕೊಂಡ ಸಾಲಗಳ ಮನ್ನಾದ ಎದುರುನೋಡುತ್ತಿದ್ದಾರೆ. ಚಕ್ರ ಬಡ್ಡಿಯಿಂದ ಅವರನ್ನು ರಕ್ಷಿಸಲು ಕೇಂದ್ರ ಸರ್ಕಾರ ಸಹ ಸಿದ್ಧವಾಗಿಲ್ಲ ಎಂಬುದು ಆಘಾತಕಾರಿ. ಸಾಂಕ್ರಾಮಿಕ ಸಮಯದಲ್ಲಿ ರಾಷ್ಟ್ರಕ್ಕೆ ಆಹಾರವನ್ನು ಪೂರೈಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿರುವ 'ಅನ್ನದಾತನ' ಮೇಲೆ ಹಣಕಾಸು ಸಚಿವಾಲಯವು ಕ್ರೂರ ತಮಾಷೆ ಮಾಡಿದೆ ಎಂದು ಆರೋಪಿಸಿದರು.

For All Latest Updates

ABOUT THE AUTHOR

...view details