ಮುಂಬೈ:ಜಾಗತಿಕ ಮಾರುಕಟ್ಟೆಯ ದಿನದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 74.12 ಇಷ್ಟಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ದೇಶೀಯ ಘಟಕವು ಯುಎಸ್ ಡಾಲರ್ ವಿರುದ್ಧ ಆರಂಭಿಕ ವ್ಯಾಪಾರದಲ್ಲಿ 74.12 ರೂ. ನಿಂದ ಆರಂಭವಾಗಿ ಸ್ಥಳೀಯವಾಗಿ ಅಮೆರಿಕನ್ ಕರೆನ್ಸಿಯ ವಿರುದ್ಧ 74.17 ರೂ. ಮುಟ್ಟಿತು. ಶುಕ್ರವಾರ, ಸ್ಥಳೀಯ ಘಟಕವು ಗ್ರೀನ್‌ಬ್ಯಾಕ್ ವಿರುದ್ಧ 74.16 ಕ್ಕೆ ಇಳಿಯಿತು.
ಜಾಗತಿಕವಾಗಿ ರೂಪಾಯಿ ಮೌಲ್ಯ ಹೆಚ್ಚಾಗಲಿದೆ ಎಂಬ ಆಶಾಭಾವನೆ ಇದೆ. ಕೋವಿಡ್ ವ್ಯಾಕ್ಸಿನ್ ಪರಿಣಾಮಕಾರಿ ಎಂದು ಸಾಬೀತಾಗಿದ್ದು, ಪ್ರಾಯೋಗಿಕ ಹಂತದಲ್ಲಿವೆ. ಆ ಲಸಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಾದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಹಣದ ಮೌಲ್ಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಐಎಫ್‌ಎ ಗ್ಲೋಬಲ್ ಸಂಸ್ಥಾಪಕ ಮತ್ತು ಸಿಇಒ ಅಭಿಷೇಕ್ ಗೋಯೆಂಕಾ ಹೇಳಿದರು.