ಮುಂಬೈ: ಏಷ್ಯಾ ರಾಷ್ಟ್ರಗಳಲ್ಲಿ ಭಾರತೀಯ ಕರೆನ್ಸಿ ರೂಪಾಯಿ ಆಗಸ್ಟ್ ತಿಂಗಳ 5 ಮತ್ತು 13ರ ನಡುವೆ ಅತ್ಯಂತ ಕೆಟ್ಟ ಪ್ರದರ್ಶ ತೋರಿದೆ.
ದೇಶಿ ಕರೆನ್ಸಿ ಆಗಸ್ಟ್ 5- 13ರ ನಡುವೆ ತನ್ನ ಮೌಲ್ಯದಲ್ಲಿ ಶೇ 3.2ರಷ್ಟು ಅಥವಾ 222 ಪೈಸೆಯಷ್ಟು ಕಳೆದುಕೊಂಡಿದೆ. ಕಳೆದ ಮಂಗಳವಾರದ ಫಾರೆಕ್ಸ್ ಮಾರುಕಟ್ಟೆಯಲ್ಲಿ ರೂಪಾಯಿ ಡಾಲರ್ ವಿರುದ್ಧ ₹ 71.4ಕ್ಕೆ ತಲಿಪಿದ್ದು, ಈ ಹಿಂದಿನ ಆರು ತಿಂಗಳಲ್ಲಿನ ಕನಿಷ್ಠ ಮೌಲ್ಯದಾಗಿದೆ. ಕಚ್ಚಾ ತೈಲ ಬೆಲೆ ಕುಸಿತ ಮತ್ತು ದೇಶಿ ಈಕ್ವಿಟಿ ಮಾರುಕಟ್ಟೆಯ ಸಕರಾತ್ಮಕ ಪ್ರಭಾವದಿಂದಾಗಿ ಬುಧವಾರದ ಸಾಗರೋತ್ತರ ಕರೆನ್ಸಿ ಮಾರುಕಟ್ಟೆಯಲ್ಲಿ 12 ಪೈಸೆಯಷ್ಟು ಚೇತರಿಕೆ ಕಂಡು ₹ 71.28ರಲ್ಲಿ ಮುಕ್ತಾಯ ಕಂಡಿದೆ.
ವಾಣಿಜ್ಯ ಸಮರಕ್ಕೆ ಸಲುಕಿರುವ ಚೀನಾ- ಅಮೆರಿಕ ಇತ್ತೀಚಿನ ಬೆಳವಣಿಗೆಯಿಂದ ಚೀನಾದ ಮೇಲೆ ಟ್ರಂಪ್ ಘೋಷಿಸಿದ್ದ ಹೆಚ್ಚುವರಿ ಶೇ 10ರಷ್ಟು ಸುಂಕ ಜಾರಿಯನ್ನು ಡಿಸೆಂಬರ್ 15ರ ವರೆಗೆ ಮುಂದೂಡಲಾಗಿದೆ. ಚೀನಾದ ಆರ್ಥಿಕತೆಯ ಮಂದಗತಿಯಲ್ಲಿ ಸಾಗುತ್ತಿದ್ದು, ಕೈಗಾರಿಕಾ ಉತ್ಪನ್ನ ವಲಯಗಳಲ್ಲಿನ ತಯಾರಿಕ ಘಟಕಗಳು 17 ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿವೆ. ಹೀಗಾಗಿ, ಇದರ ಪರಿಣಾಮ ಏಷ್ಯಾ ರಾಷ್ಟ್ರಗಳು ಮತ್ತು ಜಾಗತಿಕ ಮಾರುಕಟ್ಟೆಗಳ ಮೇಲೆ ಬೀರಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಭಾರತದ ರೂಪಾಯಿ ಡಾಲರ್ ವಿರುದ್ಧ ಶೇ (-) 3.8ರಷ್ಟು ಮೌಲ್ಯ ಕಳೆದುಕೊಂಡಿದೆ. ಇತರ ರಾಷ್ಟ್ರಗಳಾದ ದಕ್ಷಿಣ ಕೊರಿಯಾದ ಕರೆನ್ಸಿ ಶೇ (-) 2.7, ಫಿಲಿಫೀನ್ಸ್ನ ಕರೆನ್ಸಿ ಶೇ (-) 2.5 ಮತ್ತು ಚೀನಾದ ಕರೆನ್ಸಿ ಶೇ (-) 2.4ರಷ್ಟು ಮೌಲ್ಯ ಕ್ಷೀಣಿಸಿದೆ.