ಕರ್ನಾಟಕ

karnataka

ETV Bharat / business

'ಸರ್ಕಾರಿ ಬ್ಯಾಂಕ್​ ಖಾಸಗೀಕರಣವಾದರೆ ಜನರ 80 ಲಕ್ಷ ಕೋಟಿ ರೂ.ಗೆ ಅಪಾಯ' - ಬ್ಯಾಂಕ್ ಮುಷ್ಕರ

ಜನ್​ ಧನ್ ಯೋಜನೆಯ ಅನುಷ್ಠಾನದಲ್ಲಿ ಖಾಸಗಿ ವಲಯದ ಬ್ಯಾಂಕ್​ಗಳ ಪಾಲು ಶೇ 5ಕ್ಕಿಂತ ಕಡಿಮೆ ಇದೆ. ಮುದ್ರಾ, ಸ್ವಧಾನ್, ಸ್ಟ್ಯಾಂಡ್ ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಇತರ ಯೋಜನೆಗಳಿಗೆ ಅವರ ಪಾಲು ಅತ್ಯಲ್ಪವಾಗಿದೆ. ಜನ ಸಾಮಾನ್ಯರನ್ನು ಬ್ಯಾಂಕಿಂಗ್ ವಲಯದಿಂದ ಹೊರಗೆ ತಳ್ಳಲಾಗುತ್ತದೆ. ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ನಿಭಾಯಿಸಲಾಗದು. ಒಟ್ಟಾರೆಯಾಗಿ ಜನರ 80 ಲಕ್ಷ ಕೋಟಿ ರೂ. ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕಿಂಗ್ ಯೂನಿಯನ್​ ಆರೋಪಿಸಿದೆ.

Bank
Bank

By

Published : Feb 25, 2021, 9:35 PM IST

ಮುಂಬೈ:ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್​ಗಳನ್ನು (ಪಿಎಸ್‌ಬಿ) ಖಾಸಗೀಕರಣಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಯನ್ನು ತೀವ್ರವಾಗಿ ವಿರೋಧಿಸಿರುವ ಯುನೈಟೆಡ್ ಫೋರಂ ಆಫ್ ಬ್ಯಾಂಕಿಂಗ್ ಯೂನಿಯನ್​, 'ಒಂದು ವೇಳೆ ಉದ್ದೇಶಿತ ಯೋಜನೆ ಅನುಷ್ಠಾನಗೊಂಡರೆ ಜನರಿಗೆ ಸೇರಿದ 80 ಲಕ್ಷ ಕೋಟಿ ರೂ. ಸಂಪತ್ತು ಅಪಾಯಕ್ಕೆ ಸಿಲುಕಲಿದೆ' ಎಂದು ಹೇಳಿದೆ.

ಸಾಮಾಜಿಕ ಲಾಭದತ್ತ ಶ್ರಮಿಸುವ ಪಿಎಸ್‌ಬಿಗಳಿಗೆ ಹೋಲಿಸಿದರೆ, ಖಾಸಗಿ ವಲಯದ ಬ್ಯಾಂಕ್​ಗಳು ಲೆಕ್ಕಪರಿಶೋಧಕ ಲಾಭಗಳಿಗಾಗಿ ಕೆಲಸ ಮಾಡುತ್ತವೆ. ಈ ಕ್ರಮವು ತೀವ್ರ ಪ್ರತಿರೋಧಕವಾಗಿದೆ ಎಂದು ಯುಎಫ್‌ಬಿಯು ಕನ್ವೀನರ್ ದೇವಿದಾಸ್ ತುಳಜಾಪುರಕರ ಹೇಳಿದ್ದಾರೆ.

ಪಿಎಸ್‌ಬಿಗಳನ್ನು ಖಾಸಗೀಕರಣಗೊಳಿಸುವ ಕ್ರಮವನ್ನು ಪ್ರತಿಭಟಿಸಲು ಯುಎಫ್‌ಬಿಯು ಮಾರ್ಚ್ 15 ಮತ್ತು 16ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದೆ ಎಂದರು.

ಭಾರತದಲ್ಲಿ ಜನರು ಈಗಲೂ ಬಡತನ, ನಿರುದ್ಯೋಗ, ಹಸಿವಿನಿಂದ ಬಳಲುತ್ತಿದ್ದಾರೆ. ತೀವ್ರ ಆರ್ಥಿಕ ಅಸಮಾನತೆ ಮತ್ತು ಭೌಗೋಳಿಕ ಅಸಮತೋಲನ ಕಂಡುಬರುತ್ತಿದೆ. ಸಾಮಾಜಿಕ ವಲಯದ ಸಾಲ ಯೋಜನೆಗಳನ್ನು ಜಾರಿಗೆ ತರುವ ಅವಶ್ಯಕತೆಯಿದೆ. ಇದರಲ್ಲಿ ಖಾಸಗಿ ವಲಯದ ಬ್ಯಾಂಕ್​ಗಳು ಅಷ್ಟೇನೂ ಕೊಡುಗೆ ನೀಡುವುದಿಲ್ಲ ಎಂದು ಹೇಳಿದರು.

ಜನ್​ ಧನ್ ಯೋಜನೆಯ ಅನುಷ್ಠಾನದಲ್ಲಿ ಖಾಸಗಿ ವಲಯದ ಬ್ಯಾಂಕ್​ಗಳ ಪಾಲು ಶೇ 5ಕ್ಕಿಂತ ಕಡಿಮೆ ಇದೆ. ಮುದ್ರಾ, ಸ್ವಧಾನ್, ಸ್ಟ್ಯಾಂಡ್ ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಇತರ ಯೋಜನೆಗಳಿಗೆ ಅವರ ಪಾಲು ಅತ್ಯಲ್ಪವಾಗಿದೆ. ಜನ ಸಾಮಾನ್ಯರನ್ನು ಬ್ಯಾಂಕಿಂಗ್ ವಲಯದಿಂದ ಹೊರಗೆ ತಳ್ಳಲಾಗುತ್ತದೆ. ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ನಿಭಾಯಿಸಲಾಗದು. ಒಟ್ಟಾರೆಯಾಗಿ ಜನರ 80 ಲಕ್ಷ ಕೋಟಿ ರೂ. ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಮುಖೇಶ್​ ಅಂಬಾನಿ ಮನೆ ಬಳಿ ಕಾರಿನಲ್ಲಿ ಜಿಲೆಟಿನ್ ಪತ್ತೆ: ತನಿಖೆಗೆ ಆದೇಶ

ಭಾರತದ ಖಾಸಗಿ ವಲಯದ ಬ್ಯಾಂಕಿಂಗ್‌ನ ನೀರಸ ದಾಖಲೆ ಉಲ್ಲೇಖಿಸಿದ ಅವರು, ಅವರು ಕುಸಿದಾಗಲೆಲ್ಲಾ ಪಿಎಸ್‌ಬಿಗಳೇ ಅವರಿಗೆ ಜಾಮೀನು ನೀಡುತ್ತವೆ. ಯೆಸ್ ಬ್ಯಾಂಕ್ ಆಘಾತ ಹಾದಿಯಲ್ಲಿ ಇದ್ದಾಗ, ಸರ್ಕಾರ ಮಧ್ಯಪ್ರವೇಶಿಸಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅದಕ್ಕೆ ಜಾಮೀನು ನೀಡಿತು. ಇದಕ್ಕೂ ಮೊದಲು ಎಲ್‌ಐಸಿಯೊಂದಿಗೆ ಮತ್ತೊಂದು ಪ್ರಮುಖ ಖಾಸಗಿ ವಲಯದ ಎನ್‌ಬಿಎಫ್‌ಸಿ, ಐಎಲ್‌ಎಫ್‌ಎಸ್‌ಗೆ ಸಹಾಯ ಮಾಡಿತ್ತು ಎಂದು ದೇವಿದಾಸ್ ತಿಳಿಸಿದ್ದಾರೆ.

ಈ ಹಿಂದೆ ಹರ್ಷದ್ ಮೆಹ್ತಾ ಹಗರಣದೊಂದಿಗೆ ಕರಾಡ್ ಬ್ಯಾಂಕ್ ಕುಸಿದ ನಂತರ, ಬ್ಯಾಂಕ್ ಆಫ್ ಇಂಡಿಯಾ ಅದಕ್ಕೆ ಸಹಾಯ ಮಾಡಿತ್ತು. ಈ ನಂತರ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಕೇತನ್ ಪರೇಖ್ ಹಗರಣ ಹೊರಬರುತ್ತಿದಂತೆ ನೆಲಕಚ್ಚಿತ್ತು. ಅದಕ್ಕೆ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಸಹಾಯ ಮಾಡಿದೆ ಎಂದು ಹೇಳಿದರು.

ಇಂದು, ಭಾರತೀಯ ಬ್ಯಾಂಕ್​ಗಳ ಮುಂದಿರುವ ದೊಡ್ಡ ಸವಾಲು ಅನುತ್ಪಾದಕ ಆಸ್ತಿ. ಇದರಲ್ಲಿ ಕಾರ್ಪೊರೇಟ್ ವಲಯದ ಪಾಲು ಶೇ 70ಕ್ಕಿಂತ ಅತ್ಯಧಿಕವಾಗಿದೆ. ಈಗ ಅವರೆಲ್ಲ ಈ ಪಿಎಸ್‌ಬಿಗಳ ಮಾಲೀಕರಾಗಲು 'ಹಗಲುಗನಸು' ಕಾಣುತ್ತಿದ್ದಾರೆ. ಇದು ಅತ್ಯಂತ ದುರದೃಷ್ಟಕರ. ಪ್ರಧಾನಮಂತ್ರಿಗಳು ಇದನ್ನು ಸುಗಮಗೊಳಿಸುತ್ತಿದ್ದು, ಇದು ಜನಸಾಮಾನ್ಯರ ಉಳಿತಾಯಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು ಎಂದು ಕಿಡಿಕಾರಿದರು.

ABOUT THE AUTHOR

...view details